ಉತ್ತರ ಪ್ರದೇಶದ ಕೆಲವು ಕಡೆಗಳಲ್ಲಿ ರಂಜಾನ್ ನಲ್ಲಿ ಮಸೀದಿಗಳಿಂದ ಭೋಂಗಾಗಳಿಲ್ಲದೆ ಆಜಾನ್ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಅನೇಕ ಜಿಲ್ಲೆಗಳಲ್ಲಿ ಪ್ರಾರಂಭವಾಗಿರುವ ರಂಜಾನ್‌ ವೇಳೆ ಯಾವುದೇ ಭೋಂಗಾಗಳನ್ನು ಬಳಸದೇ ಮಸೀದಿಗಳಿಂದ ಆಜಾನ್ ಮಾಡಲಾಗುತ್ತಿದೆ. ಯೋಗಿ ಆದಿತ್ಯನಾಥ್ ಸರಕಾರವು ಧಾರ್ಮಿಕ ಸ್ಥಳಗಳಲ್ಲಿನ ಭೋಂಗಾಗಳ ಬಗ್ಗೆ ಧೋರಣಾತ್ಮಕ ನೀತಿಯನ್ನು ಜಾರಿಗೆ ತಂದಿದೆ. ಸೀಮಿತ ಶಬ್ದವನ್ನು ಉಲ್ಲಂಘಿಸುವ ಹಾಗೂ ನಿಯಮ ಉಲ್ಲಂಘಿಸಿ ಭೋಂಗಾ ಶಬ್ಧ ಮಾಡುವ ಧಾರ್ಮಿಕ ಸ್ಥಳಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. ಸದ್ಯ ಅಲ್ಲಿನ ಸಂಭಲ್, ಬರೇಲಿ, ಮೊರಾದಾಬಾದ್ ಮತ್ತು ಇತರ ಜಿಲ್ಲೆಗಳಲ್ಲಿ ಭೋಂಗಾಗಳಿಂದ ಅಜಾನ್ ಮಾಡುವುದನ್ನು ನಿಲ್ಲಿಸಲಾಗಿದೆ. ಅನೇಕ ಮಸೀದಿಗಳಲ್ಲಿನ ಭೋಂಗಾಗಳ ವಿರುದ್ಧ ಪೋಲೀಸರು ಕ್ರಮ ಕೈಗೊಂಡು ಜಪ್ತಿ ಮಾಡುತ್ತಿದ್ದಾರೆ. ಈ ಕಾರಣದಿಂದಾಗಿ, ಈಗ ಮಸೀದಿಗಳ ಮೇಲ್ಛಾವಣಿಯಿಂದ ಇಮಾಮ್‌ಗಳು ಮೌಖಿಕವಾಗಿ ಆಜಾನ್ ಮಾಡುತ್ತಿದ್ದಾರೆ.

1. ಎಐಎಂಐಎಂ (ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್) ನ ಅಖಿಲ ಭಾರತೀಯ ಮುಸ್ಲಿಂ ಏಕತಾ ಸಂಘ) ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದು ಸಂಜೆಯ ಇಫ್ತಾರ್ (ರಂಜಾನ್ ವೇಳೆ ಮುಸ್ಲಿಮರು ಉಪವಾಸ ಬಿಡುವ ಸಮಯ) ಸಮಯದಲ್ಲಿ ಮಸೀದಿಗಳಲ್ಲಿ ಕೇವಲ 2 ನಿಮಿಷಗಳ ಕಾಲ ಭೋಂಗಾಗಳ ಮೂಲಕ ಪ್ರಾರ್ಥನೆ ಮಾಡಲು ಅನುಮತಿ ನೀಡುವಂತೆ ಮನವಿ ಮಾಡಿದೆ.

2. ಭೋಂಗಾಗಳನ್ನು ಅನುಮತಿಸದಿದ್ದರೆ ರಂಜಾನ್‌ನಲ್ಲಿ ಸೆಹರೀಗಾಗಿ (ರಂಜಾನ್ ತಿಂಗಳಲ್ಲಿ ಬೆಳಗಿನ ಜಾವದ ಉಪವಾಸ) ಪ್ರಾರಂಭಿಸುವ ಮೊದಲ ಬೆಳಗಿನ ಊಟ) ತಾಳವಾದ್ಯಗಳನ್ನು ನುಡಿಸುವ ಮೂಲಕ ಜನರಿಗೆ ಮನವಿ ಮಾಡಲಾಗುವುದು ಎಂದು ಮಸೀದಿಯ ಮೌಲ್ವಿಗಳು (ಇಸ್ಲಾಮಿನ ಧಾರ್ಮಿಕ ಮುಖಂಡರು) ಹೇಳಿದ್ದಾರೆ.

3. ಮುಸಲ್ಮಾನರು ಸರಕಾರದ ಸೂಚನೆಗಳನ್ನು ಪಾಲಿಸಬೇಕು ಮತ್ತು ರಂಜಾನ್ ನ ಸಮಯದಲ್ಲಿ ಸೆಹರೀ ಮತ್ತು ಇಫ್ತಾರ್ ಆಯೋಜಿಸಬೇಕೆಂದು ಸಂಭಲ್ ನ ಪೊಲೀಸ್ ವರಿಷ್ಠಾಧಿಕಾರಿ ಸೂಚಿಸಿದ್ದಾರೆ.

ಸಂಪಾದಕೀಯ ನಿಲುವು

ಉತ್ತರ ಪ್ರದೇಶದಲ್ಲಿ ಇದು ಸಾಧ್ಯವಾಗುವುದಾದರೆ, ದೇಶದ ಅನ್ಯ ಕಡೆಗಳಲ್ಲಿ ಏಕೆ ಹೀಗೆ ಸಾಧ್ಯವಾಗುತ್ತಿಲ್ಲ? ಕೇಂದ್ರ ಮತ್ತು ದೇಶದ 18 ರಾಜ್ಯಗಳಲ್ಲಿ ಬಿಜೆಪಿ ಸರಕಾರವಿರುವಾಗ ಇಂತಹ ಬದಲಾವಣೆ ಕಷ್ಟವಲ್ಲವೆಂದು ಹಿಂದೂಗಳಿಗೆ ಅನಿಸುತ್ತದೆ!