Pakistan Nationals Arrested : ಛತ್ತೀಸ್‌ಗಢದಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳ ಬಂಧನ!

ನಕಲಿ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಜಪ್ತಿ

ರಾಯ್‌ಪುರ (ಛತ್ತೀಸ್‌ಗಢ) – ಪೊಲೀಸರು ಇತ್ತೀಚೆಗೆ ರಾಯಗಢ ಜಿಲ್ಲೆಯಲ್ಲಿ ಇಬ್ಬರು ಪಾಕಿಸ್ತಾನಿ ಪ್ರಜೆಗಳನ್ನು ಬಂಧಿಸಿ ಅವರಿಂದ ನಕಲಿ ಭಾರತೀಯ ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಯನ್ನು ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನಿ ನಾಗರಿಕರು ಸುಳ್ಳು ಮಾಹಿತಿ ನೀಡಿ ಪಡೆದಿದ್ದರು. ಅವರಿಬ್ಬರ ಬಳಿ ದೀರ್ಘಾವಧಿಯ ವೀಸಾಗಳು ಸಿಕ್ಕಿವೆ. ಬಂಧಿತ ಪಾಕಿಸ್ತಾನಿ ಪ್ರಜೆಗಳ ಹೆಸರು ಇಫ್ತಿಕಾರ್ ಮತ್ತು ಅರ್ನಿಶ್ ಎಂದು ಇದ್ದೂ ಇಬ್ಬರೂ ಆರೋಪಿಗಳು ರಾಯಗಢ ಜಿಲ್ಲೆಯ ಕೊಡತರಾಯಿ ಗ್ರಾಮದಲ್ಲಿ ಯಾಕೂಬ್ ಶೇಖ್ ನ ಮನೆಯಲ್ಲಿ ವಾಸಿಸುತ್ತಿದ್ದರು. ಈ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ (ದಂಡ) ಸಂಹಿತೆಯ (ಬಿ.ಎನ್.ಎಸ್.) 199, 200, 419, 467 ಮತ್ತು 468 ರ ಸೆಕ್ಷನ್ (ಕಲಂ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ, ಎಂದು ರಾಯಗಢ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಆಕಾಶ ಮರಕಾಮ ಮಾಹಿತಿ ನೀಡಿದರು.

ಸಂಪಾದಕೀಯ ನಿಲುವು

ಭಾರತೀಯ ಗುರುತಿನ ಚೀಟಿಗಳನ್ನು ಒದಗಿಸುವವರ ಮತ್ತು ಇಲ್ಲಿ ಅವರಿಗೆ ವಾಸ್ತವ್ಯಕ್ಕೆ ಅನುಕೂಲ ಮಾಡಿಕೊಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ತನಿಖಾ ಸಂಸ್ಥೆಗಳು ಪ್ರಯತ್ನಿಸಬೇಕು!