ಮೊಘಲರ ಕುರಿತು ೮ ಪಠ್ಯ, ಹಿಂದೂ ಸಾಮ್ರಾಜ್ಯಗಳ ಕುರಿತು ಕೇವಲ ೧ ಪಠ್ಯ ಏಕೆ – ಖ್ಯಾತ ನಟ ಆರ್. ಮಾಧವನ್

ಖ್ಯಾತ ನಟ ಆರ್. ಮಾಧವನ್ ಅವರಿಂದ ಇತಿಹಾಸದ ಪಠ್ಯಕ್ರಮದ ಕುರಿತು ಪ್ರಶ್ನೆ

ಮುಂಬಯಿ – ನಾನು ಶಾಲೆಯಲ್ಲಿ ಇತಿಹಾಸವನ್ನು ಅಭ್ಯಾಸ ಮಾಡುತ್ತಿದ್ದಾಗ, ಮೊಘಲರ ಮೇಲೆ ೮ ಪಾಠಗಳು, ಹರಪ್ಪ ಮತ್ತು ಮೊಹೆಂಜೊದಾರೊ ಸಂಸ್ಕೃತಿಯ ಕುರಿತು ೨ ಪಾಠಗಳು, ಬ್ರಿಟಿಷ್ ಆಳ್ವಿಕೆ ಮತ್ತು ಸ್ವಾತಂತ್ರ್ಯ ಹೋರಾಟದ ಮೇಲೆ ೪ ಪಾಠಗಳು ಮತ್ತು ದಕ್ಷಿಣದ ಚೋಳ, ಪಾಂಡ್ಯ, ಪಲ್ಲವ ಮತ್ತು ಚೇರ ಈ ರಾಜ್ಯಗಳ ಮೇಲೆ ಕೇವಲ ೧ ಪಾಠವಿತ್ತು. ನಾನು ಇದನ್ನು ಹೇಳಿದರೆ ಭವಿಷ್ಯದಲ್ಲಿ ನನಗೆ ತೊಂದರೆಯಾಗಬಹುದು ಎಂದು ನನಗೆ ತಿಳಿದಿದೆ, ಆದರೆ ನಾನು ಅದನ್ನು ಹೇಳುತ್ತೇನೆ ಎಂದು ಖ್ಯಾತ ನಟ ಆರ್. ಮಾಧವನ್ ಒಂದು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.

ಚೋಳ ಸಾಮ್ರಾಜ್ಯದ ಇತಿಹಾಸ ೨ ಸಾವಿರದ ೪೦೦ ವರ್ಷಗಳಷ್ಟು ಹಳೆಯದು

ಆರ್. ಮಾಧವನ್ ಮಾತು ಮುಂದುವರೆಸಿ, ಬ್ರಿಟಿಷರು ಮತ್ತು ಮೊಘಲರು ಸುಮಾರು ೮೦೦ ವರ್ಷಗಳ ಕಾಲ ನಮ್ಮನ್ನು ಆಳಿದರು; ಆದರೆ ಚೋಳ ಸಾಮ್ರಾಜ್ಯದ ಪರಂಪರೆ ೨ ಸಾವಿರದ ೪೦೦ ವರ್ಷಗಳಷ್ಟು ಹಳೆಯದು. ಚೋಳ ರಾಜವಂಶವು ಸಮುದ್ರ ಪ್ರಯಾಣ ಮತ್ತು ನೌಕಾ ಶಕ್ತಿಯ ವಿಷಯದಲ್ಲಿ ಮುಂಚೂಣಿಯಲ್ಲಿತ್ತು. ಅವರ ವ್ಯಾಪಾರವು ರೋಮ್‌ನವರೆಗೆ ಹರಡಿತ್ತು ಮತ್ತು ಅವರು ತಮ್ಮ ಸಮುದ್ರಯಾನದ ಮೂಲಕ ಅಂಗಕೋರವಾಟ (ಕಾಂಬೋಡಿಯಾ) ವರೆಗೆ ದೇವಾಲಯಗಳನ್ನು ನಿರ್ಮಿಸಿದರು. ಜೈನ ಧರ್ಮ, ಬೌದ್ಧ ಮತ್ತು ಹಿಂದೂ ಧರ್ಮವು ಚೀನಾದಲ್ಲಿ ಹರಡಿತು. ಕೊರಿಯಾದಲ್ಲಿ ಇನ್ನೂ ಅನೇಕ ತಮಿಳು ಪದಗಳನ್ನು ಬಳಸಲಾಗುತ್ತದೆ, ಇದು ತಮಿಳು ಸಂಸ್ಕೃತಿ ಅಲ್ಲಿಗೆ ತಲುಪಿತ್ತು ಎಂಬುದನ್ನು ಸೂಚಿಸುತ್ತದೆ; ಆದರೆ ಇಂತಹ ಮಹಾನ್ ಮತ್ತು ಸಮೃದ್ಧ ಪರಂಪರೆಯು ನಮ್ಮ ಪುಸ್ತಕಗಳಲ್ಲಿ ಕೇವಲ ಒಂದು ಪಾಠಕ್ಕೆ ಸೀಮಿತವಾಗಿತ್ತು.

ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ವೈಜ್ಞಾನಿಕ ಜ್ಞಾನವನ್ನು ಗೇಲಿ ಮಾಡಲಾಗುತ್ತದೆ!

ಆರ್. ಮಾಧವನ್ ಕೊನೆಯಲ್ಲಿ, ಈ ಪಠ್ಯಕ್ರಮವನ್ನು ಯಾರು ನಿರ್ಧರಿಸಿದರು? ತಮಿಳು ಜಗತ್ತಿನ ಅತ್ಯಂತ ಹಳೆಯ ಭಾಷೆಯಾಗಿದೆ; ಆದರೆ ಅದರ ಬಗ್ಗೆ ಯಾರಿಗೂ ತಿಳಿದಿಲ್ಲ. ನಮ್ಮ ಸಂಸ್ಕೃತಿಯಲ್ಲಿ ಅಡಗಿರುವ ವೈಜ್ಞಾನಿಕ ಜ್ಞಾನವನ್ನು ಇನ್ನೂ ಗೇಲಿ ಮಾಡಲಾಗುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೇವಲ ಮುಸಲ್ಮಾನರ ಓಲೈಕೆಗಾಗಿ ಹಿಂದೂಗಳ ಸಮೃದ್ಧ ಇತಿಹಾಸವನ್ನು ಅವರಿಂದ ಮರೆಮಾಚಲಾಗಿದೆ. ಇದರಲ್ಲಿ ಈಗ ಬದಲಾವಣೆಯಾಗುತ್ತಿದೆ; ಆದರೆ ಕೇವಲ ಬದಲಾವಣೆ ನಿರೀಕ್ಷಿತವಲ್ಲ, ಬದಲಿಗೆ ಇತಿಹಾಸವನ್ನು ಹೀಗೆ ತಿರುಚಿ ಸತ್ಯವನ್ನು ಮುಚ್ಚಿಟ್ಟವರ ಮೇಲೆ ಕ್ರಮ ಕೈಗೊಳ್ಳುವುದು ಅವಶ್ಯಕ!