ಭಾರತ-ಪಾಕ್ ಯುದ್ಧದ ಕರಿನೆರಳು: ಭಾರತದಿಂದ ಲಾಹೋರ್ ಮತ್ತು ಸಿಯಾಲ್ಕೋಟ್‌ನಂತಹ ಪಾಕಿಸ್ತಾನದ ನಗರಗಳ ಮೇಲೆ ದಾಳಿ!

ಭಾರತದೊಳಗೆ ನುಗ್ಗಿದ್ದ ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಲಾಗಿದೆ!

(ಸೌಜನ್ಯ : ZEENews)

ನವ ದೆಹಲಿ – ಪಾಕಿಸ್ತಾನವು ೭ ಮೇ ರಾತ್ರಿಯ ನಂತರ ೮ ಮೇ ರಾತ್ರಿಯೂ ಭಾರತದ ಮೇಲೆ ಡ್ರೋನ್‌ಗಳ ಮೂಲಕ ಆಕ್ರಮಣ ಮಾಡಿತು; ಆದರೆ ಭಾರತದ ವಾಯು ರಕ್ಷಣಾ ವ್ಯವಸ್ಥೆ ‘ಎಸ್-೪೦೦’ ನಿಂದ ಈ ಡ್ರೋನ್ ವಿಮಾನಗಳನ್ನು ಗಾಳಿಯಲ್ಲಿಯೇ ಹೊಡೆದುರುಳಿಸಲಾಯಿತು. ಜಮ್ಮು ವಿಮಾನ ನಿಲ್ದಾಣ, ಅಖನೂರ್, ಉಧಮಪುರ, ಆರ್‌.ಎಸ್‌.ಪುರ, ಸಾಂಬಾ; ಪಂಜಾಬ್‌ನ ಪಠಾಣ್‌ಕೋಟ್ ಮತ್ತು ರಾಜಸ್ಥಾನದ ಜೈಸಲ್ಮೇರ್‌ನಲ್ಲಿ ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಆಕ್ರಮಣ ಮಾಡಲಾಗಿತ್ತು. ಜಮ್ಮು ವಿಮಾನ ನಿಲ್ದಾಣದ ಮೇಲೆ ೮ ಡ್ರೋನ್‌ಗಳನ್ನು ಕಳುಹಿಸಲಾಗಿತ್ತು, ಅವುಗಳೆಲ್ಲವನ್ನೂ ಗಾಳಿಯಲ್ಲಿಯೇ ನಾಶಪಡಿಸಲಾಯಿತು. ಹಾಗೆಯೇ ಪಠಾಣ್‌ಕೋಟ್ ವಿಮಾನ ನಿಲ್ದಾಣದ ಮೇಲೆ ಆಕ್ರಮಣಕ್ಕಾಗಿ ಬಂದ ಪಾಕಿಸ್ತಾನದ ಡ್ರೋನ್ ಅನ್ನು ಹೊಡೆದುರುಳಿಸಲಾಯಿತು. ಒಟ್ಟು ೩೦ ಕ್ಕೂ ಹೆಚ್ಚು ಡ್ರೋನ್‌ಗಳ ಮೂಲಕ ಈ ಆಕ್ರಮಣ ಮಾಡಲಾಗಿತ್ತು. ಇದೇ ಸಮಯದಲ್ಲಿ ಪಾಕಿಸ್ತಾನದ f-17 ನ ೨ ಯುದ್ಧ ವಿಮಾನಗಳನ್ನು, f-16 ನ ಒಂದು ಯುದ್ಧ ವಿಮಾನ ಹಾಗೂ 3 ಯುದ್ಧವನ್ನೂ ಹೊಡೆದುರುಳಿಸಿರುವ ವರದಿಗಳಿವೆ. ಈ ಹಿಂದೆ ಬಾಲಾಕೋಟ್ ವೈಮಾನಿಕ ದಾಳಿಯ ನಂತರ ಪಾಕಿಸ್ತಾನದ ‘ಎಫ್-೧೬’ ಯುದ್ಧ ವಿಮಾನವನ್ನು ಭಾರತದ ಪೈಲಟ್ ಅಭಿನಂದನ್ ಅವರು ಹೊಡೆದುರುಳಿಸಿದ್ದರು.