ನ್ಯೂಯಾರ್ಕ್ – ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರು ವಿಶ್ವಸಂಸ್ಥೆಗೆ ನೀಡಲಾಗುತ್ತಿದ್ದ 19 ಸಾವಿರ ಕೋಟಿ ರೂಪಾಯಿಗಳ ನಿಧಿಯನ್ನು ತಡೆಹಿಡಿದಿದ್ದಾರೆ. ವಿಶ್ವಸಂಸ್ಥೆ ದಿವಾಳಿತನದ ಅಂಚಿನಲ್ಲಿದೆ ಎಂದು ಟ್ರಂಪ್ ಕಾರಣ ನೀಡಿದ್ದಾರೆ.
1. ಆರ್ಥಿಕ ಮುಗ್ಗಟ್ಟಿನಿಂದಾಗಿ ವಿಶ್ವಸಂಸ್ಥೆ ತನ್ನ ಹಲವು ವಿಭಾಗಗಳಿಂದ 3 ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಯೋಜನೆಯಲ್ಲಿದೆ.
2. 2025 ನೇ ವರ್ಷಕ್ಕೆ ವಿಶ್ವಸಂಸ್ಥೆಯ ಒಟ್ಟು ಬಜೆಟ್ 32 ಸಾವಿರ ಕೋಟಿ ರೂಪಾಯಿಗಳಿದೆ. ಆರ್ಥಿಕ ಮುಗ್ಗಟ್ಟನ್ನು ನಿವಾರಿಸಲು ವಿಶ್ವಸಂಸ್ಥೆ ಈಗಾಗಲೇ ತನ್ನ ಬಜೆಟ್ ವನ್ನು ಶೇಖಡ 17 ರಷ್ಟು ಕಡಿಮೆ ಮಾಡುವ ಯೋಜನೆಯನ್ನು ರೂಪಿಸಿದೆ.
3. ವಿಶ್ವಸಂಸ್ಥೆಯ ಬಜೆಟ್ನಲ್ಲಿ ಚೀನಾದ ಪಾಲು ಶೇಕಡಾ 20 ರಷ್ಟಿದೆ.
4. ವಿಶ್ವಸಂಸ್ಥೆಗೆ ಬರುವ ಹಣವನ್ನು ಸದಸ್ಯ ರಾಷ್ಟ್ರಗಳ ಆರ್ಥಿಕ ಸಾಮರ್ಥ್ಯದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.
5. 2024 ರಲ್ಲಿ, ಅಮೆರಿಕ, ಅರ್ಜೆಂಟೀನಾ, ಮೆಕ್ಸಿಕೋ, ವೆನೆಜುವೆಲಾ ಮುಂತಾದ 41 ದೇಶಗಳು 7 ಸಾವಿರ ಕೋಟಿ ರೂಪಾಯಿಗಳ ಬಾಕಿಯನ್ನು ಹೊಂದಿದ್ದವು.