22 ಪಾಕಿಸ್ತಾನಿ ಮಹಿಳೆಯರು ದೀರ್ಘಾವಧಿ ವೀಸಾ ಪಡೆದು ಮುರಾದಾಬಾದ್ ನಲ್ಲಿ ನೆಲೆಸಿರುವುದು ಬಹಿರಂಗ !

  • ಈ ಮಹಿಳೆಯರು ಮದುವೆಯಾಗಿ ೯೫ ಮಕ್ಕಳನ್ನು ಹೆತ್ತಿದ್ದಾರೆ !

  • ಈ ಮಕ್ಕಳಲ್ಲಿ ಅನೇಕರ ವಿವಾಹವೂ ಆಗಿದೆ !

(ವೀಸಾ ಎಂದರೆ ಒಂದು ದೇಶದಲ್ಲಿ ಪ್ರವೇಶಿಸಲು, ಒಂದು ದೇಶವನ್ನು ತೊರೆಯಲು ಅಥವಾ ಒಂದು ದೇಶದ ಮೂಲಕ ಪ್ರಯಾಣಿಸಲು ಅನುಮತಿ ನೀಡುವ ಅಧಿಕೃತ ಕಾಗದ ಅಥವಾ ಮುದ್ರೆ.)

ಮುರಾದಾಬಾದ್ (ಪಾಕಿಸ್ತಾನ) – ದೀರ್ಘಾವಧಿ ವೀಸಾದ ಮೇಲೆ ವಾಸಿಸುತ್ತಿರುವ ಪಾಕಿಸ್ತಾನಿ ನಾಗರಿಕರನ್ನು ಪೊಲೀಸರು ವಿಚಾರಣೆ ನಡೆಸಿದಾಗ 22 ಮಹಿಳೆಯರು ಪಾಕಿಸ್ತಾನದವರೆಂದು ತಿಳಿದುಬಂದಿದೆ. ಇವರೆಲ್ಲರೂ ಭಾರತಕ್ಕೆ ಬಂದು ಮದುವೆಯಾಗಿದ್ದಾರೆ. ಅವರೆಲ್ಲರಿಗೂ ಒಟ್ಟು 95 ಮಕ್ಕಳೂ ಆಗಿದ್ದಾರೆ. ಇವರ ಈ ಮಕ್ಕಳಲ್ಲಿ ಅನೇಕರ ಮದುವೆಯೂ ಸಹ ಆಗಿದೆ ಮತ್ತು ಅವರಿಗೂ ಮಕ್ಕಳಾಗಿದ್ದಾರೆ. ಈ ಎಲ್ಲ 22 ಮಹಿಳೆಯರ ಆಧಾರ್ ಕಾರ್ಡ್ ಮಾಡಿಸಲಾಗಿದೆ. ಅವರು ಸರಕಾರದಿಂದ ನೀಡಲಾಗುವ ಪಡಿತರವನ್ನೂ ಕೂಡ ಪಡೆಯುತ್ತಿದ್ದಾರೆ. ಇವರೆಲ್ಲರಿಗೂ ಇನ್ನೂ ಭಾರತೀಯ ಪೌರತ್ವ ಸಿಕ್ಕಿಲ್ಲ ಎಂಬುದು ತಿಳಿದುಬಂದಿದೆ.

ಸಂಪಾದಕೀಯ ನಿಲುವು

ಧರ್ಮಶಾಲೆಯಾಗಿರುವ ಭಾರತ ! ಈ ಘಟನೆಯಿಂದ ಭಾರತೀಯ ವ್ಯವಸ್ಥೆಗಳ ಮೇಲೆ ನಗಬೇಕೋ ಅಥವಾ ಅಳಬೇಕೋ?, ಎಂಬುದೇ ತಿಳಿಯುತ್ತಿಲ್ಲ ! ಈಗ ಇಷ್ಟು ವರ್ಷಗಳ ನಂತರ ಈ ಮಾಹಿತಿ ಹೊರಬರುತ್ತಿದೆ, ಇದರಿಂದ ಭಾರತದ ಆಂತರಿಕ ವ್ಯವಸ್ಥೆ ಎಷ್ಟು ನಿಷ್ಪ್ರಯೋಜಕವಾಗಿದೆ, ಎಂದು ತಿಳಿಯುತ್ತದೆ ! ಇಂತಹ ಪರಿಸ್ಥಿತಿ ಇನ್ನೂ ಎಷ್ಟು ಕಡೆ ಇರಬಹುದು ಎಂದು ಊಹಿಸಲೂ ಸಾಧ್ಯವಿಲ್ಲ !