ಮುಂಬಯಿ – ಭಾರತ ವಿರೋಧಿ ಪೋಸ್ಟ್‌ಗಳನ್ನು ಪ್ರಸಾರ ಮಾಡಿದ್ದಕ್ಕಾಗಿ ಮುಂಬಯಿನಲ್ಲಿ ಎರಡು ಪ್ರಕರಣಗಳು ದಾಖಲಾಗಿವೆ. ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೃತ್ಯ ಎಸಗಿದ್ದಕ್ಕಾಗಿ ಚುನಭಟ್ಟಿ ಮತ್ತು ಮಾಲ್ವಾನಿ ಪೊಲೀಸರು ಪ್ರಕರಣಗಳನ್ನು ದಾಖಲಿಸಿದ್ದಾರೆ.
1. ಒಂದು ಪ್ರಕರಣದಲ್ಲಿ ಚುನಭಟ್ಟಿ ಪೊಲೀಸರು 20 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಕುರ್ಲಾದಲ್ಲಿನ 20 ವರ್ಷದ ಯುವಕನು ಇನ್‌ಸ್ಟಾಗ್ರಾಮ್‌ನಲ್ಲಿ ಭಾರತ ವಿರೋಧಿ ಪೋಸ್ಟ್ ಮಾಡಿದ ಪ್ರಕರಣದಲ್ಲಿ ಅವನ ವಿರುದ್ಧ ಚುನಭಟ್ಟಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಪೊಲೀಸರೇ ಸ್ವತಃ ಈ ಪ್ರಕರಣದಲ್ಲಿ ದೂರು ದಾಖಲಿಸಿದ್ದಾರೆ.
2. ಮಲಾಡ್‌ನಲ್ಲಿ 26 ವರ್ಷದ ಯುವಕನ ದೂರಿನ ಮೇರೆಗೆ ಮಾಲ್ವಾನಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದೂರುದಾರ ಯುವಕ ಕೇಬಲ್ ನೆಟ್‌ವರ್ಕ್ ವ್ಯವಹಾರ ನಡೆಸುತ್ತಾನೆ. ಆತನಿಗೆ ವಾಟ್ಸಾಪ್‌ನಲ್ಲಿ ಯಾರೋ ಒಬ್ಬರು ‘ಆಪರೇಷನ್ ಸಿಂದೂರ’ದ ವಿರುದ್ಧ ‘ಸ್ಟೇಟಸ್’ ಇಟ್ಟಿರುವುದು ಗಮನಕ್ಕೆ ಬಂದಿದೆ. ಅದರಲ್ಲಿ ದೇಶ ವಿರೋಧಿ ಕೃತ್ಯಗಳನ್ನು ಎಸಗಿರುವ ‘ಇಮೋಜಿಗಳು’ (ಸನ್ನೆ, ಹಾವಭಾವ) ಕೂಡ ಇದ್ದವು. ಭಾರತದಲ್ಲಿ ವಾಸಿಸುತ್ತಿರುವಾಗ ದೇಶ ವಿರೋಧಿ ಕೃತ್ಯಗಳನ್ನು ಎಸಗಿದ ಪ್ರಕರಣದಲ್ಲಿ ಅಪರಾಧ ದಾಖಲಿಸಲಾಗಿದ್ದು, ಆರೋಪಿಯನ್ನು ಹುಡುಕಲಾಗುತ್ತಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಇದ್ದು ಭಾರತ ವಿರೋಧಿ ಪೋಸ್ಟ್‌ಗಳನ್ನು ಮಾಡುವವರ ಮನಸ್ಥಿತಿ ಮತ್ತು ಧರ್ಮ ಯಾವುದಿದೆ, ಇದು ಎಲ್ಲರಿಗೂ ತಿಳಿದಿದೆ. ಇಂತವರನ್ನು ಜೈಲಿಗೆ ಹಾಕಿ ಜನ್ಮವನ್ನೇ ಜಾಲಾಡಿಸುವ ರೀತಿಯಲ್ಲಿ ಶಿಕ್ಷಿಸಬೇಕು! |