Bangladesh Curriculum Changes : ಮಹಮ್ಮದ ಯೂನೂಸ ಸರಕಾರವು ಪಠ್ಯಕ್ರಮದಿಂದ ‘ಬಾಂಗ್ಲಾದೇಶದ ಸ್ವಾತಂತ್ರ್ಯದಲ್ಲಿ ಭಾರತದ ಕೊಡುಗೆ’ ಈ ಪಾಠವನ್ನು ಕೈಬಿಟ್ಟಿದೆ !

  • ಬಾಂಗ್ಲಾದೇಶದ ಭಾರತ ದ್ವೇಷ !

  • ಮೌನವಾಗಿ ಸಹಿಸುತ್ತಲೇ ಇರುವುದು, ಇದು ಭಾರತದ ಸ್ವಾಭಿಮಾನಕ್ಕೆ ಧಕ್ಕೆ ತರುವಂತಿದೆ !

ಮಹಮ್ಮದ ಯೂನೂಸ

ಢಾಕಾ – ಬಾಂಗ್ಲಾದೇಶದಲ್ಲಿ ಪ್ರಧಾನಿ ಶೇಖ ಹಸೀನಾ ಅವರ ಸರಕಾರವನ್ನು ಉರುಳಿಸಿದ ನಂತರ, ಮಹಮ್ಮದ ಯೂನೂಸ ಅವರ ಮಧ್ಯಂತರ ಸರಕಾರವು ಅಲ್ಲಿನ ಪಠ್ಯಕ್ರಮದಲ್ಲಿಯೂ ಬದಲಾವಣೆಗಳನ್ನು ಮಾಡಲು ಪ್ರಾರಂಭಿಸಿದೆ. ಯೂನೂಸ ಸರಕಾರದ ಸೂಚನೆಯಂತೆ, ಬಾಂಗ್ಲಾದೇಶದ ರಾಷ್ಟ್ರೀಯ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಮಂಡಳಿಯು 2025 ರ ಶೈಕ್ಷಣಿಕ ವರ್ಷದಲ್ಲಿ ಶಾಲಾ ಪಠ್ಯಕ್ರಮದಿಂದ ಶೇಖ ಮುಜಿಬುರ ರೆಹಮಾನ ಅವರಿಗೆ ಸಂಬಂಧಿಸಿದ ವಿಷಯವನ್ನು ಕಡಿತಗೊಳಿಸಿದೆ. ಶೇಖ ಮುಜಿಬುರ ರೆಹಮಾನ ಅವರು ಬಾಂಗ್ಲಾದೇಶದ ಸಂಸ್ಥಾಪಕ ಮತ್ತು ಮೊದಲ ಅಧ್ಯಕ್ಷರಾಗಿದ್ದರು. ಇದರೊಂದಿಗೆ ಈ ಪಠ್ಯಕ್ರಮದಿಂದ ‘ಬಾಂಗ್ಲಾದೇಶದ ಸ್ವಾತಂತ್ರ್ಯದಲ್ಲಿ ಭಾರತದ ಕೊಡುಗೆ’ ಎಂಬ ಅಧ್ಯಾಯವನ್ನು ತೆಗೆದುಹಾಕಲಾಗಿದೆ.

1. ಈ ಪುಸ್ತಕದಲ್ಲಿ ಉಲ್ಲೇಖಿಸಲಾದ ಇತರ ರಾಜಕೀಯ ವ್ಯಕ್ತಿಗಳಲ್ಲಿ ಮುಸ್ಲಿಂ ಲೀಗ್ ಪಕ್ಷದ ಮಾಜಿ ನಾಯಕ ಮೌಲಾನಾ ಅಬ್ದುಲ ಹಮೀದ ಖಾನ ಭಶಾನಿ, ಅಖಂಡ ಬಂಗಾಳದ ಮಾಜಿ ಮುಖ್ಯಮಂತ್ರಿ ಮತ್ತು ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಮತ್ತು ಹಿಂದೂ ವಿರೋಧಿ ಹುಸೇನ ಸುಹರಾವರ್ದಿ, ಮುಸ್ಲಿಂ ಲೀಗ್‌ನ ಮಾಜಿ ನಾಯಕ ಮತ್ತು ಅಂದಿನ ಪಾಕಿಸ್ತಾನದ ಪ್ರಧಾನ ಮಂತ್ರಿ ಅಬುಲ್ ಕಾಸಿಂ ಫಜಲುಲ ಹಕ ಮತ್ತು ಶೇಖ ಹಸೀನಾ ಅವರ ಪ್ರತಿಸ್ಪರ್ಧಿ ಖಾಲಿದಾ ಜಿಯಾ ಮತ್ತು ಅವರ ಪತಿ ಮತ್ತು ಮಾಜಿ ಅಧ್ಯಕ್ಷ ಜಿಯಾವುರ ರೆಹಮಾನ್ ಸೇರಿದ್ದಾರೆ. ಈಗ ಇವರೆಲ್ಲರ ಇತಿಹಾಸವನ್ನು ಪಠ್ಯದಲ್ಲಿ ಸೇರಿಸಲಾಗುವುದು.

2. ನಾಲ್ಕನೇ ತರಗತಿಯ ಬಂಗಾಳಿ ಪುಸ್ತಕಗಳಿಂದ ‘ಮುಜಿಬ್ ಮಾನೆ ಮುಕ್ತಿ’ (ಮುಜಿಬ್ ಎಂದರೆ ಸ್ವಾತಂತ್ರ್ಯ) ಎಂಬ ವಾಕ್ಯವನ್ನು ತೆಗೆದುಹಾಕಲಾಗಿದೆ.

3. ಹಿಂದಿನ ಪುಸ್ತಕಗಳಲ್ಲಿ ಮಾರ್ಚ್ 26, 1971 ರಂದು ಸ್ವಾತಂತ್ರ್ಯದ ಮೊದಲ ಘೋಷಣೆಯನ್ನು ಮಾಡಿದ ಕೀರ್ತಿಯನ್ನು ಶೇಖ ಮುಜಿಬುರ ರೆಹಮಾನ ಅವರಿಗೆ ನೀಡಲಾಗಿತ್ತು; ಆದರೆ ಈಗ ಈ ಕೀರ್ತಿಯನ್ನು ಜಿಯಾವುರ ರೆಹಮಾನ ಅವರಿಗೆ ನೀಡಲಾಗಿದೆ.

4. ಬಾಂಗ್ಲಾದೇಶ ಸರಕಾರವು ಎಲ್ಲಾ ಪಠ್ಯಕ್ರಮಗಳಿಂದ ಶೇಖ ಹಸೀನಾ ಅವರ ಹೆಸರನ್ನು ಸಂಪೂರ್ಣವಾಗಿ ತೆಗೆದುಹಾಕಿದೆ. ಹಿಂದಿನ ಪುಸ್ತಕಗಳ ಹಿಂಭಾಗದಲ್ಲಿ ಶೇಖ ಹಸೀನಾ ಅವರು ವಿದ್ಯಾರ್ಥಿಗಳಿಗೆ ನೀಡಿದ ಸಾಂಪ್ರದಾಯಿಕ ಸಂದೇಶ ಮುದ್ರಿಸಲಾಗುತ್ತಿತ್ತು. ಅದನ್ನು ಸಹ ತೆಗೆದುಹಾಕಲಾಗಿದೆ.

5. ಬಾಂಗ್ಲಾದೇಶ ಶಿಕ್ಷಣ ಸಚಿವಾಲಯವು ನೇಮಿಸಿದ 57 ತಜ್ಞರ ತಂಡವು ಈ ಪರಿಷ್ಕೃತ ಪಠ್ಯಕ್ರಮವನ್ನು ಸಿದ್ಧಪಡಿಸಿದೆ.

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿದ ಮೊದಲ ದೇಶ ಎಂದು ಭಾರತದ ಹೆಸರನ್ನು ತೆಗೆದುಹಾಕಲಾಗಿದೆ!

ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿದ ಮೊದಲ ದೇಶ ಎಂದು ಭಾರತದ ಹೆಸರನ್ನು ಪುಸ್ತಕಗಳ ಹೊಸ ಆವೃತ್ತಿಗಳಿಂದ ತೆಗೆದುಹಾಕಲಾಗಿದೆ. ಭಾರತದ ಹೆಸರನ್ನು ತೆಗೆದುಹಾಕಿ, ಅಲ್ಲಿ ಭೂತಾನ್ ಎಂದು ಮಾಡಲಾಗಿದೆ. ಬಾಂಗ್ಲಾದೇಶದ ಪಠ್ಯಪುಸ್ತಕಗಳ ಪರಿಷ್ಕೃತ ಆವೃತ್ತಿಯಲ್ಲಿ ಡಿಸೆಂಬರ್ 3, 1971 ರಂದು ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಗುರುತಿಸಿದ ಮೊದಲ ದೇಶ ಭೂತಾನ್ ಎಂದು ಹೇಳಲಾಗಿದೆ. ಬಾಂಗ್ಲಾದೇಶದ ಪಠ್ಯಪುಸ್ತಕಗಳ ಪರಿಷ್ಕೃತ ಆವೃತ್ತಿಯಲ್ಲಿ ಡಿಸೆಂಬರ 3, 1971 ರಂದು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕೆ ಮಾನ್ಯತೆ ನೀಡಿದ ಮೊದಲ ದೇಶ ಭೂತಾನ ದೇಶವಾಗಿತ್ತು ಎಂದು ಹೇಳಲಾಗಿದೆ.

ಸಂಪಾದಕೀಯ ನಿಲುವು

  • ಭಾರತವನ್ನು ಇಷ್ಟು ಕೀಳಾಗಿ ಕಾಣುವ ಬಾಂಗ್ಲಾದೇಶದೊಂದಿಗೆ ಭಾರತ ಸರಕಾರವು ಎಲ್ಲಾ ಸಂಬಂಧಗಳನ್ನು ಏಕೆ ಕಡಿದುಕೊಳ್ಳುವುದಿಲ್ಲ?
  • ಬಾಂಗ್ಲಾದೇಶವು ಹಿಂದೂಗಳ ಮೇಲೆ ದೌರ್ಜನ್ಯವನ್ನು ಮಾಡುತ್ತಲೇ ಇರುವುದು, ದೇಶವನ್ನು ಅವಮಾನಿಸುತ್ತಲೇ ಇರುವುದು ಮತ್ತು ನಾವೆಲ್ಲರೂ ಅದನ್ನು