ಕೇದಾರನಾಥದಲ್ಲಿ ‘ರೋಪ್ ವೇ’ ನಿರ್ಮಾಣ

9 ಗಂಟೆಗಳ ಪ್ರಯಾಣ ಕೇವಲ 36 ನಿಮಿಷಗಳಲ್ಲಿ ಪೂರ್ಣಗೊಳ್ಳಲಿದೆ

(‘ರೋಪ್ ವೇ’ ಎಂದರೆ ಹಗ್ಗದ ಮೇಲೆ ನೇತಾಡುವ ವಾಹಕಗಳಲ್ಲಿ ಪ್ರಯಾಣಿಕರು ಅಥವಾ ಸರಕು ಸಾಗಣೆಯ ವ್ಯವಸ್ಥೆ)

ನವದೆಹಲಿ – ಕೇಂದ್ರ ಸಚಿವ ಸಂಪುಟದ ಸಭೆಯಲ್ಲಿ ಉತ್ತರಾಖಂಡದ ಕೇದಾರನಾಥ ಧಾಮಕ್ಕೆ ‘ರೋಪ್ ವೇ’ ಯೋಜನೆಗೆ ಅನುಮೋದನೆ ನೀಡಲಾಗಿದೆ. ಹೇಮಕುಂಡ ಸಾಹಿಬ್‌ನಲ್ಲಿ ರೋಪ್ ವೇ ನಿರ್ಮಾಣದ ಎರಡನೇ ಯೋಜನೆಗೂ ಅನುಮೋದನೆ ನೀಡಲಾಗಿದೆ. ಹೇಮಕುಂಡ ಸಾಹಿಬ್ ಯೋಜನೆಯಲ್ಲಿ 2 ಸಾವಿರದ 730 ಕೋಟಿ ರೂಪಾಯಿ ವೆಚ್ಚವಾಗಲಿದೆ. ಸೋನಪ್ರಯಾಗದಿಂದ ಕೇದಾರನಾಥವರೆಗೆ 12.9 ಕಿಲೋ ಮೀಟರ್ ಉದ್ದದ ರೋಪ್ ವೇ ನಿರ್ಮಾಣವಾಗಲಿದ್ದು, ಇದಕ್ಕೆ 4 ಸಾವಿರದ 81 ಕೋಟಿ ರೂಪಾಯಿ ವೆಚ್ಚವಾಗಲಿದೆ. ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಿಂದ ಇದನ್ನು ನಿರ್ಮಿಸಲಾಗುವುದು. ಇದರಿಂದ ಪ್ರಸ್ತುತ 8-9 ಗಂಟೆಗಳಲ್ಲಿ ಪೂರ್ಣಗೊಳ್ಳುವ ಪ್ರಯಾಣವು 36 ನಿಮಿಷಗಳಲ್ಲಿ ಪೂರ್ಣಗೊಳ್ಳುತ್ತದೆ. ರೋಪ್ ವೇಯಲ್ಲಿ 36 ಜನರು ಏಕಕಾಲದಲ್ಲಿ ಕುಳಿತುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತದೆ ಎಂದು ಕೇಂದ್ರ ಸಚಿವ ಶ್ರೀ. ಅಶ್ವಿನಿ ವೈಷ್ಣವ್ ಮಾಹಿತಿ ನೀಡಿದ್ದಾರೆ. ಈ ಯೋಜನೆಯಿಂದ ಯಾತ್ರಿಕರಿಗೆ ಪ್ರಯಾಣ ಸುಲಭವಾಗಲಿದೆ ಹಾಗೂ ಪ್ರಯಾಣದ ಸಮಯ ಕೂಡ ಕಡಿಮೆಯಾಗಲಿದೆ.