ಇಸ್ಲಾಮಾಬಾದ (ಪಾಕಿಸ್ತಾನ) – ನಾವು ಮತ್ತೊಮ್ಮೆ ಶತ್ರುವನ್ನು ಹಿಮ್ಮೆಟ್ಟಿಸಿದ್ದೇವೆ. ನಮ್ಮ ಸೈನ್ಯವು ಶತ್ರುಗಳ ಮೇಲೆ ಎಂದಿಗೂ ಮಾಸದಂತಹ ಗಾಯವನ್ನು ಮಾಡಿದೆ ಎಂದು ಪಾಕ್ ಪ್ರಧಾನಿ ಶಹಬಾಜ್ ಷರೀಫ್ ಕದನ ವಿರಾಮದ ನಂತರ ಜನರನ್ನು ಉದ್ದೇಶಿಸಿ ಮಾತನಾಡುವಾಗ ಸುಳ್ಳು ಹೇಳಿಕೆ ನೀಡಿದ್ದಾರೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಘರ್ಷವನ್ನು ನಿಲ್ಲಿಸಿದ್ದಕ್ಕಾಗಿ ಅವರು ಅಮೇರಿಕದ ಅಧ್ಯಕ್ಷ ಟ್ರಂಪ್ ಅವರಿಗೆ ಧನ್ಯವಾದ ಅರ್ಪಿಸಿದರು. ಹಾಗೆಯೇ ಭಾರತದ ವಿರುದ್ಧ ಪಾಕಿಸ್ತಾನಕ್ಕೆ ಬೆಂಬಲ ನೀಡಿದ್ದಕ್ಕಾಗಿ ಸೌದಿ ಅರೇಬಿಯಾ, ಟರ್ಕಿ ಮತ್ತು ಚೀನಾಕ್ಕೆ ಧನ್ಯವಾದ ಅರ್ಪಿಸಿದರು. (ಸುಳ್ಳು ಹೇಳುವಲ್ಲಿ ದಾಖಲೆ ಸಾಧಿಸಿರುವ ಪಾಕ್! ಸೌದಿ ಅರೇಬಿಯಾ ಪಾಕಿಸ್ತಾನವನ್ನು ಎಂದಿಗೂ ಬೆಂಬಲಿಸದಿದ್ದರೂ, ಅದರ ಹೆಸರನ್ನು ಬಳಸಿ ಜಗತ್ತನ್ನು ಮೂರ್ಖರನ್ನಾಗಿಸುವ ಪಾಕ್! – ಸಂಪಾದಕರು)
ಪ್ರಧಾನಿ ಶಹಬಾಜ್ ಷರೀಫ್ ಮಾತು ಮುಂದುವರೆಸಿ,
1. ನಾನು ಅಸೀಮ್ ಮುನೀರ್ (ಪಾಕಿಸ್ತಾನದ ಸೇನಾ ಮುಖ್ಯಸ್ಥ) ಸೇರಿದಂತೆ ಎಲ್ಲಾ ಅಧಿಕಾರಿಗಳಿಗೆ ವಂದಿಸುತ್ತೇನೆ. ನಿಮ್ಮ ಬಗ್ಗೆ ನಮಗೆ ಹೆಮ್ಮೆ ಇದೆ. ಪಾಕಿಸ್ತಾನದ ವಾಯುಸೇನೆ ನಮ್ಮ ಮಿತಿಯಲ್ಲಿದ್ದುಕೊಂಡು ಶತ್ರುಗಳ ವಿಮಾನಗಳನ್ನು ನಾಶಪಡಿಸಿದೆ. ಈ ಯುದ್ಧ ಮುಗಿಯುವವರೆಗೂ ನಾವು ಸುಮ್ಮನೆ ಕೂರುವುದಿಲ್ಲ. ಸೈನ್ಯ ಮತ್ತು ಜನರು ಇಬ್ಬರೂ ಪಾಕಿಸ್ತಾನದ ಗೌರವಕ್ಕೆ ಪಾತ್ರರಾಗಿದ್ದಾರೆ. ನಾವು ಒಂದು ಸೈನ್ಯವನ್ನು ಸಿದ್ಧಪಡಿಸುತ್ತೇವೆ ಮತ್ತು ಶತ್ರುಗಳೊಂದಿಗೆ ಹೋರಾಡಿ ಅವರನ್ನು ಸೋಲಿಸುತ್ತೇವೆ.
2. ಪಹಲ್ಗಾಮ್ ದಾಳಿಯ ನೆಪದಲ್ಲಿ ಪಾಕಿಸ್ತಾನದ ಮೇಲೆ ದಾಳಿ ಮಾಡುವುದು ಆಧಾರರಹಿತವಾಗಿದೆ. ಶಾಂತಿಯುತ ದೇಶವಾಗಿ ಪಾಕಿಸ್ತಾನವು ಪಹಲ್ಗಾಮ್ ಘಟನೆಯ ತನಿಖೆ ನಡೆಸಲು ಪ್ರಸ್ತಾಪಿಸಿತ್ತು; ಆದರೆ ಭಾರತವು ಕಾನೂನನ್ನು ಪಾಲಿಸಲಿಲ್ಲ ಮತ್ತು ತಪ್ಪು ಮಾರ್ಗವನ್ನು ಆರಿಸಿಕೊಂಡಿತು. (ಇಲ್ಲಿಯವರೆಗೆ ಭಾರತದಲ್ಲಿ ನಡೆದ ಎಷ್ಟು ಭಯೋತ್ಪಾದಕ ದಾಳಿಗಳ ತನಿಖೆಯನ್ನು ಪಾಕಿಸ್ತಾನ ಮಾಡಿದೆ ಮತ್ತು ಭಯೋತ್ಪಾದಕರಿಗೆ ಶಿಕ್ಷೆ ನೀಡಿದೆ? – ಸಂಪಾದಕರು)
3. ಜಮ್ಮು ಮತ್ತು ಕಾಶ್ಮೀರವು ಮುಸ್ಲಿಂ ಸಂಘರ್ಷವಾಗಿತ್ತು ಮತ್ತು ಇದೆ. ನಮ್ಮ ಕಾಶ್ಮೀರಿ ಸಹೋದರರಿಗೆ ಅವರ ಹಕ್ಕುಗಳು ಸಿಗುವವರೆಗೂ ಅದು ಹಾಗೆಯೇ ಇರುತ್ತದೆ. (ಇದರಿಂದ ಕಾಶ್ಮೀರದಲ್ಲಿ ಪದೇ ಪದೇ ಭಯೋತ್ಪಾದಕ ದಾಳಿಗಳು ನಡೆಯುತ್ತಲೇ ಇರುತ್ತವೆ ಎಂಬುದು ಸ್ಪಷ್ಟವಾಗುತ್ತದೆ! – ಸಂಪಾದಕರು)
4. ಭಾರತದ ಹೇಡಿತನದ ದಾಳಿಯಲ್ಲಿ 26 ಮುಗ್ಧ ಪಾಕಿಸ್ತಾನಿ ನಾಗರಿಕರು ಸಾವನ್ನಪ್ಪಿದ್ದಾರೆ. ಇದರಲ್ಲಿ ಮಕ್ಕಳು ಮತ್ತು ಮಹಿಳೆಯರು ಸೇರಿದ್ದಾರೆ. ಭಾರತವು ಶೇ. 100 ರಷ್ಟು ಏಕಪಕ್ಷೀಯ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು; ಆದರೆ ಅದರಿಂದ ವಾಸ್ತವ ಬದಲಾಗುವುದಿಲ್ಲ.
ಪಾಕಿಸ್ತಾನದ ಪ್ರತ್ಯುತ್ತರದ ಯಶಸ್ಸನ್ನು ಆಚರಿಸಿರಿ! – ಪ್ರಧಾನಿ ಷರೀಫ್ ಕರೆ
ಪ್ರಧಾನಿ ಶಹಬಾಜ್ ಷರೀಫ್ ದೇಶದಲ್ಲಿ ‘ಯೌಮ್-ಎ-ತಶಕ್ಕುರ್’ (ಅಲ್ಲಾನಿಗೆ ಕೃತಜ್ಞತೆ ಸಲ್ಲಿಸುವ ದಿನ) ಆಚರಿಸಲು ಘೋಷಿಸಿದ್ದಾರೆ. ‘ಭಾರತೀಯ ದಾಳಿಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನ ಕೈಗೊಂಡ ಕ್ರಮ ಮತ್ತು ‘ಆಪರೇಷನ್ ಬುನಿಯಾನ್-ಉಲ್-ಮರ್ಸೂಸ್’ (ಕಬ್ಬಿಣದ ಭದ್ರ ಗೋಡೆ) ಯಶಸ್ಸಿನ ನಂತರ ಈ ದಿನವನ್ನು ಆಚರಿಸಲಾಗುವುದು. ಅಲ್ಲಾನಿಗೆ ಕೃತಜ್ಞತೆ ಸಲ್ಲಿಸಲು, ಸಶಸ್ತ್ರ ಪಡೆಗಳಿಗೆ ವಂದಿಸಲು ಮತ್ತು ದೇಶದ ಏಕತೆಯನ್ನು ಶ್ಲಾಘಿಸಲು ಈ ದಿನವನ್ನು ಆಚರಿಸಲಾಗುವುದು.
ಕದನ ವಿರಾಮದ ನಂತರ ಪಾಕಿಸ್ತಾನದ ಜನರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ನಾವು ಪ್ರತಿಯೊಂದು ಪರಿಸ್ಥಿತಿಯಲ್ಲಿಯೂ ಪಾಕಿಸ್ತಾನದ ಜೊತೆಗಿದ್ದೇವೆ! – ಚೀನಾ
ಪಾಕಿಸ್ತಾನದ ಉಪ ಪ್ರಧಾನಿ ಮತ್ತು ವಿದೇಶಾಂಗ ಸಚಿವ ಇಶಾಕ್ ಡಾರ್ ಅವರೊಂದಿಗೆ ದೂರವಾಣಿ ಸಂಭಾಷಣೆಯ ಸಮಯದಲ್ಲಿ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು, ಅವರ ದೇಶವು ಪಾಕಿಸ್ತಾನದ ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಅದರ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದರು.
ಸಂಪಾದಕೀಯ ನಿಲುವುಜುಟ್ಟು ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎನ್ನುವ ಮಾನಸಿಕತೆಯ ಪಾಕ್ ಪ್ರಧಾನಿಗಳ ಹೇಳಿಕೆ |