ಬಾಂಗ್ಲಾದೇಶದ ನಿವೃತ್ತ ಮೇಜರ್ ಜನರಲ್ ಎ.ಎಲ್.ಎಂ. ಫಜ್ಲುರ್ ರೆಹಮಾನ್ ಅವರ ಹುರುಳಿಲ್ಲದ ಮಾತು

ಢಾಕಾ (ಬಾಂಗ್ಲಾದೇಶ) – ನೆರೆಯ ರಾಷ್ಟ್ರ ಪಾಕಿಸ್ತಾನದ ಮೇಲೆ ದಾಳಿ ಮಾಡಿದರೆ, ಬಾಂಗ್ಲಾದೇಶವು ಭಾರತದ ಈಶಾನ್ಯದಲ್ಲಿರುವ 7 ರಾಜ್ಯಗಳ ಮೇಲೆ ಹಿಡಿತ ಸಾಧಿಸಬೇಕು ಎಂದು ಬಾಂಗ್ಲಾದೇಶದ ನಿವೃತ್ತ ಮೇಜರ್ ಜನರಲ್ ಎ.ಎಲ್.ಎಂ. ಫಜ್ಲುರ್ ರೆಹಮಾನ್ ಅವರು ಹೇಳಿದ್ದಾರೆ. ನನಗೆ ಅನ್ನಿಸಿದಂತೆ ಈ ಸಂದರ್ಭದಲ್ಲಿ, ಚೀನಾದೊಂದಿಗೆ ಜಂಟಿಯಾಗಿ ಮಿಲಿಟರಿ ವ್ಯವಸ್ಥೆಯ ಕುರಿತು ಚರ್ಚೆಗಳನ್ನು ಪುನರಾರಂಭಿಸುವುದು ಅವಶ್ಯಕವಾಗಿದೆ, ಎಂದು ಫೇಸ್‌ಬುಕ್‌ನಲ್ಲಿ ಬಂಗಾಳಿ ಭಾಷೆಯಲ್ಲಿ ಬರೆದಿದ್ದಾರೆ.