ಪಹಲ್ಗಾಮ್ ಭಯೋತ್ಪಾದಕ ದಾಳಿ : ಮೃತಪಟ್ಟವರ ಮಕ್ಕಳ ಸಂಪೂರ್ಣ ಶೈಕ್ಷಣಿಕ ಖರ್ಚನ್ನು ಸರಕಾರ ಭರಿಸಲಿದೆ!

ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್

ಮುಂಬಯಿ – ಪಹಲ್ಗಾಮ್‌ನಲ್ಲಿ ಏಪ್ರಿಲ್ ೨೨ ರಂದು ನಡೆದ ಭಯೋತ್ಪಾದಕ ದಾಳಿಯಲ್ಲಿ ಪುಣೆ, ರಾಯಗಡ, ಥಾಣೆ, ಮುಂಬಯಿ ಮತ್ತು ನಾಗ್ಪುರದ ೬ ಪ್ರವಾಸಿಗರು ಸಾವನ್ನಪ್ಪಿದ್ದಾರೆ. ಮೃತರ ಕುಟುಂಬಗಳಿಗೆ ತಲಾ ೫ ಲಕ್ಷ ರೂಪಾಯಿಗಳ ಪ್ರತ್ಯಕ್ಷ ಆರ್ಥಿಕ ನೆರವು, ಹಾಗೆಯೇ ೪೫ ಲಕ್ಷ ರೂಪಾಯಿಗಳ ಪರಿಹಾರ ಧನ, ವಾರಸುದಾರರಿಗೆ ಉದ್ಯೋಗ ಮತ್ತು ಶಿಕ್ಷಣದ ಮೂಲಕ ಸಹಾಯ ಮಾಡಲು ಸರಕಾರ ನಿರ್ಧರಿಸಿದೆ. ಮೃತರ ತಲಾ ಇಬ್ಬರು ಮಕ್ಕಳ ಸ್ನಾತಕೋತ್ತರ ಶಿಕ್ಷಣದವರೆಗಿನ ಸಂಪೂರ್ಣ ಖರ್ಚನ್ನು ಭರಿಸಲು ಸರಕಾರ ನಿರ್ಧರಿಸಿದೆ. ಮೇ ೧೩ ರಂದು ಕಂದಾಯ ಮತ್ತು ಅರಣ್ಯ ಇಲಾಖೆಯಿಂದ ಈ ಕುರಿತು ಸರಕಾರಿ ಆದೇಶ ಹೊರಡಿಸಲಾಗಿದೆ. ಮೃತರ ಒಬ್ಬ ಮಗುವಿಗೆ ಶೈಕ್ಷಣಿಕ ಅರ್ಹತೆಗೆ ಅನುಗುಣವಾಗಿ ಸರಕಾರಿ ನೌಕರಿಯಲ್ಲಿ ಸೇರಿಸಿಕೊಳ್ಳಲು ಸಹ ಸರಕಾರ ನಿರ್ಧರಿಸಿದೆ.