ಭಾರತದ ಭಂಡವಾಳವನ್ನು ಯಾರೋ ಬಯಲು ಮಾಡಿದ್ದರಿಂದ ಅದು ತನ್ನ ಆಮದು ಶುಲ್ಕವನ್ನು ಕಡಿಮೆ ಮಾಡಿದೆ! – ಟ್ರಂಪ್

ವಾಷಿಂಗ್ಟನ (ಅಮೇರಿಕಾ) – ಭಾರತವು ನಮ್ಮಿಂದ ಬಹಳ ಆಮದು ಶುಲ್ಕವನ್ನು ವಸೂಲಿ ಮಾಡುತ್ತದೆ, ನೀವು ಭಾರತದಲ್ಲಿ ಏನನ್ನೂ ಮಾರಾಟ ಮಾಡಲು ಸಾಧ್ಯವಿಲ್ಲ. ಈಗ ಭಾರತದ ಭಂಡವಾಳವನ್ನು ಯಾರೋ ಬಯಲು ಮಾಡಿದ್ದರಿಂದ ಆಮದು ಶುಲ್ಕವನ್ನು ಕಡಿಮೆ ಮಾಡಲು ನಿರ್ಧರಿಸಿದೆ ಎಂದು ಅಮೇರಿಕಾದ ರಾಷ್ಟ್ರಾಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಭಾರತವು ಆಮದು ಶುಲ್ಕವನ್ನು ಕಡಿಮೆ ಮಾಡಲು ಸಿದ್ಧತೆಯನ್ನು ತೋರಿಸಿದ ತಕ್ಷಣವೇ ಟ್ರಂಪ್ ಈ ಹೇಳಿಕೆಯನ್ನು ನೀಡಿದ್ದಾರೆ.

ವೈಟ್ ಹೌಸ್ನ (ರಾಷ್ಟ್ರಾಧ್ಯಕ್ಷರ ನಿವಾಸ ಮತ್ತು ಕಛೇರಿಯಲ್ಲಿನ) ಓವಲ್ ಕಛೇರಿಯಲ್ಲಿ ಪ್ರಸಾರ ಮಾಧ್ಯಮದವರೊಂದಿಗೆ ಟ್ರಂಪ್ ಅವರು ಮಾತನಾಡುತ್ತಾ, ಅಮೇರಿಕಾವನ್ನು ಆರ್ಥಿಕ, ಹಣಕಾಸು ಮತ್ತು ವ್ಯಾಪಾರ ದೃಷ್ಟಿಕೋನದಿಂದ ಜಗತ್ತಿನ ಅನೇಕ ದೇಶಗಳು ಲೂಟಿ ಮಾಡಿವೆ. ನನ್ನ ಮೊದಲ ಅವಧಿಯಲ್ಲಿ ನಾನು ಇದರ ಮೇಲೆ ಸ್ವಲ್ಪ ಮಟ್ಟಿಗೆ ನಿರ್ಬಂಧಗಳನ್ನು ತಂದಿದ್ದೆನು. ಈಗ ನನ್ನ ಎರಡನೇ ಅವಧಿಯಲ್ಲಿ ಈ ಲೂಟಿಯನ್ನು ನಿಲ್ಲಿಸಲು ಪ್ರಯತ್ನಿಸುತ್ತಿದ್ದೇನೆ, ಎಂದು ಹೇಳಿದರು.