|
ಭೋಪಾಲ್ (ಮಧ್ಯಪ್ರದೇಶ) – ನಗರದ ಪ್ರಸಿದ್ಧ ಟಿಐಟಿ ಎಂಜಿನಿಯರಿಂಗ್ ಕಾಲೇಜಿನ ಹಿಂದೂ ವಿದ್ಯಾರ್ಥಿನಿಯರನ್ನು ಪ್ರೀತಿಯ ಬಲೆಯಲ್ಲಿ ಕೆಡವಿ ಅವರ ಮೇಲೆ ಅತ್ಯಾಚಾರವೆಸಗುವುದು, ಅವರ ಅಶ್ಲೀಲ ವಿಡಿಯೋಗಳನ್ನು ಮಾಡಿ ಬೆದರಿಸಿ ಪದೇ ಪದೇ ಅತ್ಯಾಚಾರ ಮಾಡುತ್ತಿದ್ದ ಮುಸ್ಲಿಂ ದುಷ್ಕರ್ಮಿಗಳ ತಂಡದ ಕೃತ್ಯಗಳು ಬೆಳಕಿಗೆ ಬಂದಿವೆ. ಈ ದುಷ್ಕರ್ಮಿಗಳು ಅನೇಕ ಹಿಂದೂ ವಿದ್ಯಾರ್ಥಿನಿಯರನ್ನು ಲೈಂಗಿಕವಾಗಿ ಶೋಷಿಸಿ ಬೆದರಿಸಿ ಅವರನ್ನು ಮತಾಂತರಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ಪ್ರಕರಣದಲ್ಲಿ ಫರ್ಹಾನ್, ಸಾಹಿಲ್ ಮತ್ತು ಅಬ್ರಾರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಫರ್ಹಾನ್ ಈ ತಂಡದ ಮುಖ್ಯಸ್ಥ. ಈ ಕಾಮಕಾಂಡದ ಕೃತ್ಯದಲ್ಲಿ ಅನೇಕ ಮುಗ್ಧ ಹಿಂದೂ ಯುವತಿಯರ ಜೀವನ ನಾಶವಾಗಿದ್ದು, ಅವರಲ್ಲಿ ಕೆಲವರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 1992 ರಲ್ಲಿ ರಾಜಸ್ಥಾನದ ಅಜ್ಮೀರದಲ್ಲಿ ಶಾಲೆಯ ಹಿಂದೂ ವಿದ್ಯಾರ್ಥಿನಿಯರನ್ನು ಮುಸ್ಲಿಮರು ಲೈಂಗಿಕವಾಗಿ ಶೋಷಿಸಿದ್ದರು. ಭೋಪಾಲ್ನ ಈ ಕಾಮಕಾಂಡದ ಪ್ರಕರಣ ಮತ್ತು ಅಜ್ಮೀರ ಪ್ರಕರಣ ಒಂದೇ ರೀತಿಯಾಗಿವೆ ಎಂದು ಹೇಳಲಾಗುತ್ತಿದೆ.
2 ಸಹೋದರಿಯರ ದೂರಿನಿಂದ ಕಾಮಕಾಂಡ ಬಯಲು
ಫರ್ಹಾನ್ ಖಾನ್ ಕಾಲೇಜಿನ ಅನೇಕ ಹಿಂದೂ ವಿದ್ಯಾರ್ಥಿನಿಯರನ್ನು ಗುರಿಯಾಗಿಸಿಕೊಂಡಿದ್ದ. ಕೆಲವು ದಿನಗಳ ಹಿಂದೆ ಬಿ.ಟೆಕ್ ಓದುತ್ತಿದ್ದ 2 ಸಹೋದರಿಯರು ಫರ್ಹಾನ್ ಖಾನ್ ವಿರುದ್ಧ ದೂರು ನೀಡಿದರು. ನಂತರ ಫರ್ಹಾನ್ನ ಹೇಯ ಕೃತ್ಯಗಳು ಬೆಳಕಿಗೆ ಬಂದವು. ಅವರಲ್ಲಿ ಹಿರಿಯ ಸಹೋದರಿಯ ಮೇಲೆ 2022 ರಲ್ಲಿ ಜಹಾಂಗೀರಾಬಾದ್ನಲ್ಲಿ ಅತ್ಯಾಚಾರ ಮಾಡಲಾಗಿತ್ತು. ನಂತರ ಆಕೆಯ ಮೇಲಿನ ದೌರ್ಜನ್ಯದ ಬಗ್ಗೆ ಬೆದರಿಸಿ ಆಕೆಯ ಕಿರಿಯ ಸಹೋದರಿಯ ಮೇಲೂ ಅತ್ಯಾಚಾರ ಮಾಡಲಾಯಿತು. ನಂತರ ಇಬ್ಬರನ್ನೂ ಮದುವೆಯಾಗಿ ಮತಾಂತರಗೊಳ್ಳುವಂತೆ ಒತ್ತಾಯಿಸಲಾಯಿತು. ಕಾಲಾನಂತರದಲ್ಲಿ ಕಿರಿಯ ಸಹೋದರಿಯ ಪರಿಚಯ ಆದಿಲ್ ಖಾನ್ ಎಂಬಾತನೊಂದಿಗೆ ಮಾಡಲಾಯಿತು. ಆದಿಲ್ ಖಾನ್ ಕೂಡ ಆಕೆಯ ಮೇಲೆ ಅತ್ಯಾಚಾರವೆಸಗಿದ.
‘ಡಾನ್ಸ್ ಕ್ಲಾಸ್’ ಹೆಸರಿನಲ್ಲಿ ಹಿಂದೂ ಯುವತಿಯರ ಶೋಷಣೆ
1. ಸಾಹಿಲ್ ಖಾನ್ ಕಾಲೇಜಿನಲ್ಲಿ ಮೊದಲ ವರ್ಷ ವ್ಯಾಸಂಗ ಮುಗಿಸಿದ ನಂತರ ಶಿಕ್ಷಣಕ್ಕೆ ತಿಲಾಂಜಲಿ ಇಟ್ಟ. ಓದುವುದನ್ನು ಬಿಟ್ಟು ಅಶೋಕಾ ಗಾರ್ಡನ್ ಪ್ರದೇಶದಲ್ಲಿ ‘ಡಾನ್ಸ್ ಕ್ಲಾಸ್’ ಪ್ರಾರಂಭಿಸಿದ. ಅಲ್ಲಿ ಕೇವಲ ಹಿಂದೂ ಹುಡುಗಿಯರಿಗೆ ಮಾತ್ರ ಪ್ರವೇಶವಿತ್ತು.
2. ನೃತ್ಯ ಶಿಕ್ಷಕನೆಂದು ಹೇಳಿಕೊಂಡು ಸಾಹಿಲ್ ಹುಡುಗಿಯರೊಂದಿಗೆ ಸ್ನೇಹ ಬೆಳೆಸಿದ. ಹೊರಗಿನ ಊರುಗಳಿಂದ ಶಿಕ್ಷಣಕ್ಕಾಗಿ ಬಂದ ಬಡ ಹಿಂದೂ ಯುವತಿಯರಿಗೆ ಕನಸುಗಳನ್ನು ತೋರಿಸಿ ಅವರನ್ನು ಪಬ್ಗೆ ಕರೆದುಕೊಂಡು ಹೋಗುತ್ತಿದ್ದ. ಹುಡುಗಿಯರು ಅವನನ್ನು ನಂಬಿದಾಗ, ಅವರನ್ನು ಪಾರ್ಟಿಯ ನೆಪದಲ್ಲಿ ಅಶೋಕಾ ಗಾರ್ಡನ್ನಲ್ಲಿರುವ ತನ್ನ ಕೋಣೆಗೆ ಕರೆದೊಯ್ಯುತ್ತಿದ್ದ.
3. ಈ ಕೋಣೆಯಲ್ಲಿಯೇ ಅವನು ಮೊದಲು ಬೈತುಲ್ನ ಯುವತಿಯೊಬ್ಬಳಿಗೆ ಕೋಲ್ಡ್ ಡ್ರಿಂಕ್ಸ್ನಲ್ಲಿ ಮಾದಕ ಪದಾರ್ಥ ಬೆರೆಸಿ ಅತ್ಯಾಚಾರ ಮಾಡಿದ. ಈ ವೇಳೆ ಆ ಯುವತಿಯ ಅಶ್ಲೀಲ ವಿಡಿಯೋಗಳನ್ನು ಸಹ ಮಾಡಿದ. ನಂತರ ಇದೇ ವಿಡಿಯೋಗಳನ್ನು ತೋರಿಸಿ ಬ್ಲ್ಯಾಕ್ಮೇಲ್ ಮಾಡಲು ಪ್ರಾರಂಭಿಸಿದ ಮತ್ತು ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರವೆಸಗಿದ.
4. ಈ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುವುದಾಗಿ ಹೇಳಿ ತನ್ನ ಸ್ನೇಹಿತ ಫರ್ಹಾನ್ನನ್ನು ತನ್ನ ಕೋಣೆಗೆ ಕರೆಸಿ ಯುವತಿಯ ಮೇಲೆ ಅತ್ಯಾಚಾರ ಮಾಡಲು ಒತ್ತಾಯಿಸಿದ.
5. ಈ ಹೇಯ ಕೃತ್ಯದಲ್ಲಿ ಸಾಹಿಲ್ನೊಂದಿಗೆ ಫರ್ಹಾನ್ ಖಾನ್, ಅಲಿ ಖಾನ್, ಶಾಜಿ ಅಲಿಯಾಸ್ ಶಂಸುದ್ದೀನ್, ಅಬ್ರಾರ್ ಮತ್ತು ನಬಿಲ್ ಕೂಡ ಶಾಮೀಲಾಗಿದ್ದರು.
6 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರದ ಪ್ರಕರಣಗಳು ದಾಖಲು!
ಈವರೆಗೆ ಭೋಪಾಲ್ನ ಅನೇಕ ಪೊಲೀಸ್ ಠಾಣೆಗಳಲ್ಲಿ 6 ವಿದ್ಯಾರ್ಥಿನಿಯರ ಮೇಲೆ ಅತ್ಯಾಚಾರ ನಡೆದಿರುವುದು ಬೆಳಕಿಗೆ ಬಂದಿದ್ದು, ದೂರು ದಾಖಲಿಸಲಾಗಿದೆ. ಫರ್ಹಾನ್ನನ್ನು ಬಂಧಿಸಿ 3 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ಸಾಹಿಲ್ನನ್ನು ವಿಚಾರಣೆಗಾಗಿ ಪನ್ನಾದಿಂದ ಭೋಪಾಲ್ಗೆ ಕರೆತರಲಾಗಿದೆ.
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಹಿಂದೂತ್ವನಿಷ್ಠ ಸರಕಾರವಿದ್ದು, ಅಲ್ಲಿ ಲವ್ ಜಿಹಾದ್ ವಿರೋಧಿ ಕಠಿಣ ಕಾನೂನುಗಳಿವೆ. ಹೀಗಿದ್ದರೂ ಜಿಹಾದಿ ಮುಸ್ಲಿಮರು ಹಿಂದೂ ಯುವತಿಯರ ಮೇಲೆ ಅತ್ಯಾಚಾರವೆಸಗಿ ಅವರ ಜೀವನವನ್ನು ನಾಶಪಡಿಸಲು ಧೈರ್ಯಮಾಡುತ್ತಾರೆ. ಇವರಿಂದ ಮುಕ್ತಿಪಡೆಯಲು ಕಠಿಣ ಶಿಕ್ಷೆಯಾಗಬೇಕು ಎಂಬುದೆ ತೋರಿಸುತ್ತದೆ! |