Naxalites Encountered : ಛತ್ತೀಸ್‌ಗಢದಲ್ಲಿ ೩೧ ನಕ್ಸಲೀಯರು ಹತ: ೪೦೦ಕ್ಕೂ ಹೆಚ್ಚು ‘ಐಇಡಿ ಬಾಂಬ್‌’ಗಳು ವಶ !

ಈ ವರ್ಷ ಇದುವರೆಗೆ ೧೩೦ ನಕ್ಸಲೀಯರ ಹತ್ಯೆ !

ರಾಯ್‌ಪುರ (ಛತ್ತೀಸ್‌ಗಢ) – ಛತ್ತೀಸ್‌ಗಢದ ಕರ್ರೆಗುಟ್ಟ ಬೆಟ್ಟದಲ್ಲಿ ಇತ್ತೀಚೆಗೆ ನಡೆದ ಕಮ್ಯುನಿಸ್ಟ್ ಸಿದ್ಧಾಂತದ ಭಯೋತ್ಪಾದಕರೊಂದಿಗಿನ ಚಕಮಕಿಯಲ್ಲಿ ೩೧ ನಕ್ಸಲೀಯರು ಹತರಾಗಿದ್ದಾರೆ. ಪೊಲೀಸರು ಮತ್ತು ಭದ್ರತಾ ಪಡೆಗಳ ಸೈನಿಕರು ನಡೆಸಿದ ಕಾರ್ಯಾಚರಣೆಯಲ್ಲಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ೧೦ ಸಾವಿರ ಸೈನಿಕರು ಈ ಬೆಟ್ಟವನ್ನು ಸುತ್ತುವರೆದಿದ್ದಾರೆ. ಒಟ್ಟು ೩೫ ವಿವಿಧ ಕಾರ್ಯಾಚರಣೆಯಲ್ಲಿ ೩೧ ನಕ್ಸಲೀಯರನ್ನು ಕೊಲ್ಲಲಾಗಿದೆ.

೧. ಮೇ ೭ ರಂದು ಭದ್ರತಾ ಪಡೆಗಳು ೨೭ ನಕ್ಸಲೀಯರನ್ನು ಹತ್ಯೆ ಮಾಡಿದ್ದರೆ, ಕೆಲವು ದಿನಗಳ ಹಿಂದೆ ೪ ನಕ್ಸಲೀಯರನ್ನು ಹತ್ಯೆ ಮಾಡಲಾಗಿತ್ತು.

೨. ಈ ಕಾರ್ಯಾಚರಣೆಯಲ್ಲಿ, ಪೊಲೀಸರು ಕರಾರೆಗುಟ್ಟ ಬೆಟ್ಟದಿಂದ ೪೦೦ ಕ್ಕೂ ಹೆಚ್ಚು ‘ಐಇಡಿ ಬಾಂಬ್‌’ಗಳು ಮತ್ತು ೨ ಟನ್ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.

೩. ಈ ಹೋರಾಟದಲ್ಲಿ ಭದ್ರತಾ ಪಡೆಗಳ ಮೂವರು ಸೈನಿಕರು ಹುತಾತ್ಮರಾದರು. ಛತ್ತೀಸ್‌ಗಢ, ತೆಲಂಗಾಣ ಮತ್ತು ಮಹಾರಾಷ್ಟ್ರದ ಗಡಿಯ ಮೇಲಿರುವ ಈ ಬೆಟ್ಟ ಈಗ ಭದ್ರತಾ ಪಡೆಗಳ ವಶದಲ್ಲಿದೆ. ನಕ್ಸಲೀಯರು ಈ ಬೆಟ್ಟವನ್ನು ಅಡಗಿಕೊಳ್ಳಲು ಬಳಸುತ್ತಿದ್ದರು.

೪. ನಕ್ಸಲೀಯರನ್ನು ನಿರ್ನಾಮ ಮಾಡಲು ಗೃಹ ಸಚಿವ ಅಮಿತ್ ಶಹಾ ಅವರು ಭದ್ರತಾ ಪಡೆಗಳಿಗೆ ಮಾರ್ಚ್ ೩೧, ೨೦೨೬ ರವರೆಗೆ ಗಡುವು ನೀಡಿದ್ದಾರೆ.

೫. ವರದಿಯೊಂದರ ಪ್ರಕಾರ, ೨೦೨೫ ರಲ್ಲಿ ಛತ್ತೀಸ್‌ಗಢದಲ್ಲಿ ಇದುವರೆಗೆ ೧೩೦ ನಕ್ಸಲೀಯರು ಹತರಾಗಿದ್ದಾರೆ.

(ಐಇಡಿ ಬಾಂಬ್ ಎಂದರೆ ಸುಧಾರಿತ ಸ್ಫೋಟಕ ಸಾಧನ, ಅಂದರೆ ನಾಶದ ಉದ್ದೇಶಗಳಿಗಾಗಿ ತಯಾರಿಸಿದ ನಾಡು ಬಾಂಬ್. ಅಪರಾಧಿಗಳು, ಭಯೋತ್ಪಾದಕರು ಮತ್ತು ಬಂಡುಕೋರರು ಹಾನಿ, ವಿನಾಶ ಮತ್ತು ಭಯವನ್ನು ಸೃಷ್ಟಿಸಲು ಇಂತಹ ಸಾಧನಗಳನ್ನು ಬಳಸುತ್ತಾರೆ. ಇವು ಸಾಮಾನ್ಯ ಪೈಪ್ ಬಾಂಬ್‌ಗಳಿಂದ ಹಿಡಿದು ಅತ್ಯಂತ ಸಂಕೀರ್ಣ ಸಾಧನಗಳವರೆಗೆ ಯಾವುದೇ ಸ್ವರೂಪದಲ್ಲಿರಬಹುದು.)

ಸಂಪಾದಕೀಯ ನಿಲುವು

ಕಾಡಿನಲ್ಲಿ ಅಡಗಿ ಸಮಾಂತರ ಸರಕಾರ ನಡೆಸುತ್ತಿರುವ ನಕ್ಸಲೀಯರನ್ನು ನಾಶಪಡಿಸುವುದರೊಂದಿಗೆ, ನಗರ ನಕ್ಸಲೀಯರನ್ನು ಸಹ ಪತ್ತೆ ಮಾಡಿ ಅವರನ್ನು ಕೊಲ್ಲಲು ಸರಕಾರವು ಕಾರ್ಯತಂತ್ರವನ್ನು ರೂಪಿಸುವುದು ಅವಶ್ಯಕ!