ಅಂತವರಿಗೆ ಗಲ್ಲುಶಿಕ್ಷೆ ವಿಧಿಸಬೇಕು!
ಮಲೇರ್ಕೋಟ್ಲಾ (ಪಂಜಾಬ್) – ಇಲ್ಲಿನ ಪೊಲೀಸರು ಇಬ್ಬರು ಪಾಕಿಸ್ತಾನಿ ಗೂಢಚಾರರನ್ನು ಬಂಧಿಸಿದ್ದಾರೆ. ಅವರು ಭಾರತೀಯ ಸೇನೆಯ ಚಲನವಲನಗಳ ಬಗ್ಗೆ ಮಾಹಿತಿಯನ್ನು ಪಾಕಿಸ್ತಾನದ ಹೈಕಮಿಷನರ್ ಕಛೇರಿಗೆ ಕಳುಹಿಸುತ್ತಿದ್ದರು. ಅವರ ವಿಚಾರಣೆ ನಡೆಯುತ್ತಿದೆ.
ಜಲಂಧರ್‌ನಲ್ಲಿ ಸೈನಿಕರ ಸಮವಸ್ತ್ರದಲ್ಲಿ 4 ಶಂಕಿತರು ಕಾಣಿಸಿಕೊಂಡಿದ್ದಾರೆ. ಅವರು ಇಲ್ಲಿನ ದೇವಾಲಯವನ್ನು ತಲುಪಿದ ನಂತರ, ಅರ್ಚಕರಿಂದ ಆಹಾರ ಮತ್ತು ನೀರನ್ನು ಕೇಳಿದರು. ಆನಂತರ, ಪೊಲೀಸರು ಅವರನ್ನು ಹುಡುಕುವಲ್ಲಿ ನಿರತರಾಗಿದ್ದಾರೆ.