ಪಾದ್ರಿಯ ವಿರುದ್ಧ ಅನೇಕ ಗಂಭೀರ ಅಪರಾಧಗಳ ದಾಖಲು
ಕಪೂರ್ಥಲಾ (ಪಂಜಾಬ್) – ಇಲ್ಲಿನ 22 ವರ್ಷದ ಮಹಿಳೆಯೊಬ್ಬರು ಪಾದ್ರಿ ಬಜಿಂದರ್ ಸಿಂಗ್ ವಿರುದ್ಧ ದೂರು ದಾಖಲಿಸಿದ್ದಾರೆ, ಇದರಲ್ಲಿ ಅವರು ಹದಿಹರೆಯದವಳಾಗಿದ್ದಾಗ ಬಜಿಂದರ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿದ್ದಾರೆ. ಇದರ ನಂತರ ಪೊಲೀಸರು ಬಜಿಂದರ್ ವಿರುದ್ಧ ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಹಿಂಬಾಲಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದಾರೆ.
1. ಸಂತ್ರಸ್ತ ಯುವತಿ ಡಿಸೆಂಬರ್ 2017 ರಿಂದ ಬಜಿಂದರ ಸಿಂಗ ಅವರ ಸಭೆಗಳಿಗೆ ಹಾಜರಾಗುತ್ತಿದ್ದಳು.
ಸಂತ್ರಸ್ತ ಮಹಿಳೆ 2020 ರವರೆಗೆ ಪಾದ್ರಿಯ ಪೂಜಾ ತಂಡದ ಭಾಗವಾಗಿದ್ದಳು. 2022 ರಲ್ಲಿ ಅವನು ನನ್ನನ್ನು ಭಾನುವಾರ ಅವನ ಕ್ಯಾಬಿನ್‌ನಲ್ಲಿ ಕೂರಿಸಲು ಪ್ರಾರಂಭಿಸಿದನು. ನಾನು ಏಕಾಂಗಿಯಾಗಿದ್ದಾಗ, ಅವನು ನನ್ನನ್ನು ಬಲವಂತವಾಗಿ ತಬ್ಬಿಕೊಳ್ಳುತ್ತಿದ್ದನು ಮತ್ತು ಅಯೋಗ್ಯವಾಗಿ ಸ್ಪರ್ಶಿಸುತ್ತಿದ್ದನು.
2. ಸಂತ್ರಸ್ತೆ, ನಾನು ಕಾಲೇಜಿಗೆ ಹೋಗುತ್ತಿದ್ದಾಗ, ಬಜಿಂದರ್ ತನ್ನ ಕಾರಿನಲ್ಲಿ ನನ್ನನ್ನು ಹಿಂಬಾಲಿಸಲು ಪ್ರಾರಂಭಿಸಿದನು. ನಾನು ಅವನನ್ನು ಮದುವೆಯಾಗದಿದ್ದರೆ, ಅವನು ನನ್ನ ಪೋಷಕರು ಮತ್ತು ಸಹೋದರನನ್ನು ಕೊಲ್ಲುವೆ ಎಂದು ಬೆದರಿಸುತ್ತಿದ್ದನು. ಬಜಿಂದರ ಸಿಂಗ ವಿವಾಹಿತನಾಗಿದ್ದನು. ನಂತರ ನನಗೆ ‘ಪ್ಯಾನಿಕ್ ಅಟ್ಯಾಕ್’ ಬರಲು ಪ್ರಾರಂಭವಾಯಿತು. ಇದರಿಂದಾಗಿ ನಾನು 3 ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಬೇಕಾಯಿತು. ಮಾರ್ಚ್ 2023 ರಲ್ಲಿ ಮತ್ತೊಬ್ಬ ಕ್ರೈಸ್ತ ಧರ್ಮೋಪದೇಶಕ ರಾಜಾ ಸಿಂಗ್ ಅವರನ್ನು ಮದುವೆಯಾಗುವ ಮೊದಲು ಬಜಿಂದರ್ ಅವಳಿಗೆ ಬೆದರಿಕೆ ಹಾಕಿದ್ದನು.
3. ಪಾದ್ರಿ ಬಜಿಂದರ ಸಿಂಗ ‘ಚರ್ಚ್ ಆಫ್ ಗ್ಲೋರಿ ಅಂಡ್ ವಿಸ್ಡಮ’ ಅನ್ನು ನಡೆಸುತ್ತಾನೆ. ಅವನು ‘ಪವಾಡ ಚಿಕಿತ್ಸೆ’ಗಳಿಗೂ ಹೆಸರುವಾಸಿಯಾಗಿದ್ದಾನೆ. ಇದನ್ನು ಅವನು ಜನರನ್ನು ಕ್ರೈಸ್ತ ಧರ್ಮಕ್ಕೆ ಆಕರ್ಷಿಸಲು ಬಳಸುತ್ತಾನೆ. ಆತನನ್ನು ಜುಲೈ 2018 ರಲ್ಲಿ ಪಂಜಾಬ್‌ನ ಝಿರಕಪುರದಲ್ಲಿ ಮಹಿಳೆಯೊಬ್ಬಳ ಮೇಲೆ ಬಲಾತ್ಕಾರ ಎಸಗಿದ ಆರೋಪದ ಮೇಲೆ ಬಂಧಿಸಲಾಗಿತ್ತು. ಅದಕ್ಕೂ ಮೊದಲು ಅವನು ಒಂದು ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿದ್ದನು.
ಸಂಪಾದಕೀಯ ನಿಲುವುಪಾದ್ರಿ ಮತ್ತು ಮೌಲಾನಾಗಳು ಲೈಂಗಿಕ ಶೋಷಣೆಯಲ್ಲಿ ಮುಂದಿರುತ್ತಾರೆ, ಇದು ಅನೇಕ ಘಟನೆಗಳಲ್ಲಿ ಬಹಿರಂಗವಾಗಿದ್ದರೂ, ಪ್ರಸಾರಮಾಧ್ಯಮಗಳು ಇದರ ಬಗ್ಗೆ ಎಂದಿಗೂ ಚರ್ಚಿಸುವುದಿಲ್ಲ; ಏಕೆಂದರೆ ಬಹುತೇಕ ಎಲ್ಲಾ ಪತ್ರಿಕೆಗಳು ತಥಾಕಥಿತ `ಜಾತ್ಯಾತೀತ’ ಆಗಿವೆ ! |