ಅಲಿಗಢ (ಉತ್ತರ ಪ್ರದೇಶ) – ಅಲಿಗಢ ಮಹಾನಗರ ಪಾಲಿಕೆ ಮತ್ತು ಜಿಲ್ಲಾಡಳಿತವು ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು (ಎಎಂಯು) ಅಕ್ರಮವಾಗಿ ಅತಿಕ್ರಮಿಸಿದ್ದ 126 ಕೋಟಿ ರೂಪಾಯಿ ಮೌಲ್ಯದ ಭೂಮಿಯನ್ನು ಮುಕ್ತಗೊಳಿಸಿದೆ. ಈ ಭೂಮಿಯನ್ನು ಅನೇಕ ವರ್ಷಗಳಿಂದ ಜನರು ಅಕ್ರಮವಾಗಿ ಅತಿಕ್ರಮಿಸಿಕೊಂಡಿದ್ದರು. ಸರಕಾರದ ಸೂಚನೆಯ ಮೇರೆಗೆ ಸರಕಾರಿ ಅಧಿಕಾರಿಗಳ ತಂಡವು ಸ್ಥಳಕ್ಕೆ ತಲುಪಿ, ಬುಲ್ಡೋಜರ್ಗಳನ್ನು ಬಳಸಿ ಅಕ್ರಮ ಅತಿಕ್ರಮಣವನ್ನು ತೆರವುಗೊಳಿಸಿತು ಮತ್ತು ಭೂಮಿಯ ಜಾಗದಲ್ಲಿ ಮಹಾನಗರ ಪಾಲಿಕೆಯ ಮಾಲೀಕತ್ವದ ಫಲಕವನ್ನು ಹಾಕಲಾಯಿತು.
ಈ ಬಗ್ಗೆ ಮಾತನಾಡಿದ ಮಹಾನಗರ ಪಾಲಿಕೆ ಆಯುಕ್ತ ವಿನೋದ ಕುಮಾರ ಅವರು, ಭವಿಷ್ಯದಲ್ಲಿಯೂ ಇಂತಹ ಕ್ರಮಗಳು ಮುಂದುವರಿಯಲಿವೆ. ಸರಕಾರಿ ಆಸ್ತಿಗಳನ್ನು ಅತಿಕ್ರಮಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ‘ಎಎಂಯು’ ಮಹಾನಗರ ಪಾಲಿಕೆಯ ಅನ್ಯ ಭೂಮಿಗಳನ್ನೂ ಸಹ ಅತಿಕ್ರಮಿಸಿದೆ. ಇನ್ನಷ್ಟು ತನಿಖೆಯ ಬಳಿಕ ಅವನ್ನೂ ಕೂಡ ಮುಕ್ತಗೊಳಿಸಲಾಗುವುದು ಎಂದು ಅವರು ತಿಳಿಸಿದರು.
ಸಂಪಾದಕೀಯ ನಿಲುವುಕೇವಲ ಸರಕಾರಿ ಭೂಮಿಯನ್ನು ಅತಿಕ್ರಮಣದಿಂದ ಮುಕ್ತಗೊಳಿಸಿದರೆ ಸಾಲದು, ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದು ಅವಶ್ಯಕ! |