ಪೇಶಾವರ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಬನ್ನು ಕಂಟೋನ್ಮೆಂಟ್ ಪ್ರದೇಶದಲ್ಲಿ ನಡೆದ ಎರಡು ಬಾಂಬ್ ಸ್ಫೋಟಗಳಲ್ಲಿ 13 ಜನರು ಸಾವನ್ನಪ್ಪಿದ್ದು, 32 ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಅಂತರಾಷ್ಟ್ರೀಯ ಸುದ್ದಿ ಸಂಸ್ಥೆ ‘ಅಸೋಸಿಯೇಟೆಡ್ ಪ್ರೆಸ್’ ನ ಪ್ರಕಾರ, ಮಾರ್ಚ್ 4 ರಂದು ನಡೆದ ಈ ದಾಳಿಯ ನಂತರ, ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಘರ್ಷಣೆ ನಡೆಯಿತು. ಈ ದಾಳಿಯ ಹಿಂದೆ ‘ಫಿತ್ನಾ ಅಲ್ ಖ್ವಾರಿಜ್’ ಹೆಸರಿನ ಭಯೋತ್ಪಾದಕ ಸಂಘಟನೆಯ ಕೈವಾಡವಿದೆ ಎಂದು ಪಾಕಿಸ್ತಾನದ ‘ಡಾನ್’ ಪತ್ರಿಕೆ ಮಾಹಿತಿ ನೀಡಿದೆ.
1. ಭಯೋತ್ಪಾದಕರು ರಂಜಾನ್ ನ ಇಫ್ತಾರ್ ನಂತರ ಬನ್ನು ಕಂಟೋನ್ಮೆಂಟ್ ಸೇನಾ ನೆಲೆಯ ಭದ್ರತಾ ನೆಲೆಯ ಮೇಲೆ ದಾಳಿ ಮಾಡಿತು.
2. ಮೃತಪಟ್ಟ 12 ಜನರ ಪೈಕಿ 3 ಮಕ್ಕಳು ಸೇರಿದ್ದಾರೆ.
3. ಈ ಮೊದಲು ಮಾರ್ಚ್ 3 ರಂದು ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಓರ್ವ ಮಹಿಳಾ ಭಯೋತ್ಪಾದಕಿಯು ಆತ್ಮಾಹುತಿ ಬಾಂಬ್ ಮೂಲಕ ದಾಳಿ ನಡೆಸಿದ್ದಳು. ಇದರಲ್ಲಿ ಓರ್ವ ಯೋಧ ಹುತಾತ್ಮರಾಗಿದ್ದರು.
4. ‘ರಂಜಾನ್ ನ ಉಪವಾಸ ಬಿಡುವ ನಾಗರಿಕರ ಮೇಲೆ ಹೇಡಿತನದ ದಾಳಿ’ ಎಂದು ಪ್ರಧಾನಿ ಶೆಹಬಾಜ್ ಷರೀಫ್ ಪ್ರತಿಕ್ರಿಯಿಸಿದ್ದಾರೆ.
ಭದ್ರತಾ ಪಡೆಗಳೊಂದಿಗಿನ ನಡೆದ ಗುಂಡಿನ ಚಕಮಕಿಯಲ್ಲಿ ಎಲ್ಲಾ 16 ಭಯೋತ್ಪಾದಕರು ಕೊಲ್ಲಲ್ಪಟ್ಟರು ಹಾಗೆಯೇ 5 ಸೈನಿಕರ ಮೃತ್ಯುವಾಯಿತು !
ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಪಾಕಿಸ್ತಾನದ ಭದ್ರತಾ ಪಡೆಗಳು ಎಲ್ಲಾ 16 ಭಯೋತ್ಪಾದಕರನ್ನು ಸಾಯಿಸಿದೆ. ಅದರಲ್ಲಿ 4 ಆತ್ಮಾಹುತಿ ಭಯೋತ್ಪಾದಕರು ಕೂಡ ಸೇರಿದ್ದಾರೆ. ಈ ವೇಳೆ 5 ಪಾಕಿಸ್ತಾನಿ ಸೈನಿಕರು ಕೂಡ ಸಾವನ್ನಪ್ಪಿದ್ದಾರೆ ಎಂದು ವೃತ್ತ ಪತ್ರಿಕೆ ಡಾನ್ ವರದಿ ಮಾಡಿದೆ.
ಸಂಪಾದಕೀಯ ನಿಲುವು‘ಏನು ಬಿತ್ತಿದೆಯೋ ಅದೇ ಬೆಳೆಯುತ್ತದೆ’, ಇದಕ್ಕೆ ಅತ್ಯುತ್ತಮ ಉದಾಹರಣೆ ಅಂದರೆ ಜಿಹಾದಿ ಭಯೋತ್ಪಾದನೆಯ ಸೃಷ್ಟಿಕರ್ತ ಪಾಕಿಸ್ತಾನ! ಭಾರತದಲ್ಲಿ ಜಿಹಾದ್ ನಡೆಸಲು ಯತ್ನಿಸುತ್ತಿರುವ ಪಾಕಿಸ್ತಾನವನ್ನೇ ಈ ಭಯೋತ್ಪಾದಕ ಘಾಸಿಗೊಳಿಸುತ್ತಿದೆ, ಇದೇ ನಿಜ! |