Taliban Ban Chess Game : ತಾಲಿಬಾನ್‌ನಿಂದ ಚೆಸ್ ಆಟ ‘ಹರಾಮ್’ ಎಂದು ಘೋಷಣೆ !

(ಹರಾಮ್ ಎಂದರೆ ಇಸ್ಲಾಂಗೆ ನಿಷಿದ್ಧ)

ಕಾಬೂಲ್ (ಅಫ್ಘಾನಿಸ್ತಾನ) – ಅಫ್ಘಾನಿಸ್ತಾನದ ತಾಲಿಬಾನ್ ಸರಕಾರವು ಧಾರ್ಮಿಕ ಕಾರಣಗಳಿಗಾಗಿ ಚೆಸ್ ಆಟವನ್ನು ನಿಷೇಧಿಸಿದೆ. ಈ ನಿರ್ಧಾರದಿಂದ ಅಫ್ಘಾನಿಸ್ತಾನದಲ್ಲಿ ಚೆಸ್‌ಗೆ ಸಂಬಂಧಿತ ಎಲ್ಲಾ ಆಟಗಳ ಮೇಲೆ ಅನಿರ್ದಿಷ್ಟಾವಧಿಗೆ ತಡೆ ಬಿದ್ದಿದೆ. ‘ಖಾಮಾ ಪ್ರೆಸ್’ ವರದಿಯ ಪ್ರಕಾರ, ತಾಲಿಬಾನ್ ನೇತೃತ್ವದ ಕ್ರೀಡಾ ಸಚಿವಾಲಯವು ಚೆಸ್ ಫೆಡರೇಶನ್ ಅನ್ನು ಸಹ ವಿಸರ್ಜಿಸಿದೆ. ಇಸ್ಲಾಮಿಕ್ ಕಾನೂನಿನ ವ್ಯಾಖ್ಯಾನದ ಪ್ರಕಾರ ಈ ಆಟವನ್ನು ‘ಹರಾಮ್’ ಎಂದು ಘೋಷಿಸಲಾಗಿದೆ.

1. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಅಧಿಕಾರ ವಹಿಸಿಕೊಂಡ ನಂತರ, ಸಾಂಸ್ಕೃತಿಕ, ಸಾಮಾಜಿಕ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ಅನೇಕ ನಿರ್ಬಂಧಗಳನ್ನು ವಿಧಿಸಲಾಗಿದೆ.

2. ಚೆಸ್ ಆಟದ ಮೇಲಿನ ನಿಷೇಧವು ಅಫ್ಘಾನಿಸ್ತಾನದ ಸ್ವಾತಂತ್ರ್ಯದ ಮೇಲೆ ತಾಲಿಬಾನ್‌ನ ಹೆಚ್ಚುತ್ತಿರುವ ನಿರ್ಬಂಧಗಳ ಪ್ರತಿಬಿಂಬವಾಗಿದೆ.

3. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಹಿಳೆಯರ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದೆ. ತಾಲಿಬಾನ್ ಆರನೇ ತರಗತಿಗಿಂತ ಹೆಚ್ಚಿನ ಅಧ್ಯಯನಕ್ಕೆ ಶಾಲೆಗಳಲ್ಲಿ ಹುಡುಗಿಯರು ಶಿಕ್ಷಣ ಪಡೆಯುವುದನ್ನು ನಿಷೇಧಿಸಿದೆ. ಹುಡುಗಿಯರಿಗಾಗಿ ವಿಶ್ವವಿದ್ಯಾಲಯಗಳು ಮತ್ತು ವೈದ್ಯಕೀಯ ಶಿಕ್ಷಣ ಕೇಂದ್ರಗಳ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿದೆ.

4. ತಾಲಿಬಾನ್ ನಾಯಕ ಹಿಬತುಲ್ಲಾ ಅಖುಂದಜಾದಾ ಅವರು ಒಂಬತ್ತು ಅಂಶಗಳ ಆದೇಶಕ್ಕೆ ಸಹಿ ಹಾಕಿದ್ದಾರೆ, ಅದರಲ್ಲಿ ಎಲ್ಲಾ ಸಾರ್ವಜನಿಕ ಮತ್ತು ಖಾಸಗಿ ಶಾಲಾ ಸಮವಸ್ತ್ರಗಳನ್ನು ಬದಲಾಯಿಸಲಾಗಿದೆ.

ಸಂಪಾದಕೀಯ ನಿಲುವು

ತಾಲಿಬಾನ್ ಆಡಳಿತದಲ್ಲಿ ‘ಹರಾಮ್’ ಆಗಿರುವ ವಿಷಯಗಳ ಪಟ್ಟಿ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಬುದ್ಧಿಗೆ ಚಾಲನೆ ನೀಡುವ ಆಟವು ತಾಲಿಬಾನಿಗಳಿಗೆ ‘ಹರಾಮ್’ ಆಗಿದ್ದರೆ, ಮುಂಬರುವ ದಿನಗಳಲ್ಲಿ ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಮಧ್ಯಯುಗಕ್ಕೆ ಕೊಂಡೊಯ್ಯುವುದು ಖಚಿತ!