ಉತ್ತರಪ್ರದೇಶ; ದೇವಸ್ಥಾನದ ಧ್ವನಿವರ್ಧಕಕ್ಕೆ ಆಕ್ಷೇಪ; ಮುಸಲ್ಮಾನರಿಂದ ಅರ್ಚಕನ ಮೇಲೆ ಹಲ್ಲೆ

12 ಮುಸಲ್ಮಾನರ ಬಂಧನ

ರಾಮಪುರ (ಉತ್ತರಪ್ರದೇಶ) – ಇಲ್ಲಿನ ಸಿಕಂದರಾಬಾದ ಗ್ರಾಮದಲ್ಲಿ ಮಾರ್ಚ್ 7ರ ರಾತ್ರಿ ಶಿವನ ದೇವಸ್ಥಾನದಲ್ಲಿ ಧ್ವನಿವರ್ಧಕದಲ್ಲಿ ಭಜನೆ ಹಾಕಿದ್ದಕ್ಕಾಗಿ ಮುಸಲ್ಮಾನರು ಅರ್ಚಕನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು 12 ಮುಸಲ್ಮಾನರನ್ನು ಬಂಧಿಸಿದ್ದಾರೆ. ಅವರನ್ನು ನ್ಯಾಯಾಲಯವು ಜಾಮೀನಿನ ಮೇಲೆ ಬಿಡುಗಡೆ ಮಾಡಿದೆ. ಸದ್ಯ ಗ್ರಾಮದಲ್ಲಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.

1. ಶಿವನದೇವಸ್ಥಾನದ ಅರ್ಚಕರಾದ ಪ್ರೇಮ ಸಿಂಗ ಅವರು ತಮ್ಮ ಲಿಖಿತ ದೂರಿನಲ್ಲಿ, ದೇವಸ್ಥಾನದ ಧ್ವನಿವರ್ಧಕದಲ್ಲಿ ಭಜನೆ ಹಾಕಿದ ನಂತರ ಗ್ರಾಮದ ನಿವಾಸಿಗಳಾದ ಭೂರಿ, ತೌಫಿಕ, ಇಕ್ಬಾಲ, ಛಿದ್ಧಾ, ಇಸ್ರಾಯಿಲ, ಶೈದಾ, ಶಕೀಲ್, ಮುನ್ಸಾ ಅಲಿ, ಗುಲ್ನಾಜ, ಅನೀಸ್ ಮುಂತಾದವರು ದೇವಸ್ಥಾನದ ಆವರಣದಲ್ಲಿ ನುಗ್ಗಿ ಧ್ವನಿವರ್ಧಕದಲ್ಲಿ ಭಜನೆ ಹಾಕುವುದನ್ನು ವಿರೋಧಿಸಿ ಅಪಶಬ್ದಗಳಲ್ಲಿ ನಿಂದಿಸಿದ್ದಾರೆ. ನಾನು ಅವರನ್ನು ವಿರೋಧಿಸಿದಾಗ, ಅವರು ನನ್ನನ್ನು ದೇವಸ್ಥಾನದಿಂದ ಹೊರಗೆ ಎಳೆದು ಹಲ್ಲೆ ಮಾಡಿದರು, ಅಲ್ಲದೇ ಪುನಃ ಧ್ವನಿವರ್ಧಕದಲ್ಲಿ ಭಜನೆ ಹಾಕಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದರು, ಎಂದು ತಿಳಿಸಿದ್ದಾರೆ.

2. ಪೊಲೀಸ್ ಇನ್ಸ್ಪೆಕ್ಟರ್ ಓಂಕಾರ ಸಿಂಗ್ ಅವರು ಮಾತನಾಡಿ, ದೇವಸ್ಥಾನದ ಪಕ್ಕದಲ್ಲಿ ವಾಸಿಸುವ ಮಹಿಳೆಯೊಬ್ಬರು ಪೂಜಾರಿಗೆ ಧ್ವನಿವರ್ಧಕದ ಶಬ್ದವನ್ನು ರಂಜಾನ್‌ನ ಅಜಾನ್ ಕೇಳಲು ಅನುಕೂಲವಾಗುವಂತೆ ಕಡಿಮೆ ಮಾಡಲು ಹೇಳಿದ್ದರು. ಈ ವಿಷಯವಾಗಿ ಪೂಜಾರಿಯೊಂದಿಗೆ ಗ್ರಾಮದ ಕೆಲವು ಜನರೊಂದಿಗೆ ವಾಗ್ವಾದ ನಡೆಯಿತು; ಆದರೆ ಹೊಡೆದಾಟದ ಯಾವುದೇ ಘಟನೆ ಸಂಭವಿಸಿಲ್ಲ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ದೇವಸ್ಥಾನದ ಮೇಲಿನ ಧ್ವನಿವರ್ಧಕದ ಶಬ್ದವು ನಿಗದಿ ಪಡಿಸಿದ ಮಿತಿಗಿಂತ ಹೆಚ್ಚಾಗಿತ್ತು ಎಂದು ಮುಸಲ್ಮಾನರಿಗೆ ಅನಿಸಿದ್ದರೆ, ಅವರು ಪೊಲೀಸರಿಗೆ ಏಕೆ ದೂರು ನೀಡಲಿಲ್ಲ? ದೂರು ನೀಡಿದ್ದರೆ, ಪೊಲೀಸರು ತನಿಖೆ ನಡೆಸುತ್ತಿದ್ದರು; ಆದರೆ ಹಾಗೆ ಮಾಡದೆ ಮುಸಲ್ಮಾನರಿಂದ ಹಲ್ಲೆ ನಡೆಸಿರುವ ಕೃತ್ಯವೆಂದರೆ ಉದ್ದೇಶಪೂರ್ವಕವಾಗಿ ಹಿಂದೂಗಳ ಮೇಲೆ ದಾಳಿ ಮಾಡುವ ಪ್ರಯತ್ನವಾಗಿದೆ, ಎಂಬುದು ಸ್ಪಷ್ಟವಾಗುತ್ತದೆ!
  • ಒಂದು ವೇಳೆ ಈ ಸ್ಥಳದಲ್ಲಿ ಹಿಂದೂಗಳು ಮಸೀದಿಯ ಧ್ವನಿವರ್ಧಕದ ಶಬ್ದದ ವಿಚಾರವಾಗಿ ಇದೇ ರೀತಿಯ ಕೃತ್ಯವನ್ನು ಮಾಡಿದ್ದರೆ, ಏನಾಗುತ್ತಿತ್ತು?, ಎಂದು ವಿಚಾರ ಮಾಡಬೇಕು!