ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ನೌಶೆರಾ ಪ್ರದೇಶದ ಒಂದು ಮಸೀದಿಯಲ್ಲಿ ಶುಕ್ರವಾರ, ಫೆಬ್ರವರಿ 28 ರ ಮಧ್ಯಾಹ್ನ ನಮಾಜ ಸಮಯದಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 5 ಜನರು ಸಾವನ್ನಪ್ಪಿದ್ದಾರೆ ಮತ್ತು 20 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದು ಆತ್ಮಹತ್ಯಾ ಬಾಂಬ್ ಸ್ಫೋಟ ಆಗಿದೆಯೆಂದು ಸ್ಥಳೀಯ ಪೊಲೀಸರು ಪ್ರಾಥಮಿಕ ಮಾಹಿತಿ ನೀಡಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಸಂಪಾದಕೀಯ ನಿಲುವುಭಾರತದಲ್ಲಿ ಹೀಗಾಗಿದ್ದರೆ, ಹಿಂದೂಗಳನ್ನು ಹೊಣೆಗಾರರನ್ನಾಗಿ ಮಾಡಿ ‘ಕೇಸರಿ ಭಯೋತ್ಪಾದನೆ’ ಎಂದು ಕರೆಯುತ್ತಿದ್ದರು; ಆದರೆ ಪಾಕಿಸ್ತಾನ ಸೇರಿದಂತೆ ಅನೇಕ ಇಸ್ಲಾಮಿಕ್ ದೇಶಗಳಲ್ಲಿ ಮಸೀದಿಯಲ್ಲಿ ಮುಸಲ್ಮಾನರಿಂದ ಇಂತಹ ಸ್ಫೋಟಗಳನ್ನು ನಡೆಸಲಾಗುತ್ತಿದೆ, ಅದರ ಬಗ್ಗೆ ಜಗತ್ತಿನ ಯಾವುದೇ ಇಸ್ಲಾಮಿಕ್ ದೇಶ, ಇಸ್ಲಾಮಿಕ್ ಸಂಘಟನೆ, ಇಸ್ಲಾಮಿಕ್ ಧರ್ಮಗುರು ಬಾಯಿ ತೆರೆಯುವುದಿಲ್ಲ, ಎಂಬುದನ್ನು ಗಮನಿಸಿ ! |