ಪಾಕಿಸ್ತಾನದಿಂದ ಹಾರಿಸಲಾದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಗಾಳಿಯಲ್ಲಿಯೇ ಧ್ವಂಸ
ಜೈಸಲ್ಮೇರ್ (ರಾಜಸ್ಥಾನ) – ಭಾರತ ಮತ್ತು ಪಾಕಿಸ್ತಾನದ ನಡುವಿನ ಕದನ ವಿರಾಮವಾಗಿದೆ. 3 ದಿನಗಳ ಯುದ್ಧ ಪರಿಸ್ಥಿತಿಯಲ್ಲಿ ಪಾಕಿಸ್ತಾನ ಭಾರತದ ಜಮ್ಮು-ಕಾಶ್ಮೀರ, ಪಂಜಾಬ್, ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಡ್ರೋನ್‌ಗಳು ಮತ್ತು ಕ್ಷಿಪಣಿಗಳ ಮೂಲಕ ದಾಳಿ ಮಾಡಿತು. ಇದರಲ್ಲಿ ಜೈಸಲ್ಮೇರ್ ಕೂಡ ಸೇರಿತ್ತು. ಇಲ್ಲೇ ಗಡಿಯಲ್ಲಿ ಶ್ರೀ ತನೋಟಮಾತಾ ಮಂದಿರವಿದೆ. ಇಲ್ಲಿ 1965 ಮತ್ತು 1971 ರ ಯುದ್ಧದಲ್ಲಿ 450 ಪಾಕಿಸ್ತಾನಿ ಬಾಂಬ್‌ಗಳು ಬಿದ್ದಿದ್ದವು; ಆದರೆ ಒಂದೂ ಸ್ಫೋಟಿಸಲಿಲ್ಲ. ಈ 450 ಬಾಂಬ್‌ಗಳನ್ನು ಮಂದಿರದ ಆವರಣದಲ್ಲಿರುವ ಸಂಗ್ರಹಾಲಯದಲ್ಲಿ ಇಡಲಾಗಿದೆ. ಈ ಬಾರಿಯೂ ಪಾಕಿಸ್ತಾನದಿಂದ ಹಾರಿಸಲಾದ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಭಾರತದಿಂದ ಗಾಳಿಯಲ್ಲಿಯೇ ನಾಶಪಡಿಸಲಾಯಿತು. ಆದ್ದರಿಂದ ಈ ಬಾರಿಯೂ ಶ್ರೀ ತನೋಟಮಾತೆಯ ಕೃಪೆಯಿಂದ ಜೈಸಲ್ಮೇರ್ ರಕ್ಷಿಸಲ್ಪಟ್ಟಿದೆ ಎಂದು ಇಲ್ಲಿನ ಹಿಂದೂಗಳು ಮತ್ತು ಸೈನಿಕರ ಭಾವ ಆಗಿದೆ.
ಶ್ರೀತನೋಟಮಾತೆಯ ಮಂದಿರವು ಜೈಸಲ್ಮೇರ್‌ನ ಗಡಿ ಗ್ರಾಮಗಳಲ್ಲಿ ಒಂದಾದ ತನೋಟ್ ಗ್ರಾಮದಲ್ಲಿದೆ. ಈ ಪ್ರದೇಶವು ಪಾಕಿಸ್ತಾನದ ಗಡಿಗೆ ಹೊಂದಿಕೊಂಡಿದೆ. ಈ ಗ್ರಾಮವನ್ನು ರಾಜಸ್ಥಾನದ ಕೊನೆಯ ಗ್ರಾಮವೆಂದೂ ಕರೆಯಲಾಗುತ್ತದೆ, ಇಲ್ಲಿಂದ ಭಾರತ-ಪಾಕಿಸ್ತಾನ ಗಡಿ ಸ್ಪಷ್ಟವಾಗಿ ಕಾಣುತ್ತದೆ. ಈ ಮಂದಿರದ ಪ್ರವೇಶದ್ವಾರದಲ್ಲಿ ಗಡಿ ಭದ್ರತಾ ಪಡೆಯ ಸೈನಿಕರು ನಿಯೋಜಿತರಾಗಿರುತ್ತಾರೆ. ಅವರೇ ಇಲ್ಲಿ ಬೆಳಿಗ್ಗೆ ಮತ್ತು ಸಂಜೆ ಪೂಜೆ ಮತ್ತು ಆರತಿ ಮಾಡುತ್ತಾರೆ.