ಇಸ್ಲಾಮಿಕ್ ದೇಶಗಳ ಸಂಘಟನೆ ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ ಆಪರೇಶನ್’ನಿಂದ ಪಾಕಿಸ್ತಾನಕ್ಕೆ ಬೆಂಬಲ
ನ್ಯೂಯಾರ್ಕ್ (ಅಮೆರಿಕ) – ಪಹಲ್ಗಾಮ್ ನ ಭಯೋತ್ಪಾದಕ ದಾಳಿಯ ಬಗ್ಗೆ ಪಾಕಿಸ್ತಾನದ ಮೇಲೆ ಭಾರತ ಮಾಡಿರುವ ಆರೋಪಗಳು ಸುಳ್ಳಾಗಿವೆ. ಈ ಆರೋಪಗಳಿಂದ ದಕ್ಷಿಣ ಏಷ್ಯಾದಲ್ಲಿ ಉದ್ವಿಗ್ನತೆ ಹೆಚ್ಚುತ್ತಿದೆ ಎಂದು ನ್ಯೂಯಾರ್ಕ್ ನ ‘ಆರ್ಗನೈಸೇಶನ್ ಆಫ್ ಇಸ್ಲಾಮಿಕ್ ಕೋ ಆಪರೇಶನ್’ ಅಂದರೆ ಒ.ಐ.ಸಿ. ಎಂಬ 57 ಇಸ್ಲಾಮಿಕ್ ದೇಶಗಳ ಸಂಘಟನೆ ಹೇಳಿಕೊಂಡಿದೆ. ‘ಕಾಶ್ಮೀರಕ್ಕೆ ಸ್ವಯಂ ನಿರ್ಣಯದ ಹಕ್ಕನ್ನು ನಿರಾಕರಿಸಲಾಗುತ್ತಿದೆ, ಇದನ್ನು ಸಂಯುಕ್ತ ರಾಷ್ಟ್ರ ಭದ್ರತಾ ಮಂಡಳದ ಸಂಬಂಧಿತ ನಿರ್ಣಯಗಳಲ್ಲಿ ಖಾತರಿಪಡಿಸಲಾಗಿದೆ’, ಎಂದು ಸಂಘಟನೆ ಹೇಳಿದೆ.
ಒಐಸಿ ಹೇಳುವಂತೆ, ಇಂತಹ ಆರೋಪಗಳಿಂದ ಈಗಾಗಲೇ ಅಸ್ಥಿರವಾಗಿರುವ ಪರಿಸ್ಥಿತಿ ಮತ್ತಷ್ಟು ಹದಗೆಡುವ ಭೀತಿ ಇದೆ. ಎಲ್ಲ ರೀತಿಯ ಭಯೋತ್ಪಾದನೆಯನ್ನು, ಅದು ಎಲ್ಲಿ ಮತ್ತು ಯಾರಿಂದಲೇ ಮಾಡಲ್ಪಟ್ಟಿದ್ದರೂ ಸಹ ಖಂಡಿಸಲಾಗುತ್ತದೆ. (ಒಐಸಿಯ ಮಾತು ಕೇವಲ ಆಚಾರ ಹೇಳುವುದು ಮತ್ತು ಬದನೆಕಾಯಿ ತಿನ್ನುವಂತೆ ಇದೆ ! ಪಾಕಿಸ್ತಾನ ಜಗತ್ತಿನಾದ್ಯಂತ ಭಯೋತ್ಪಾದನೆಗೆ ಆದರ್ಶ ದೇಶವಾಗಿದ್ದರೂ ಅದನ್ನು ಬೆಂಬಲಿಸುವ ಒಐಸಿಯ ಇಂತಹ ಖಂಡನೆಯೆಂದರೆ, ಕೇವಲ ಮೊಸಳೆ ಕಣ್ಣೀರು ! – ಸಂಪಾದಕರು)
ಸಂಪಾದಕೀಯ ನಿಲುವುಇಸ್ಲಾಮಿಕ್ ದೇಶಗಳ ಸಂಘಟನೆಯ ಬೆಂಬಲ ಪಾಕಿಸ್ತಾನಕ್ಕೆ ಸಿಗದಿದ್ದರೆ ಮಾತ್ರ ಅದು ಅಚ್ಚರಿ ! ಇಂತಹ ಸಂಘಟನೆಗಳಿಗೆ ಭಾರತ ಸೊಪ್ಪು ಹಾಕುವುದಿಲ್ಲ ಎಂದು ಈ ಹಿಂದೆಯೇ ತೋರಿಸಿಕೊಟ್ಟಿದೆ ! |