ಲಂಡನ್ (ಬ್ರಿಟನ್) – ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮದ ನಿರ್ಧಾರವನ್ನು ಬ್ರಿಟಿಷ್ ವಿದೇಶಾಂಗ ಸಚಿವ ಡೇವಿಡ್ ಲ್ಯಾಮಿ ಸ್ವಾಗತಿಸಿದ್ದಾರೆ. ಲ್ಯಾಮಿ ಅವರು, ‘ನಾನು ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ, 26 ಮುಗ್ಧ ಜನರ ಬರ್ಬರ ಹತ್ಯೆಯನ್ನು ನಾವು ನೋಡಿದಾಗ ಭಯೋತ್ಪಾದನೆಯು ಅತ್ಯಂತ ಭಯಾನಕವಾಗಿತ್ತು. ನಾವು ಅದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದರು. ಭಯೋತ್ಪಾದನೆಯ ಸವಾಲನ್ನು ಎದುರಿಸಲು ಭಾರತ ಮತ್ತು ಪಾಕಿಸ್ತಾನಕ್ಕೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ ಎಂದು ಲ್ಯಾಮಿ ಹೇಳಿದರು. ಕಾಶ್ಮೀರವು ಭಾರತ ಮತ್ತು ಪಾಕಿಸ್ತಾನದ ನಡುವಿನ ದ್ವಿಪಕ್ಷೀಯ ಅಂಶವಾಗಿದೆ ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವುಬ್ರಿಟನ್ನ ಪಾತ್ರ ಉತ್ತಮವಾಗಿದ್ದರೂ, ಅದು ಮೊದಲು ತನ್ನ ದೇಶದಲ್ಲಿ ಬೆಳೆಯುತ್ತಿರುವ ಇಸ್ಲಾಮಿ ಮತ್ತು ಖಲಿಸ್ತಾನಿ ಭಯೋತ್ಪಾದನೆಯನ್ನು ನಿಗ್ರಹಿಸಲು ಪ್ರಯತ್ನಿಸುವುದು ಅವಶ್ಯಕ! ಅಷ್ಟೇ ಮಾಡಿದರೆ, ಅದು ಕೇವಲ ಭಾರತಕ್ಕೆ ಮಾತ್ರವಲ್ಲ, ಅದಕ್ಕೂ ಒಳ್ಳೆಯದಾಗುತ್ತದೆ! |