|
ನವದೆಹಲಿ – ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ ಮಹಮ್ಮದ್ ಯೂನಸ್ ಬಾಂಗ್ಲಾದೇಶದ ಇತಿಹಾಸವನ್ನು ಹೊಸದಾಗಿ ಬರೆಯಲು ಪ್ರಯತ್ನಿಸುತ್ತಿದ್ದಾರೆ. ನಡೆದ ಇತಿಹಾಸವನ್ನು ನಿಗ್ರಹಿಸುವ ಮತ್ತು ನಿರಾಕರಿಸುವ ಪ್ರಯತ್ನ ನಡೆಯುತ್ತಿದೆ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಮೇಲಿನ ದ್ವೇಷದಿಂದಾಗಿ ಯೂನಸ್ ಈ ಪ್ರಯತ್ನವನ್ನು ಪ್ರಾರಂಭಿಸಿದ್ದಾರೆ. ಮಹಮ್ಮದ್ ಯೂನಸ್ ಅಂದಾಜು 40 ಕೋಟಿ ಪುಸ್ತಕಗಳನ್ನು ಮುದ್ರಿಸಿದ್ದಾರೆ. ಈ ಪುಸ್ತಕಗಳಲ್ಲಿ ಬಾಂಗ್ಲಾದೇಶದ ಸಂಸ್ಥಾಪಕ ಶೇಖ್ ಮುಜಿಬುರ್ ರೆಹಮಾನ್ ಮತ್ತು ಅವರ ಮಗಳು, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರಿಗೆ ಸಂಬಂಧಿಸಿದ ಸಾಹಿತ್ಯವನ್ನು ತೆಗೆದುಹಾಕಿವೆ. ಅಷ್ಟೇ ಅಲ್ಲ, ಬಾಂಗ್ಲಾದೇಶದ ಸೃಷ್ಟಿಗೆ ಕಾರಣವಾದ ಭಾರತದ ಕೊಡುಗೆಯನ್ನು ಕಡೆಗಣಿಸಲಾಗಿದೆ,
1. ಹೊಸ ಪುಸ್ತಕಗಳಲ್ಲಿ ಭಾರತದ ಪಾತ್ರವನ್ನು ಉಲ್ಲೇಖಿಸಲಾಗಿದೆ; ಆದರೆ ಅನೇಕ ಚಿತ್ರಗಳನ್ನು ತೆಗೆದುಹಾಕಲಾಗಿದೆ. ಶೇಖ್ ಹಸೀನಾ ಅವರ ಛಾಯಾಚಿತ್ರಗಳು ಮತ್ತು ಅವರ ಕುರಿತಾದ ಪಠ್ಯವನ್ನು ಎಲ್ಲಾ ಶಾಲಾ ಪಠ್ಯಪುಸ್ತಕಗಳಿಂದ ಸಂಪೂರ್ಣವಾಗಿ ತೆಗೆದುಹಾಕಲಾಗಿದೆ.
2. ಶೇಖ್ ಹಸೀನಾ ಅವರ ತಂದೆ ಶೇಖ್ ಮುಜಿಬುರ್ ರೆಹಮಾನ್ ಅವರಿಗೆ ಸಂಬಂಧಿಸಿದ ಪಠ್ಯವನ್ನು ತೆಗೆದುಹಾಕಲಾಗಿದೆ ಅಥವಾ ಸಂಕ್ಷಿಪ್ತಗೊಳಿಸಲಾಗಿದೆ.
3. ಬಾಂಗ್ಲಾದೇಶದ ಸ್ವಾತಂತ್ರ್ಯ ಚಳವಳಿಯಲ್ಲಿ ಭಾರತದ ಪಾತ್ರವನ್ನು ಉಳಿಸಿಕೊಳ್ಳಲಾಗಿದೆ, ಆದರೆ ಮುಜಿಬುರ್ ರೆಹಮಾನ್ ಅವರೊಂದಿಗೆ ಇಂದಿರಾ ಗಾಂಧಿಯವರ ಛಾಯಾಚಿತ್ರಗಳನ್ನು ತೆಗೆದುಹಾಕಲಾಗಿದೆ.
4. ಪುಸ್ತಕಗಳ ಹಿಂದಿನ ಮುಖಪುಟದಲ್ಲಿ ಶೇಖ್ ಹಸೀನಾ ವಿದ್ಯಾರ್ಥಿಗಳಿಗೆ ಬರೆದಿದ್ದ ಸಂದೇಶವನ್ನು ತೆಗೆದುಹಾಕಲಾಗಿದೆ. ಅದರ ಬದಲಿಗೆ ಜುಲೈ 2024 ರಲ್ಲಿ ಅವರ ಆಡಳಿತದ ವಿರುದ್ಧದ ದಂಗೆಯ ಛಾಯಾಚಿತ್ರಗಳನ್ನು ಅಳವಡಿಸಲಾಗಿದೆ.
📚 Bangladesh Rewrites History – India’s Role Erased! ❌🇮🇳
Bangladesh’s interim government revises school textbooks, removing references to Mujibur Rahman & Sheikh Hasina!
🔎 India’s crucial role in Bangladesh’s creation is downplayed, fueling relentless anti-India sentiment!… pic.twitter.com/ODudIbV5cC
— Sanatan Prabhat (@SanatanPrabhat) February 28, 2025
ಸಂಪಾದಕೀಯ ನಿಲುವುಬಾಂಗ್ಲಾದೇಶದ ಭಾರತದ ಮೇಲಿನ ದ್ವೇಷ ನಿಲ್ಲುವುದಿಲ್ಲ. ಅದಕ್ಕೆ ಭಾರತದ ಶಕ್ತಿಯ ಅರಿವು ಮೂಡಿಸುವ ಆವಶ್ಯಕತೆಯಿದೆ; ಆದರೆ ಭಾರತ ಅದನ್ನು ಯಾವಾಗ ಮಾಡುತ್ತದೆ? ಎನ್ನುವುದೇ ಪ್ರಶ್ನೆಯಾಗಿದೆ! |