೧. ಸ್ತ್ರೀಯರ ಅಧಿಕಾರ ಪುರುಷರಿಗಿಂತ ದೊಡ್ಡದು !
‘ಸ್ತ್ರೀಯು ಶೇಷ್ಠತಮ ಶಕ್ತಿಯಾಗಿದ್ದಾಳೆ. ಸಮಾನ ಹಕ್ಕಲ್ಲ, ಸ್ತ್ರೀಯ ಹಕ್ಕು ಪುರುಷನಿಗಿಂತಲೂ ಹೆಚ್ಚಿದೆ. ಧರ್ಮವು ‘ಸ್ತ್ರೀ ಶ್ರೇಷ್ಠಳಾಗಿದ್ದಾಳೆ, ಎಂದು ಹೇಳುತ್ತದೆ. ಮನು ನಾರಿಪೂಜೆಯನ್ನು ಮಾಡಲು ಹೇಳುತ್ತಾನೆ; ಏಕೆಂದರೆ ಸ್ತ್ರೀಯ ಅಧಿಕಾರ ಪುರುಷನಿಗಿಂತ ದೊಡ್ಡದಿದೆ.
೨. ಸನ್ಯಾಸಿ ಮಗ ತಂದೆಗಲ್ಲ; ತಾಯಿಗೆ ನಮಸ್ಕರಿಸುವುದು ಆವಶ್ಯಕ !
‘ತಾಯಿ, ತಂದೆಗಿಂತ ಸಾವಿರಾರು ಪಟ್ಟು ಹೆಚ್ಚು ಶ್ರೇಷ್ಠಳಾಗಿದ್ದಾಳೆ, ಎಂದು ಮನು ಹೇಳುತ್ತಾನೆ. ಮಗ ಸನ್ಯಾಸ ಸ್ವೀಕರಿಸಿದರೆ ಅವನ ಸಂಬಂಧ ಮುಗಿಯಿತು. ಅನಂತರ ತಾಯಿ-ತಂದೆ ಈ ಸಂಬಂಧ ಉಳಿಯುವುದಿಲ್ಲ. ತಂದೆಯೇ ಮಗನಿಗೆ ನಮಸ್ಕಾರ ಮಾಡಬೇಕಾಗುತ್ತದೆ, ಮಗ ಅಲ್ಲ. ಸನ್ಯಾಸಿ ಮಗನು ತಾಯಿಗೆ ನಮಸ್ಕಾರ ಮಾಡಬೇಕು. ಯಾವುದೇ ಧರ್ಮಕಾರ್ಯವು ಪತ್ನಿಯ ಹೊರತು ಆಗುವುದೇ ಇಲ್ಲ.
೩. ಪತ್ನಿ ಗೃಹಿಣಿ, ಸ್ನೇಹಿತೆ, ಶಿಷ್ಯೆ ಮತ್ತು ಕಾರ್ಯದರ್ಶಿ !
ಧರ್ಮವಿದ್ದರೆ, ಜೀವನ-ಸಂಸಾರ ಸುಖಕರ ಆಗುವುದು. ಧರ್ಮವಿಲ್ಲದೇ ಸುಖಶಾಂತಿ ಸಾಧ್ಯವೇ ಇಲ್ಲ. ಮರಳಿನಿಂದ ಮಾಡಿದ ಹಗ್ಗದಿಂದ ಆಕಾಶವನ್ನು ಕಟ್ಟುವಷ್ಟು ಅಸಾಧ್ಯ ! ‘ಮನು ಮಗನನ್ನು ಪಡೆಯಲೆಂದೇ ವಿವಾಹ ಮಾಡಿಕೊಳ್ಳಲು ಹೇಳುತ್ತಾನೆ. ‘ಮಗನಾದರೆ, ಪತ್ನಿಯು ತಾಯಿಯಾಗುತ್ತಾಳೆ, ಎಂದು ಮನು ಹೇಳುತ್ತಾನೆ. ಪತ್ನಿಯು ಗೃಹಿಣಿ ಆಗಿದ್ದಾಳೆ, ಅದರೊಂದಿಗೆ ಸ್ನೇಹಿತೆ, ಪ್ರಿಯ ಶಿಷ್ಯೆ ಮತ್ತು ಕಾರ್ಯದರ್ಶಿ ಸಹ ಆಗಿದ್ದಾಳೆ. ಪತಿಯು ಸಂಪಾದಿಸಿದ ಸಂಪತ್ತು, ಹಣ ಮತ್ತು ಸಂಬಳ ಎಲ್ಲವನ್ನೂ ಪತ್ನಿಯ ಕೈಗೆ ಕೊಡಬೇಕು. ‘ಪತ್ನಿಯು ಮನೆಯನ್ನು ನಡೆಸಬೇಕು, ಎಂದು ಮನು ಹೇಳುತ್ತಾನೆ. ‘ಎಲ್ಲಿ ಸ್ತ್ರೀಯ ಅವಮಾನ, ತಿರಸ್ಕಾರವಾಗುತ್ತದೆಯೋ ಆ ಮನೆ ನಾಶವಾಗುತ್ತದೆ, ಎಂದೂ ಮನು ಹೇಳುತ್ತಾನೆ
೪. ಧರ್ಮಾಚರಣಿ ಮಹಾರಾಣಿ ಅಹಿಲ್ಯಾಬಾಯಿಯವರ ಅದ್ವಿತೀಯ ಉದಾಹರಣೆ !
ಧರ್ಮವಿಲ್ಲದೇ ಯಾವುದೇ, ಎಂತಹುದೇ, ಸರಕಾರವು ಸ್ಮೃತಿ, ಸುಖ-ಶಾಂತಿಯನ್ನು ಸೃಷ್ಟಿಸಲಾರದು. ನಾವು ಎಲ್ಲ ಪ್ರಯೋಗಗಳನ್ನು ಮಾಡಿದ್ದೇವೆ. ಸ್ತ್ರೀಯು ಧಾರ್ಮಿಕಳಾಗಿದ್ದರೆ, ಅಧರ್ಮದ ಕಡೆಗೆ ಬಾಗಲು ಅಥವಾ ಹೊರಳಲು ಪತಿಯ ಸಾಹಸವಾಗುವುದಿಲ್ಲ. ಮಹಾರಾಣಿ ಅಹಿಲ್ಯಾಬಾಯಿಯ ಪತಿ ವಿಲಕ್ಷಣ ವ್ಯಸನಿಯಾಗಿದ್ದನು. ಅವನು ಮದ್ಯ ಸೇವನೆ ಮಾಡಿ ಕುಡಿದ ಅಮಲಿನಲ್ಲಿ ಹೇಗೆ ಬೇಕೋ ಹಾಗೆ ದೌರ್ಜನ್ಯವೆಸಗುತ್ತಿದ್ದನು. ಅಹಿಲ್ಯಾಬಾಯಿ ಪರಮಧಾರ್ಮಿಕ ಮತ್ತು ಪರಮಸಹನಶೀಲಳಾಗಿದ್ದಳು. ಪತಿಯೊಂದಿಗೆ ಮಾತನಾಡುವುದು, ಅವನಿಗೆ ಏನಾದರೂ ಹೇಳುವುದು, ಆಗಿನ ಕಾಲದ ಪತ್ನಿಯರಿಗೆ ಆ ಧೈರ್ಯ ಇರುತ್ತಿರಲಿಲ್ಲ. ಆ ಕಾಲದಲ್ಲಿ ಪತಿಯು ಹುಲಿಯಂತೆ ಅವರ ಮೈಮೇಲೆ ಏರಿ ಬರುತ್ತಿದ್ದನು. ಇಂತಹ ಸಮಯದಲ್ಲಿಯೂ ಅಹಿಲ್ಯಾಬಾಯಿಯವರ ಮಾತುಗಳನ್ನು ಮೀರುವುದು ಅವಳ ಪತಿಗೆ ಅಸಾಧ್ಯವಾಗಿತ್ತು. ಅವಳೆದುರು ಮಾತನಾಡುವ ಯೋಗ್ಯತೆ ಅವನಿಗಿರಲಿಲ್ಲ. ಅವನು ಅವಳೆದುರು ಸಂಪೂರ್ಣ ನಮ್ರನಾಗಿರುತ್ತಿದ್ದನು. ಶಕ್ತಿಯು ಧರ್ಮದಲ್ಲಿಯೇ ಇದೆ. ಇತರ ಶಕ್ತಿಗಳು ಅನಿಯಂತ್ರಿತ ಮತ್ತು ಕೃತಕವಾಗಿವೆ.
೫. ಧರ್ಮಾಚರಣೆ ಮಾಡುವುದರ ಮಹತ್ವ
ಧರ್ಮದ ಪಾಲನೆ ಮಾಡುವ ಪತ್ನಿಯ ಮುಂದೆ ಸಹನಶಕ್ತಿ, ಧೈರ್ಯವಿರುವ ಪತಿ ತಲೆಬಾಗಲೇ ಬೇಕಾಗುತ್ತದೆ. ಹೀಗೆ ಆಗದಿದ್ದರೆ, ಅವನು ಅಂತರ್ಮುಖನಾಗಬೇಕು, ಎಲ್ಲಿ ತಪ್ಪುತ್ತೇನೆ ಎಂದು ಹುಡುಕಿ ತೆಗೆಯಬೇಕು. ಹೆಚ್ಚೆಚ್ಚು ಧರ್ಮವನ್ನು ಅನುಸರಿಸಬೇಕು. ಧರ್ಮವನ್ನು ಅನುಸರಿಸುವ ಮನುಷ್ಯನು ಜಗತ್ತಿಗೆ ಪ್ರಿಯನಾಗುವುದರೊಂದಿಗೆ ಅವನು ದೇವತೆಗಳಿಗೂ ಇಷ್ಟವಾಗುತ್ತಾನೆ.
೬. ೨೫ ವರ್ಷಗಳ ಕಾಲ ಸಂಸಾರ ಉಳಿಯುವುದು, ಇದು ಈಗ ಬಹಳ ಅಪರೂಪ !
ಇಂದು ‘ಧರ್ಮವು ಉಳಿದಿಲ್ಲ. ಸಮಾನ ಹಕ್ಕು ಇದೆ. ಸ್ತ್ರೀಗೆ ಯಾವಾಗ್ಯೂ ಯಾವುದೇ ಪತಿಯಿಂದ ಬೇರ್ಪಡುವ ಹಕ್ಕು ಇದೆ. ಲಕ್ಷಾಂತರ ವಿವಾಹವಿಚ್ಛೇದನೆಗಳ ನಡೆಯುತ್ತಲೇ ಇವೆ. ಸರಕಾರ ರಚಿಸಿದ ಇಂದಿನ ಎಲ್ಲ ಸ್ತ್ರೀಯರಿಗೆ ಸಂಬಂಧಿಸಿದ ಕಾನೂನುಗಳು ಸ್ತ್ರೀಯನ್ನು ಪುರುಷನಿಗಿಂತಲೂ ಶ್ರೇಷ್ಠತ್ವವನ್ನು ನೀಡುವಂತಹುಗಳು ಆಗಿವೆ. ೨೫ ವರ್ಷಗಳ ಕಾಲ ಸಂಸಾರ ಮಾಡಿದ ದಂಪತಿಗಳ ಸನ್ಮಾನ ಮಾಡಿದ ಘಟನೆ ಪುಣೆಯಲ್ಲಿ ಘಟಿಸಿದೆ ! ೨೫ ವರ್ಷಗಳ ಕಾಲ ಸಂಸಾರ ಉಳಿಯುವುದು, ಇದು ಇಂದು ಅತ್ಯಂತ ಅಸಾಧ್ಯ ಮತ್ತು ಅತ್ಯಂತ ಅಪರೂಪದ್ದಾಗಿದೆ.
೭. ಇಂದಿನ ಜಗತ್ತು ಮಹಿಳಾ ಅಧಿಕಾರದ ಜಗತ್ತಾಗಿದೆ !
ಇಂದು ಸ್ತ್ರೀಯು ಸಾಮಾಜಿಕ ಮತ್ತು ರಾಜಕೀಯ ಆಡಳಿತಗಾರಳಾಗಿದ್ದಾಳೆ. ಸಾಮಾಜಿಕ ಮತ್ತು ರಾಜಕೀಯ ಪಕ್ಷ, ಸಂಸ್ಥೆ, ಕಾನೂನುಮಂಡಳ ಮತ್ತು ಸಚಿವ ಮಂಡಳಗಳಲ್ಲಿಯೂ ಸ್ತ್ರೀಯರಿದ್ದಾರೆ. ಪ್ರಧಾನಿ ಮತ್ತು ಮುಖ್ಯಮಂತ್ರಿಯೂ ಆಗಿದ್ದಾರೆ. ಇಂದು ಸ್ತ್ರೀಯರ ರಾಜ್ಯವೇ ಇದೆ. ಇಂದಿನ ಜಗತ್ತು ಸ್ತ್ರೀಯರ ಅಧಿಕಾರದ ಜಗತ್ತಾಗಿದೆ; ಆದರೂ ಸ್ತ್ರೀಯರ ದುಃಖದ ಅವರ ನರಳುವಿಕೆ ಕೊನೆಗೊಂಡಿಲ್ಲ. ಕೊನೆಗೊಳ್ಳುವುದೂ ಇಲ್ಲ; ಏಕೆಂದರೆ ಧರ್ಮ ಮತ್ತು ಶಾಸ್ತ್ರದ ಆಚರಣೆ ಇಲ್ಲ. ಯಾವುದರ ವಿಧಿನಿಷೇಧವಿಲ್ಲ. ಧರ್ಮವಿಲ್ಲದೇ ಯಾವುದೇ ಸರಕಾರ ಸ್ಮೃತಿ, ಸುಖ-ಶಾಂತಿಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಎಲ್ಲ ಪ್ರಯೋಗಗಳನ್ನು ನಾವು ಮಾಡಿದ್ದೇವೆ.
– ಪ.ಪೂ. ಗುರುದೇವ ಡಾ, ಕಾಟೇಸ್ವಾಮಿಜಿ (ಆಧಾರ: ಮಾಸಿಕ ‘ಘನಗರ್ಜಿತ, ನವೆಂಬರ್ ೨೦೨೧)