ಪಾಕಿಸ್ತಾನವು ಅಂತರರಾಷ್ಟ್ರೀಯ ಹಣಕಾಸು ನಿಧಿಯಿಂದ (ಐಎಂಎಫ್) ಪಡೆದ ಹಣವನ್ನು ಭಯೋತ್ಪಾದನೆಗಾಗಿಯೇ ಬಳಸುತ್ತದೆ!

ವಿಶ್ವಸಂಸ್ಥೆಯ ಮಾಜಿ ಸಹಾಯಕ ಕಾರ್ಯದರ್ಶಿ ಲಕ್ಷ್ಮಿ ಪುರಿ ಅವರ ಅಭಿಪ್ರಾಯ

ನವದೆಹಲಿ – ಪಾಕಿಸ್ತಾನಕ್ಕೆ ಹಣ ನೀಡಿದರೆ ಶಾಂತಿ ಸ್ಥಾಪನೆಯಾಗುವುದಿಲ್ಲ, ಬದಲಾಗಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂಬುದನ್ನು ಅನ್ಯ ದೇಶಗಳು ಅರ್ಥಮಾಡಿಕೊಳ್ಳಬೇಕು. ಈ ನಿಧಿಯನ್ನು ಪಾಕಿಸ್ತಾನವು ದೇಶ ಸುಧಾರಣೆ ಅಥವಾ ಅಭಿವೃದ್ಧಿಗಾಗಿ ಬಳಸುವುದಿಲ್ಲ, ಬದಲಿಗೆ ಭಯೋತ್ಪಾದಕ ಸಂಘಟನೆಗಳಿಗೆ ಹಣ ನೀಡಲು, ಜಾಗತಿಕ ಮಟ್ಟದಲ್ಲಿ ತಲೆಮರೆಸಿಕೊಂಡಿರುವವರಿಗೆ ಆಶ್ರಯ ನೀಡಲು ಮತ್ತು ಅಸ್ಥಿರತೆಯಿಂದ ಅಭಿವೃದ್ಧಿ ಹೊಂದುವ ಸೈನ್ಯವನ್ನು ಬೆಂಬಲಿಸಲು ಬಳಸುತ್ತದೆ ಎಂದು ವಿಶ್ವಸಂಸ್ಥೆಯ ಮಾಜಿ ಸಹಾಯಕ ಕಾರ್ಯದರ್ಶಿ ಲಕ್ಷ್ಮಿ ಪುರಿ ಹೇಳಿದ್ದಾರೆ.

ಲಕ್ಷ್ಮಿ ಪುರಿ ಅವರು ಹೇಳಿದ್ದು:

1. ಪಾಕಿಸ್ತಾನವು ಪ್ರಜಾಪ್ರಭುತ್ವ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಪ್ರತಿಯೊಂದು ಷರತ್ತನ್ನು ಉಲ್ಲಂಘಿಸಿದೆ ಮತ್ತು ರಕ್ತಪಾತವನ್ನು ಪ್ರೋತ್ಸಾಹಿಸಲು ‘ಬೇಲ್‌ ಔಟ್ ಪ್ಯಾಕೇಜ್’ ಅನ್ನು (ಯಾವುದೇ ದೇಶ ದಿವಾಳಿಯಾಗುವುದನ್ನು ತಪ್ಪಿಸಲು ನೀಡುವ ಆರ್ಥಿಕ ಸಹಾಯ) ಬಳಸಿದೆ. ಆದರೂ ಸಹ ವಿವಿಧ ದೇಶಗಳು ಇಂತಹ ಭಯೋತ್ಪಾದಕ ರಾಷ್ಟ್ರಕ್ಕೆ ಹಣ ಸಹಾಯ ಮಾಡುತ್ತಿರುವುದು ಏಕೆ?

2. 1950 ರಿಂದ ಪಾಕಿಸ್ತಾನವು 28 ಬಾರಿ ಹಣಕಾಸು ನಿಧಿಯಿಂದ ಸಾಲ ಪಡೆದಿದೆ. ಇದು ಆರ್ಥಿಕ ಸಹಾಯವಲ್ಲ, ಬದಲಿಗೆ ಭೌಗೋಳಿಕ ರಾಜಕೀಯ ದಾನ ಮತ್ತು ಅಂತರರಾಷ್ಟ್ರೀಯ ಸೌಹಾರ್ದತೆಯ ಕಾರ್ಯತಂತ್ರದ ದುರುಪಯೋಗವಾಗಿದೆ. ಸಾಲ ಕಾರ್ಯಕ್ರಮದ ಅಡಿಯಲ್ಲಿ ಪಾಕಿಸ್ತಾನಕ್ಕೆ 130 ಕೋಟಿ ಡಾಲರ್‌ಗಳ ಹೊಸ ಸಾಲವನ್ನು ಮಂಜೂರು ಮಾಡಲು ನಡೆದ ಸಭೆಯಲ್ಲಿ ಭಾರತ ಮತದಾನದಿಂದ ದೂರವಿತ್ತು. ಈ ಸಭೆಯಲ್ಲಿ ಪಾಕಿಸ್ತಾನಕ್ಕೆ ಸಾಲ ಮಂಜೂರಾಯಿತು.

ಸಂಪಾದಕೀಯ ನಿಲುವು

ಇದರಲ್ಲಿ ಆಶ್ಚರ್ಯವೇನಿದೆ? ಪಾಕಿಸ್ತಾನವು ಈವರೆಗೆ ಇದೇ ಕೆಲಸವನ್ನು ಮಾಡುತ್ತಾ ಬಂದಿರುವುದರಿಂದ ಈಗಲೂ ಕೂಡ ಯಾವುದೇ ಬದಲಾವಣೆ ಆಗುವುದಿಲ್ಲ; ಆದರೆ ಭಾರತವು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಮನಃಸ್ಥಿತಿಯನ್ನು ಸಹ ಗಮನಿಸುವುದು ಸದ್ಯದ ಸ್ಥಿತಿಯಲ್ಲಿ ಅವಶ್ಯಕವಾಗಿದೆ!