ಲಾಹೋರ್ (ಪಾಕಿಸ್ತಾನ) – ಪಾಕಿಸ್ತಾನ ವಾಯುಪಡೆಯ ವಿಮಾನ ಹಾರಾಟ ನಡೆಸುತ್ತಿದ್ದಾಗ ವಿಮಾನದ ಇಂಧನ ಟ್ಯಾಂಕ್ ಆಕಾಶದಿಂದ ನೆಲಕ್ಕೆ ಬಿದ್ದಿದೆ. ಈ ಘಟನೆ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಸರ್ಗೋಧಾದಲ್ಲಿ ನಡೆದಿದೆ. ಇಲ್ಲಿ ಪಾಕಿಸ್ತಾನ ವಾಯುಪಡೆಯ ನೆಲೆಯಿದೆ. ವಿಮಾನದ ಇಂಧನ ಟ್ಯಾಂಕ್ ಬಿದ್ದ ಪರಿಣಾಮ ಅನೇಕ ಜಾನುವಾರುಗಳು ಗಾಯಗೊಂಡಿವೆ ಎಂದು ಸ್ಥಳೀಯರು ಹೇಳಿದ್ದಾರೆ. ಈ ಯುದ್ಧ ವಿಮಾನವನ್ನು ಚೀನಾದಿಂದ ಪಾಕಿಸ್ತಾನ ಪಡೆದುಕೊಂಡಿದೆ. ಚೀನಾ ಈ ವಿಮಾನವನ್ನು ಅತ್ಯಂತ ಶಕ್ತಿಶಾಲಿ ಯುದ್ಧ ವಿಮಾನ ಎಂದು ಹೇಳಿಕೊಂಡು ಪಾಕಿಸ್ತಾನಕ್ಕೆ ಮಾರಾಟ ಮಾಡಿತ್ತು.
1. ಈ ಹಿಂದೆ ಏಪ್ರಿಲ್ 2023 ರಲ್ಲಿ, ರಾವಲ್ಪಿಂಡಿಯ ಗುಡ್ಡಗಾಡು ಪ್ರದೇಶದಲ್ಲಿ ಪಾಕಿಸ್ತಾನ ವಾಯುಪಡೆಯ ಯುದ್ಧ ವಿಮಾನದ ಇಂಧನ ಟ್ಯಾಂಕ್ ಬಿದ್ದಿತ್ತು. 1997 ರಲ್ಲಿ ಕರಾಚಿಯ ವಸತಿ ಪ್ರದೇಶದಲ್ಲಿ ವಿಮಾನದ ಇಂಧನ ಟ್ಯಾಂಕ್ ಬಿದ್ದು 6 ಜನರು ಸಾವನ್ನಪ್ಪಿದ್ದರು. ಪಾಕಿಸ್ತಾನ ವಾಯುಪಡೆಯ ವಿಮಾನಗಳ ತಾಂತ್ರಿಕ ವ್ಯವಸ್ಥೆಯ ಬಗ್ಗೆ ಈ ಹಿಂದೆಯೂ ಪ್ರಶ್ನೆಗಳು ಎದ್ದಿವೆ.
2. ಚೀನಾ ತನ್ನ ಅತ್ಯಾಧುನಿಕ ಯುದ್ಧ ವಿಮಾನ ‘ಜೆ-35’ ಅನ್ನು ಪಾಕಿಸ್ತಾನಕ್ಕೆ ನೀಡಲಿದೆ; ಆದರೆ ಈಗ ಒಂದು ವಿಮಾನದ ಇಂಧನ ಟ್ಯಾಂಕ್ ಬಿದ್ದಿರುವುದರಿಂದ ಪಾಕಿಸ್ತಾನವು ಚೀನಾದ ವಿಮಾನವನ್ನು ಮತ್ತೆ ನಂಬುತ್ತದೆಯೇ? ಎಂಬ ಪ್ರಶ್ನೆ ಉದ್ಭವಿಸಿದೆ.
ಸಂಪಾದಕೀಯ ನಿಲುವುಚೀನಾದ ವಸ್ತುಗಳ ಗುಣಮಟ್ಟ ತುಂಬಾ ಕಳಪೆಯಾಗಿದೆ ಎಂದು ಎಲ್ಲಾ ದೇಶಗಳು ಹಲವು ಬಾರಿ ಅನುಭವಿಸಿವೆ. ನೇಪಾಳವು ಚೀನಾದಿಂದ ಪಡೆದ ವಿಮಾನಗಳನ್ನು ಸ್ಕ್ರ್ಯಾಪ್ ಮಾಡಬೇಕಾಗಿದೆ. ಪಾಕಿಸ್ತಾನಕ್ಕೂ ಇದೇ ಪರಿಸ್ಥಿತಿ ಬರಲಿದೆ. ಇದರಿಂದ ತಂತ್ರಜ್ಞಾನದಲ್ಲಿ ಚೀನಾದ ಅರ್ಹತೆ ಮತ್ತು ವಿಶ್ವಾಸಾರ್ಹತೆ ಎಷ್ಟು ಎಂಬುದು ಗಮನಕ್ಕೆ ಬರುತ್ತದೆ! |