ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಅವರ ಪ್ರಶ್ನೆ
ಗೌಹತ್ತಿ (ಆಸ್ಸಾಂ) – ಇಂದು ಇಂದಿರಾ ಗಾಂಧಿ ಬದುಕಿದ್ದರೆ, ನಾನು ಅವರಿಗೆ 1971 ರ ಯುದ್ಧದ ನಂತರ ಪಾಕಿಸ್ತಾನವು ಮಂಡಿಯೂರಿತು, ಅದರ ಸೈನಿಕರು ಭಾರತೀಯ ಸೈನಿಕರ ಮುಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದರು. ಆಗ ನಾವು ಪಾಕಿಸ್ತಾನದ ಮೇಲೆ ಒತ್ತಡ ಹೇರಿ ಪಾಕ್ ಆಕ್ರಮಿತ ಕಾಶ್ಮೀರವನ್ನು ಏಕೆ ಮುಕ್ತಗೊಳಿಸಲಿಲ್ಲ?ಎಂದು ಕೇಳುತ್ತಿದ್ದೆನು. ನಮ್ಮ ನೆರೆಹೊರೆಯಲ್ಲಿ ನೀವು ಕಟ್ಟರವಾದಿ ಇಸ್ಲಾಮಿಕ್ ದೇಶವನ್ನು ರಚಿಸಲು ಏಕೆ ಅನುಮತಿಸಿದಿರಿ? ‘ಚಿಕನ್ ನೆಕ್’ (60 ಕಿಲೋಮೀಟರ್ ಉದ್ದ ಮತ್ತು 20 ಕಿಲೋಮೀಟರ್ ಅಗಲದ ಬಂಗಾಳದ ಪ್ರದೇಶ) ಬಗ್ಗೆ ಏಕೆ ಚರ್ಚಿಸಲಿಲ್ಲ? ಈಶಾನ್ಯ ಭಾರತದ ರಾಜ್ಯಗಳನ್ನು ಭಾರತದ ಮುಖ್ಯ ಭೂಮಿಗೆ ಸಂಪರ್ಕಿಸಲು ಆ ಸಮಯದಲ್ಲಿ ಕನಿಷ್ಠ 100 ಕಿಲೋಮೀಟರ್ ಭೂಮಿಯನ್ನು ತೆಗೆದುಕೊಳ್ಳಬಹುದಿತ್ತು, ಆ ಭೂಮಿಯನ್ನು ಏಕೆ ತೆಗೆದುಕೊಳ್ಳಲಿಲ್ಲ? ಎಂದು ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಸರಮಾ ಇಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದರು.
ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರು ಭಾರತದ ಮೇಲೆ ದಾಳಿ ಮಾಡಿದಾಗ ಕಾಂಗ್ರೆಸ್ ಏನು ಮಾಡಿತು ಎಂದು ಮುಖ್ಯಮಂತ್ರಿ ಸರಮಾ ಪ್ರಶ್ನಿಸಿದರು.