|
ಢಾಕಾ (ಬಾಂಗ್ಲಾದೇಶ) – ಶೇಖ್ ಹಸೀನಾ ಅವರ ಅಧಿಕಾರದ ಬದಲಾವಣೆಯ ನಂತರ ಬಾಂಗ್ಲಾದೇಶದಲ್ಲಿ ಕಟ್ಟರವಾದ ಮತ್ತು ಧಾರ್ಮಿಕ ಮತಾಂಧತೆ ಹೆಚ್ಚಾಗಿದೆ. ಬಾಂಗ್ಲಾದೇಶದ ಕಟ್ಟರವಾದಿ ಇಸ್ಲಾಮಿ ಗುಂಪು ‘ಹಿಫಾಜತ್-ಎ-ಇಸ್ಲಾಂ’ ಸಾವಿರಾರು ಬೆಂಬಲಿಗರೊಂದಿಗೆ ಇತ್ತೀಚೆಗೆ ರಾಜಧಾನಿ ಢಾಕಾ ನಗರದ ಸುಹ್ರಾವರ್ದಿ ಉದ್ಯಾನದಲ್ಲಿ ಶಕ್ತಿ ಪ್ರದರ್ಶನ ಮಾಡಿತು. ಮೊಹಮ್ಮದ್ ಯೂನಸ್ ಅವರ ಮಧ್ಯಂತರ ಸರಕಾರದ ಮಹಿಳಾ ವ್ಯವಹಾರ ಸುಧಾರಣಾ ಆಯೋಗವನ್ನು ವಿರೋಧಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿತ್ತು; ಏಕೆಂದರೆ ಮಹಿಳಾ ವ್ಯವಹಾರ ಸುಧಾರಣಾ ಆಯೋಗದ ಶಿಫಾರಸುಗಳು ಇಸ್ಲಾಂ ವಿರೋಧಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ‘ಹಿಫಾಜತ್-ಎ-ಇಸ್ಲಾಂ’ ಮದರಸಾಗಳು ಅಥವಾ ಧಾರ್ಮಿಕ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಪ್ರಭಾವಿ ಒತ್ತಡ ಗುಂಪು ಎಂದು ಪರಿಗಣಿಸಲಾಗಿದೆ.
🚨 Massive Islamist protest in Bangladesh! 🇧🇩
Radicals demand removal of the Women’s Affairs Reform Commission, calling its gender-equality push “un-Islamic.” 🤯
Disturbing visuals show mobs beating & shoeing a woman’s effigy — a chilling attack on women’s rights.
As violence… pic.twitter.com/CQqroH98gk
— Sanatan Prabhat (@SanatanPrabhat) May 5, 2025
1. ಈ ಸಭೆಯಲ್ಲಿ ಮಾತನಾಡಿದ ಕಟ್ಟರವಾದಿಗಳು ಮುಸ್ಲಿಂ ಮಹಿಳೆಯರಿಗೆ ಆಸ್ತಿಯಲ್ಲಿ ಮತ್ತು ಇತರ ಹಕ್ಕುಗಳಲ್ಲಿ ಸಮಾನ ಹಕ್ಕುಗಳನ್ನು ನೀಡುವ ಆಯೋಗದ ಶಿಫಾರಸುಗಳನ್ನು ಗುರಿಯಾಗಿಸಿಕೊಂಡರು.
2. ‘ಹಿಫಾಜತ್-ಎ-ಇಸ್ಲಾಂ’ನ ಹಿರಿಯ ನಾಯಕ ಮೌಲಾನಾ ಮಹಫುಜುಲ್ ಹಕ್ ಅವರು 12 ಬೇಡಿಕೆಗಳ ಪಟ್ಟಿಯನ್ನು ಸಲ್ಲಿಸಿದರು. ಇದರಲ್ಲಿ ಮೊದಲ ಬೇಡಿಕೆ ಏನೆಂದರೆ, ಪ್ರಸ್ತುತ ಮಹಿಳಾ ಸುಧಾರಣಾ ಆಯೋಗವನ್ನು ರದ್ದುಗೊಳಿಸಿ ಇಸ್ಲಾಮಿ ವಿದ್ವಾಂಸರು ಮತ್ತು ಮಹಿಳಾ ಪ್ರತಿನಿಧಿಗಳನ್ನು ಒಳಗೊಂಡ ಹೊಸ ಆಯೋಗವನ್ನು ರಚಿಸುವುದು.
3. ಸಂಘಟನೆಯ ಮತ್ತೊಬ್ಬ ನಾಯಕ ಮಾಮುನುಲ್ ಹಕ್ ಅವರು ಆಯೋಗದ ಸದಸ್ಯರನ್ನು ಶಿಕ್ಷಿಸಬೇಕೆಂದು ಒತ್ತಾಯಿಸಿದರು; ಏಕೆಂದರೆ ಅವರ ಪ್ರಕಾರ ಪುರುಷರು ಮತ್ತು ಮಹಿಳೆಯರು ಎಂದಿಗೂ ಸಮಾನರಾಗಲು ಸಾಧ್ಯವಿಲ್ಲ.
4. ಮದರಸಾದ ಶಿಕ್ಷಕ ಮುಹಮ್ಮದ್ ಶಿಹಾಬುದ್ದೀನ್ ಅವರು ಕುರಾನ್‌ನಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಜೀವನದ ನಿರ್ದಿಷ್ಟ ನಿಯಮಗಳನ್ನು ಹೇಳಲಾಗಿದೆ ಮತ್ತು ಅದರ ಹೊರತಾಗಿ ಯಾವುದೇ ಆಲೋಚನೆ ಮಾಡಬಾರದು ಎಂದು ಹೇಳಿದರು.
ಸಂಪಾದಕೀಯ ನಿಲುವುಇಂತಹವರನ್ನು ಈಗ ಯಾರೂ ಪ್ರತಿಗಾಮಿ ಅಥವಾ ಮಹಿಳಾ ವಿರೋಧಿ ಎಂದು ಏಕೆ ಕರೆಯುವುದಿಲ್ಲ? |