America Israel Thank India : ಭಾರತೀಯ ಸೈನ್ಯದಿಂದ ಭಯೋತ್ಪಾದಕ ಅಬ್ದುಲ್ ರೌಫ್ ಅಝಹರ್ ಹತ; ಧನ್ಯವಾದ ಹೇಳಿದ ಅಮೇರಿಕ ಮತ್ತು ಇಸ್ರೇಲ್

ಅಮೇರಿಕ ಮತ್ತು ಇಸ್ರೇಲ್ ನ ಕಡು ವೈರಿ ಆಗಿದ್ದನು

ವಾಷಿಂಗ್ಟನ – ಭಾರತವು ಪಾಕಿಸ್ತಾನದ ಭಯೋತ್ಪಾದಕ ನೆಲೆಗಳ ಮೇಲೆ ‘ಆಪರೇಷನ್ ಸಿಂಧೂರ್’ ಅಡಿಯಲ್ಲಿ ನಡೆಸಿದ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ನ ಕುಖ್ಯಾತ ಭಯೋತ್ಪಾದಕ ಅಬ್ದುಲ್ ರೌಫ್ ಅಝರ್ ಹತನಾದನೆಂಬ ಮಾಹಿತಿ ಬಹಿರಂಗವಾದ ಕೂಡಲೇ ಅಮೇರಿಕ ಮತ್ತು ಇಸ್ರೇಲ್ ಸಂತೋಷ ವ್ಯಕ್ತಪಡಿಸಿವೆ. ರೌಫ್ ನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆಯೇ ಅವರು ಭಾರತದ ಯಶಸ್ಸನ್ನು ಶ್ಲಾಘಿಸಿದರು. ಜೈಶ್-ಎ-ಮೊಹಮ್ಮದ್ ನ ಕಮಾಂಡರ್ ಅಬ್ದುಲ್ ರೌಫ್ ಅಝರ್ ಅಮೇರಿಕ ಮತ್ತು ಇಸ್ರೇಲ್ ಎರಡೂ ದೇಶಗಳ ಕಡು ವೈರಿಯಾಗಿದ್ದನು. ರೌಫ್ 2002 ರಲ್ಲಿ ಅಮೇರಿಕದ ಯಹೂದಿ ಪತ್ರಕರ್ತ ಡೇನಿಯಲ್ ಪರ್ಲ್ ಅನ್ನು ಪಾಕಿಸ್ತಾನದಲ್ಲಿ ಅಪಹರಿಸಿ ಹತ್ಯೆ ಮಾಡಿದ್ದನು. ಅದಕ್ಕಾಗಿಯೇ 2010 ರಲ್ಲಿ ಅಮೇರಿಕಾ ರೌಫ್ ಮೇಲೆ ನಿರ್ಬಂಧಗಳನ್ನು ವಿಧಿಸಿತ್ತು.

1. ರೌಫ್ ಅಝರ್ ನನ್ನು ‘ಆಪರೇಷನ್ ಸಿಂಧೂರ್’ನಲ್ಲಿ ಹತ್ಯೆ ಮಾಡಿದ ನಂತರ ಅಮೇರಿಕದ ಪತ್ರಕರ್ತೆ ಅಸ್ರಾ ನೋಮಾನಿ ‘ಎಕ್ಸ್’ನಲ್ಲಿ ಪೋಸ್ಟ್ ಪ್ರಸಾರ ಮಾಡಿ ಸಂತೋಷ ವ್ಯಕ್ತಪಡಿಸಿದರು.

2. ಅಮೇರಿಕದ ಕಾರ್ಯಕರ್ತೆ ಎಮಿ ಮೇಕ್ ಕೂಡ ಅಝರ್ ನ ಸಾವಿಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಪಾಶ್ಚಿಮಾತ್ಯ ದೇಶಗಳು ‘ಇಸ್ಲಾಮಿ ಭಯೋತ್ಪಾದನೆಯೊಂದಿಗೆ ಹೇಗೆ ಹೋರಾಡಬೇಕು ಎಂಬುದನ್ನು ಭಾರತದಿಂದ ಕಲಿಯಬೇಕು’ ಎಂದು ಹೇಳಿದ್ದಾರೆ.