ಅಮೇರಿಕದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಅವರ ಹೇಳಿಕೆ
ವಾಷಿಂಗ್ಟನ್ (ಅಮೇರಿಕ) – ಅಮೇರಿಕದ ಬೆಂಬಲವಿಲ್ಲದಿದ್ದರೆ, ಕಳೆದ 75 ವರ್ಷಗಳಿಂದ ಪಾಕಿಸ್ತಾನವು ಭಾರತವನ್ನು ಎದುರಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಅಮೇರಿಕದಲ್ಲಿನ ಪಾಕಿಸ್ತಾನದ ಮಾಜಿ ರಾಯಭಾರಿ ಹುಸೇನ್ ಹಕ್ಕಾನಿ ಹೇಳಿದ್ದಾರೆ. ಹಕ್ಕಾನಿ ಅವರು, ಪಾಕಿಸ್ತಾನವು ತನ್ನ ಕಾರ್ಯತಂತ್ರದ ಆದ್ಯತೆಗಳನ್ನು ವ್ಯಾಖ್ಯಾನಿಸುವ ಮತ್ತು ಭಾರತದೊಂದಿಗಿನ ಸಂಬಂಧಗಳನ್ನು ಪುನರ್ರಚಿಸುವ ಅಗತ್ಯವಿದೆ ಎಂದು ಸಹ ಅವರು ಹೇಳಿದರು.
ಪಾಕಿಸ್ತಾನಕ್ಕೆ ಅಮೇರಿಕದಿಂದ ಈ ಹಿಂದೆ ಎಷ್ಟು ಸೈನಿಕ ಸಹಾಯ ಸಿಕ್ಕಿತ್ತು?
2002 ರಿಂದ 2013 ರ ಅವಧಿಯಲ್ಲಿ ಅಮೇರಿಕವು ಪಾಕಿಸ್ತಾನಕ್ಕೆ 26 ಶತಕೋಟಿ ಡಾಲರ್ ಗಳ ಸೈನಿಕ ಸಹಾಯವನ್ನು ನೀಡಿತ್ತು. ಅಮೇರಿಕವು ಆಗ ಪಾಕಿಸ್ತಾನಕ್ಕೆ 18 ಹೊಸ ‘ಎಫ್-16’ ಯುದ್ಧ ವಿಮಾನಗಳು, 8 ಪಿ-3ಸಿ ಓರಿಯನ್ ಕಡಲ ಗಸ್ತು ವಿಮಾನಗಳು, ಟ್ಯಾಂಕ್ ವಿರೋಧಿ ಕ್ಷಿಪಣಿಗಳು, ಆಕಾಶದಿಂದ ಆಕಾಶದಲ್ಲಿ ದಾಳಿ ಮಾಡಬಲ್ಲ 500 ಕ್ಷಿಪಣಿಗಳು ಇತ್ಯಾದಿಗಳನ್ನು ನೀಡಿತ್ತು. ಇದರಿಂದ ಪಾಕಿಸ್ತಾನವು ತನ್ನ ಸೈನಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಬಹಳ ಸಹಾಯವಾಯಿತು. ಪಾಕಿಸ್ತಾನವು ಈ ಶಸ್ತ್ರಾಸ್ತ್ರಗಳನ್ನು ಭಾರತದ ವಿರುದ್ಧ ಬಳಸಿದೆ. ವಿಶೇಷವಾಗಿ ಭಾರತದೊಂದಿಗಿನ ಸಂಘರ್ಷಗಳಲ್ಲಿ ಎಫ್-16 ಅನ್ನು ಯಾವಾಗಲೂ ಬಳಸಲಾಗಿದೆ. ಎಫ್-16 ರ ದುರಸ್ತಿ ಮತ್ತು ನಿರ್ವಹಣೆಗಾಗಿ ಅಮೇರಿಕವು ಇಂದಿಗೂ ಪಾಕಿಸ್ತಾನಕ್ಕೆ ಬಹಳಷ್ಟು ಹಣವನ್ನು ನೀಡುತ್ತದೆ.
ಸಂಪಾದಕೀಯ ನಿಲುವು
|