ಖಂಡ್ವಾ (ಮಧ್ಯಪ್ರದೇಶ) – ಇಲ್ಲಿ ಇಬ್ಬರು ಮುಸ್ಲಿಂ ಹುಡುಗಿಯರು ಸನಾತನ ಧರ್ಮ ಸ್ವೀಕರಿಸಿ ಇಬ್ಬರು ಹಿಂದೂ ಹುಡುಗರನ್ನು ವಿವಾಹವಾದರು. ಖಾಂಡ್ವಾ ಜಿಲ್ಲೆಯಲ್ಲಿನ ಪ್ರಸಿದ್ಧ ಮಹಾದೇವಗಡ ದೇವಸ್ಥಾನದಲ್ಲಿ ಹಿಂದೂ ವಿಧಿ-ವಿದಾನಗಳ ಪ್ರಕಾರ ವಿವಾಹ ಸಮಾರಂಭ ನಡೆಯಿತು. ಖಾಂಡ್ವಾ ಜಿಲ್ಲೆಯ ಬೆದಿಯನ್ ಗ್ರಾಮದಲ್ಲಿ ವಾಸಿಸುವ ಅಮ್ರೀನ್ ಖಾನ್ ಈಗ ಅನುಷ್ಕಾ ಆಗಿದ್ದಾರೆ. ಅವಳ ವಿವಾಹ ತಲ್ವಾಡಿಯಾದ ಶುಭಂ ರಜಪೂತ್ ಅವರೊಡನೆ ಹಾಗೂ ಛತ್ತೀಸ್ಗಢದ ನಿವಾಸಿ ನಿಶಾತ್ ಶೇಖ್ ಳು ಈಗ ತನ್ನ ಹೆಸರನ್ನು ಮೇಘನಾ ಎಂದು ಬದಲಾಯಿಸಿ ಮೇಘನಾಳ ವಿವಾಹ ಛತ್ತೀಸ್ಗಡದ ನಿವಾಸಿಯಾಗಿರುವ ಕಮಲಜಿತ್ ಸಿಂಗ್ ಜೊತೆ ನಡೆಯಿತು.
ಖಾಂಡ್ವಾದ ಐತಿಹಾಸಿಕ ಮಹಾದೇವಗಡ ದೇವಸ್ಥಾನದಲ್ಲಿ ಎರಡೂ ದಂಪತಿಗಳಿಗೆ ವಿಶೇಷ ವಿವಾಹ ಸಮಾರಂಭವನ್ನು ಆಯೋಜಿಸಲಾಗಿತ್ತು. ದೇವಾಲಯದ ಅರ್ಚಕ ರಾಜೇಶ ಪಾರಾ ಅವರು ಮಾತನಾಡಿ, ಇಬ್ಬರು ಹುಡುಗಿಯರೂ ಪೂರ್ಣ ಭಕ್ತಿಯಿಂದ ಮತ್ತು ಒಪ್ಪಿಗೆಯೊಂದಿಗೆ ಸನಾತನ ಧರ್ಮ ಸ್ವೀಕರಿಸಿದ್ದಾರೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಮೇಘನ ಮಾತನಾಡಿ, ಭಗವಾನ್ ಶ್ರೀ ರಾಮ ಮತ್ತು ಸೀತಾ ಮಾತೆಯವರ ಕಥೆಯು ಜನರನ್ನು ಸನಾತನ ಧರ್ಮದ ಕಡೆಗೆ ಆಕರ್ಷಿಸುತ್ತದೆ ಎಂದರು.