ವ್ಯಾಟಿಕನ್ – ವ್ಯಾಟಿಕನ್ನ ಸಿಸ್ಟೀನ್ ಚಾಪೆಲ್ನಲ್ಲಿ (ಕ್ರಿಶ್ಚಿಯನ್ನರ ಪೂಜೆಗಾಗಿ ಉಪಯೋಗಿಸಲಾಗುವ ಕೊಠಡಿ ಅಥವಾ ಕಟ್ಟಡ) ನಡೆದ ಕಾರ್ಡಿನಲ್ಗಳ (ಚರ್ಚ್ನಲ್ಲಿನ ಹಿರಿಯ ಪಾದ್ರಿಗಳ ಸಭೆಯಲ್ಲಿ) ಮೇ 8 ರಂದು ಹೊಸ ಪೋಪ್ ಅವರನ್ನು ಆಯ್ಕೆ ಮಾಡಲಾಯಿತು. ಅಮೇರಿಕಾದ ಕಾರ್ಡಿನಲ್ 69 ವರ್ಷದ ರಾಬರ್ಟ್ ಫ್ರಾನ್ಸಿಸ್ ಪ್ರೆವೋಸ್ಟ್ 267 ನೇ ಪೋಪ್ ಆಗಿ ಆಯ್ಕೆಯಾದರು. ಅವರು ಅಮೇರಿಕಾದಿಂದ ಪೋಪ್ ಆದ ಮೊದಲ ಕಾರ್ಡಿನಲ್ ಆಗಿದ್ದಾರೆ. ಫ್ರಾನ್ಸಿಸ್ ಅವರು ಸ್ವತಃ ‘ಪೋಪ್ ಲಿಯೋ-14’ ಎಂಬ ಹೆಸರನ್ನು ಆರಿಸಿಕೊಂಡಿದ್ದಾರೆ. ಪೋಪ್ ಆಗಿ ಆಯ್ಕೆಯಾದ ಕಾರ್ಡಿನಲ್ ರಾಬರ್ಟ್ ಪ್ರೆವೋಸ್ಟ್ ಅವರನ್ನು ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಭಿನಂದಿಸಿದರು. ಹೊಸ ಪೋಪ್ ಆಯ್ಕೆಯಾದ ತಕ್ಷಣ, ವ್ಯಾಟಿಕನ್ನಲ್ಲಿ ಹಾಜರಿದ್ದ 45 ಸಾವಿರಕ್ಕೂ ಹೆಚ್ಚು ಜನರು ಚಪ್ಪಾಳೆ ತಟ್ಟಿ ಪರಸ್ಪರ ಅಭಿನಂದಿಸಿದರು.
ಅನ್ಯರ ಮೇಲೆ ಕರುಣೆ ತೋರಿಸಿ! – ಪೋಪ್
ಪೋಪ್ ಆಗಿ ಆಯ್ಕೆಯಾದ ನಂತರ, ಪೋಪ್ ಲಿಯೋ 14 ಅವರು ಸೇಂಟ್ ಪೀಟರ್ಸ್ ಬೆಸಿಲಿಕಾದ ಬಾಲ್ಕನಿಯಿಂದ ಸ್ಪ್ಯಾನಿಷ್ ಭಾಷೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದರು. ಅನ್ಯರಿಗೆ ಕರುಣೆ ತೋರಿಸಲು ಮತ್ತು ಪ್ರೀತಿಯಿಂದ ಬದುಕಲು ಜನರನ್ನು ಆಹ್ವಾನಿಸಿದರು. ” ಪ್ರತಿಯೊಬ್ಬರ ಹೃದಯದಲ್ಲಿ ಶಾಂತಿ ನೆಲೆಸಲಿ,” ಎಂದು ನೂತನ ಪೋಪ್ ಪ್ರಾರ್ಥಿಸಿದರು.