Terrorists And Their Masters Same : ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಪೋಷಿಸುವ ‘ಒಡೆಯ’ (ಪಾಕಿಸ್ತಾನ ಸರಕಾರ) ಎರಡೂ ಒಂದೇ ! – ದೇವೇಂದ್ರ ಫಡ್ನವೀಸ್, ಮುಖ್ಯಮಂತ್ರಿ

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ನಾಗಪುರ – ನವೆಂಬರ್ 26, 2009 ರಂದು ಮುಂಬಯಿ ಮೇಲೆ ದಾಳಿ ನಡೆದಾಗಲೇ, ಭಯೋತ್ಪಾದನೆ ಮತ್ತು ಭಯೋತ್ಪಾದಕರನ್ನು ಪೋಷಿಸುವ ‘ಆಕಾ’ ಅಂದರೆ ಅಲ್ಲಿನ (ಪಾಕಿಸ್ತಾನದ) ಸರಕಾರವನ್ನು ಬೇರೆ ಬೇರೆಯಾಗಿ ಪರಿಗಣಿಸಬಾರದು ಎಂದು ನಾವು ಜಗತ್ತಿನ ಮುಂದೆ ಒತ್ತಾಯಿಸಿದ್ದೆವು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಅದನ್ನು ತನ್ನ ಅಧಿಕೃತ ನಿಲುವಾಗಿ ಘೋಷಿಸಿದೆ. ಭಾರತದ ವಿದೇಶಾಂಗ ಮತ್ತು ರಕ್ಷಣಾ ನೀತಿಗಳು ಈಗ ಹೆಚ್ಚು ದೃಢ, ನಿರ್ಣಾಯಕ ಮತ್ತು ಜಾಗತಿಕ ಮಟ್ಟದಲ್ಲಿ ಪರಿಣಾಮಕಾರಿಯಾಗಿವೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮೇ 13 ರಂದು ಇಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಹೇಳಿದರು. ಭಾರತೀಯ ಸೇನೆಯ ಯಶಸ್ವಿ ‘ಆಪರೇಷನ್ ಸಿಂದೂರ್’ ನಂತರ ಮತ್ತು ಭಾರತ-ಪಾಕಿಸ್ತಾನ ನಡುವಿನ ಕದನ ವಿರಾಮದ ನಂತರ ಪ್ರಧಾನಿ ನರೇಂದ್ರ ಮೋದಿ ಮೇ 12 ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದರು. ಈ ಭಾಷಣಕ್ಕೆ ಮುಖ್ಯಮಂತ್ರಿಗಳು ಈ ಪ್ರತಿಕ್ರಿಯೆ ವ್ಯಕ್ತಪಡಿಸಿದರು.”