ಸಿಂಗಾಪುರದಲ್ಲಿಯೂ ಶೇ. 30 ರಷ್ಟು ಮುಸ್ಲಿಮರು ಇಸ್ಲಾಂ ತ್ಯಜಿಸಿದ್ದಾರೆ
ವಾಷಿಂಗ್ಟನ್ – ‘ದಿ ಪ್ಯೂ ರಿಸರ್ಚ್ ಸೆಂಟರ್’ನ ವರದಿಯ ಪ್ರಕಾರ, ಅಮೆರಿಕದಲ್ಲಿ ಮುಸ್ಲಿಮರ ಜನಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬರುತ್ತಿದೆ. ಅಮೆರಿಕದಲ್ಲಿ ಶೇ. 25 ಕ್ಕಿಂತ ಹೆಚ್ಚು ಮುಸ್ಲಿಮರು ಇಸ್ಲಾಂ ತೊರೆದು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಿದ್ದಾರೆ ಅಥವಾ ನೇರವಾಗಿ ನಾಸ್ತಿಕರಾಗಿದ್ದಾರೆ. ಈ ಬಗ್ಗೆ ‘ದಿ ಪ್ಯೂ ರಿಸರ್ಚ್ ಸೆಂಟರ್’ ವಾಷಿಂಗ್ಟನ್ ಮೂಲದ ಸಂಸ್ಥೆಯು ಮಾಹಿತಿ ನೀಡಿದೆ. ಈ ಸಂಸ್ಥೆಯು ಅಮೆರಿಕ ಮತ್ತು ಜಗತ್ತನ್ನು ಕಾಡುತ್ತಿರುವ ಸಾಮಾಜಿಕ ಸಮಸ್ಯೆಗಳು, ಸಾರ್ವಜನಿಕ ಅಭಿಪ್ರಾಯ ಮುಂತಾದ ವಿಷಯಗಳ ಕುರಿತು ಮಾಹಿತಿಯನ್ನು ನೀಡುತ್ತದೆ.
1. ಈ ವರದಿಯ ಪ್ರಕಾರ, ಕೆಲವು ಮುಸ್ಲಿಂ ಪ್ರಾಬಲ್ಯದ ದೇಶಗಳಲ್ಲಿ ಇಸ್ಲಾಂ ತೊರೆಯುವ ಜನರ ಸಂಖ್ಯೆ ಬಹಳ ಹೆಚ್ಚಾಗಿದೆ. ಟರ್ಕಿಯಲ್ಲಿ ಮುಸ್ಲಿಮರಾಗಿ ಜನಿಸಿದ ಸುಮಾರು ಶೇ. 4 ರಷ್ಟು ಜನರು ಈಗ ತಮ್ಮನ್ನು ಮುಸ್ಲಿಮರೆಂದು ಪರಿಗಣಿಸುವುದಿಲ್ಲ. ಭಾರತದಲ್ಲಿ ಈ ಸಂಖ್ಯೆ ಕೇವಲ ಶೇ. 1 ರಷ್ಟು ಆಗಿದೆ.
2. ಭಾರತದಲ್ಲಿ ಮತಾಂತರವು ಯಾವಾಗಲೂ ಸೂಕ್ಷ್ಮ ಮತ್ತು ವಿವಾದಾತ್ಮಕ ವಿಷಯವಾಗಿದೆ; ಆದರೆ ಯುರೋಪ್ ಮತ್ತು ಅಮೆರಿಕದಂತಹ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಧರ್ಮವನ್ನು ತೊರೆದು ನಾಸ್ತಿಕರಾಗುತ್ತಿದ್ದಾರೆ ಅಥವಾ ಬೇರೆ ಧರ್ಮವನ್ನು ಅನುಸರಿಸಲು ಪ್ರಾರಂಭಿಸಿದ್ದಾರೆ.
3. ಸಿಂಗಾಪುರದಲ್ಲಿಯೂ ಸುಮಾರು ಶೇ. 30 ರಷ್ಟು ಮುಸ್ಲಿಮರು ಇಸ್ಲಾಂ ಧರ್ಮವನ್ನು ತೊರೆದಿದ್ದಾರೆ, ಇದು ದೊಡ್ಡ ಸಂಖ್ಯೆ ಎಂದು ಪರಿಗಣಿಸಲಾಗಿದೆ.
ಸಂಪಾದಕೀಯ ನಿಲುವುಜಗತ್ತಿನ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಮುಸ್ಲಿಮರು ಇಸ್ಲಾಂನಿಂದ ದೂರ ಸರಿಯುತ್ತಿದ್ದಾರೆ, ಈ ಬಗ್ಗೆ ಭಾರತದಲ್ಲಿ ಮುಸ್ಲಿಮರನ್ನು ಓಲೈಸುವ ಜಾತ್ಯತೀತವಾದಿಗಳು ಏನು ಹೇಳುವರು? |