ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್‌ಗೆ ಬಲೂಚ್ ನಾಯಕನ ತಿರುಗೇಟು!
ಪೇಶಾವರ್ (ಪಾಕಿಸ್ತಾನ) – ೧೯೭೧ ರಲ್ಲಿ ಪಾಕಿಸ್ತಾನದ ಸೇನೆ ಹೀನಾಯವಾಗಿ ಸೋಲನುಭವಿಸಿತ್ತು. ಆ ಸಮಯದಲ್ಲಿ ೯೩ ಸಾವಿರ ಪಾಕಿಸ್ತಾನಿ ಸೈನಿಕರು ಕೇವಲ ಶರಣಾಗತರಾಗಲಿಲ್ಲ, ಅವರ ಪ್ಯಾಂಟ್‌ಗಳನ್ನು ಸಹ ತೆಗೆಯಲಾಗಿತ್ತು ಮತ್ತು ಅವು ಇಂದಿಗೂ ಬಾಂಗ್ಲಾದೇಶದಲ್ಲಿ ನೇತಾಡುತ್ತಿವೆ. ಈ ಇತಿಹಾಸವನ್ನು ಪಾಕಿಸ್ತಾನದ ಶಾಲಾ ಪಠ್ಯಪುಸ್ತಕಗಳಲ್ಲಿ ಕಲಿಸಬೇಕು, ಇದರಿಂದ ಮುಂದಿನ ೧೦ ತಲೆಮಾರುಗಳಿಗೂ ಅದು ನೆನಪಿನಲ್ಲಿರುತ್ತದೆ ಎಂದು ಬಲೂಚಿಸ್ತಾನದ ಮಾಜಿ ಮುಖ್ಯಮಂತ್ರಿ ಮತ್ತು ಪ್ರಮುಖ ನಾಯಕ ಅಖ್ತರ್ ಮೆಂಗಲ್ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್‌ಗೆ ತಿರುಗೇಟು ನೀಡಿದ್ದಾರೆ.
🇧🇩👖🔥 Baloch Leader Akhtar Mengal Schools Pak Army Chief!
Hits out at Gen. Asim Munir with a stinging reminder of 1971 — when 93,000 surrendered soldiers didn’t just lose a war, they lost their pants, still hanging in Bangladesh!
Time for Pakistan to revise its history books!… pic.twitter.com/XdMCoKRSs2
— Sanatan Prabhat (@SanatanPrabhat) May 6, 2025
ಇಸ್ಲಾಮಾಬಾದ್‌ನ ಕಾರ್ಯಕ್ರಮವೊಂದರಲ್ಲಿ ಜನರಲ್ ಅಸೀಮ್ ಮುನೀರ್, ‘ಬಲೂಚಿಸ್ತಾನವು ಪಾಕಿಸ್ತಾನದ ಹಣೆಯ ಮೇಲಿನ ತಿಲಕ. ಬೆರಳೆಣಿಕೆಯಷ್ಟು ಜನರು ಅದನ್ನು ಪಾಕಿಸ್ತಾನದಿಂದ ಬೇರ್ಪಡಿಸಲು ಪ್ರಯತ್ನಿಸುತ್ತಿದ್ದಾರೆ; ಆದರೆ ಮುಂದಿನ ೧೦ ತಲೆಮಾರುಗಳು ಸಹ ಅದನ್ನು ಬೇರ್ಪಡಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದರು. ಇದಕ್ಕೆ ಮೆಂಗಲ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.
ಅಖ್ತರ್ ಮೆಂಗಲ್ ಮಾತು ಮುಂದುವರೆಸಿ, ಕಳೆದ ೭೫ ವರ್ಷಗಳಿಂದ ಬಲೂಚ್ ಜನರು ಪಾಕಿಸ್ತಾನ ಸರಕಾರ ಮತ್ತು ಸೈನ್ಯದ ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಅವರ ಬೆದರಿಕೆಗಳಿಗೆ ನಾವು ಹೆದರುವುದಿಲ್ಲ. ನಾವು ಕಿರುಕುಳವನ್ನು ಸಹಿಸಿದ್ದೇವೆ ಮತ್ತು ಪ್ರತಿಯೊಂದು ಗಾಯವೂ ನಮಗೆ ಇಂದಿಗೂ ನೆನಪಿದೆ ಎಂದಿದ್ದಾರೆ.