ಅಮೃತಸರ (ಪಂಜಾಬ್) – ಇಲ್ಲಿನ ಮಜಿತಾದಲ್ಲಿ ವಿಷಪೂರಿತ ಮದ್ಯ ಸೇವಿಸಿದ 14 ಜನರು ಸಾವನ್ನಪ್ಪಿದ್ದಾರೆ, ಹಾಗೂ 6 ಜನರ ಸ್ಥಿತಿ ಗಂಭೀರವಾಗಿದ್ದು ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೆ 4 ಜನರನ್ನು ಬಂಧಿಸಲಾಗಿದೆ. ಪ್ರಮುಖ ಮದ್ಯ ಪೂರೈಕೆದಾರ ವ್ಯಕ್ತಿಯನ್ನು ಬಂಧಿಸಲಾಗಿದೆ.
ಸಂಪಾದಕೀಯ ನಿಲುವುದೇಶದಲ್ಲಿ ವಿಷಪೂರಿತ ಮದ್ಯ ತಯಾರಿಸಲಾಗುತ್ತಿದೆ ಮತ್ತು ಅದರಿಂದ ಅನೇಕ ಜನರ ಸಾವಾಗುತ್ತದೆ, ಹೀಗೆ ಹಲವು ಬಾರಿ ನಡೆದಿದೆ ಮತ್ತು ನಡೆಯುತ್ತಿದೆ. ಇದರ ವಿರುದ್ಧ ಯಾವುದೇ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳದ ಕಾರಣ, ಭವಿಷ್ಯದಲ್ಲಿಯೂ ಹೀಗೆ ನಡೆಯುತ್ತಾ ಇರುತ್ತದೆ, ಇದರಲ್ಲಿ ಸಂದೇಹವಿಲ್ಲ! ಇದು ಪೊಲೀಸರು ಮತ್ತು ಸರಕಾರಕ್ಕೆ ನಾಚಿಕೆಗೇಡಿನ ಸಂಗತಿ! |