ಅಸ್ಸಾಂನಲ್ಲಿ ರಕ್ತಪಾತಕ್ಕೆ ಉಲ್ಫಾ ಉಗ್ರರ ಸಂಚು: ತರಬೇತಿ ನೀಡಿ ದಾಳಿಗೆ ಸಿದ್ಧತೆ
ಢಾಕಾ (ಬಾಂಗ್ಲಾದೇಶ) – ಪಾಕಿಸ್ತಾನದ ಗೂಢಾಚಾರ ಸಂಸ್ಥೆ ಐ.ಎಸ್.ಐ. (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ಬಾಂಗ್ಲಾದೇಶದ ಭೂಮಿಯನ್ನು ಬಳಸಿ ಭಾರತದಲ್ಲಿ ಅಶಾಂತಿ ಹಬ್ಬಿಸಲು ಇಚ್ಛಿಸುತ್ತಿದೆ. ಭಾರತದ ಈಶಾನ್ಯದ ಕಡೆಗಿನ ಪ್ರದೇಶಗಳಲ್ಲಿ ಅಸ್ಥಿರತೆ ನಿರ್ಮಾಣ ಮಾಡುವ ಪ್ರಯತ್ನದಲ್ಲಿ ಐ.ಎಸ್.ಐ. ಅಸ್ಸಾಂನಲ್ಲಿನ ‘ಉಲ್ಫಾ’ (ಯುನೈಟೆಡ್ ಲಿಬ್ರೇಶನ್ ಫ್ರಂಟ್ ಆಫ್ ಅಸ್ಸಾಂ – ಅಸ್ಸಾಂನ ಸ್ವಾತಂತ್ರ್ಯಕ್ಕಾಗಿ ಸಂಯುಕ್ತ ಮೋರ್ಚಾ) ಈ ಭಯೋತ್ಪಾದಕ ಸಂಘಟನೆಗೆ ಪ್ರಶಿಕ್ಷಣ ಶಿಬಿರ ಮತ್ತೆ ಆರಂಭಿಸುವ ತಯಾರಿಯಲ್ಲಿ ಇದೆ. ಐ.ಎಸ್.ಐ.ನ ಅಧಿಕಾರಿಗಳು ಇತ್ತೀಚಿಗೆ ಬಾಂಗ್ಲಾದೇಶಕ್ಕೆ ಬಂದಿರುವ ಉಲ್ಪಾ ನಾಯಕರ ಮತ್ತು ಕುಖ್ಯಾತ ಭಯೋತ್ಪಾದಕ ಪರೇಶ್ ಬರುವಾ ಇವನನ್ನು ಭೇಟಿ ಮಾಡಿರುವ ಸಮಾಚಾರ ಇದೆ. ‘ದ ಟ್ರಿಬ್ಯೂನ್’ ಈ ವಿಷಯದ ಸಮಾಚಾರ ಪ್ರಸಾರ ಮಾಡಿದೆ.
೧. ಅಸ್ಸಾಂ ಮತ್ತು ಈಶಾನ್ಯದಲ್ಲಿನ ರಾಜ್ಯಗಳ ಹತ್ತಿರ ಬಾಂಗ್ಲಾದೇಶದಲ್ಲಿ ಕೆಲವು ಪ್ರಶಿಕ್ಷಣ ಕೇಂದ್ರಗಳು ತೆರೆಯಲಾಗಿದೆ. ಈ ಶಿಬಿರಗಳು ಹಿಂದೆ ಕೂಡ ಆರಂಭವಾಗಿದ್ದವು; ಆದರೆ ಶೇಖ ಹಸಿನಾ ಪ್ರಧಾನಮಂತ್ರಿ ಇರುವಾಗ ಅವುಗಳನ್ನು ಮುಚ್ಚಲಾಗಿದ್ದವು.
೨. ಮಹಮ್ಮದ್ ಯುನೂಸ್ ಸರಕಾರದ ಅವಧಿಯಲ್ಲಿ ಐ.ಎಸ್.ಐ.ಗೆ ಮತ್ತೊಮ್ಮೆ ಬಾಂಗ್ಲಾದೇಶದಲ್ಲಿ ಪ್ರವೇಶ ದೊರೆತಿದೆ ಮತ್ತು ಅದು ಅಲ್ಲಿ ಶಿಬಿರಗಳು ಆರಂಭಿಸಿದೆ. ಭಾರತದ ಈಶಾನ್ಯ ಪ್ರದೇಶವನ್ನು ಅಸ್ಥಿರಗೊಳಿಸುವ ಭಾರಿ ಷಡ್ಯಂತ್ರದ ಇದು ಒಂದು ಭಾಗವಾಗಿದೆ.
೩. ಭಾರತೀಯ ಸುರಕ್ಷಾ ದಳದಿಂದ ಇತ್ತೀಚಿಗೆ ಬಾಂಗ್ಲಾದೇಶ ಗಡಿಯಿಂದ ಅರಬಿ, ಉರ್ದು ಮತ್ತು ಬಂಗಾಳಿ ಭಾಷೆಯಲ್ಲಿನ ವಯರ್ಲೆಸ್ ಸಂದೇಶ ತಡೆದಿರುವುದಾಗಿ ದಾವೆ ಮಾಡಿದೆ. ಇದರಿಂದ ಬಂಗಾಳದ ಗಡಿಯ ಪ್ರದೇಶದಲ್ಲಿ ಐ.ಎಸ್.ಐ.ದ ಉಪಸ್ಥಿತಿಯ ಕುರಿತು ಆತಂಕ ನಿರ್ಮಾಣವಾಗಿದೆ. ಈ ಪರಿಸ್ಥಿತಿ ಭಾರತದ ಸುರಕ್ಷತೆಗೆ ಒಂದು ದೊಡ್ಡ ಅಪಾಯವಾಗಿದೆ.
ಬರುವಾ ಇವನ ಶಿಕ್ಷೆ ಅಲ್ಪಗೊಳಿಸಿದೆ !
ಯುನೈಟೆಡ್ ಲಿಬ್ರೇಶನ್ ಫ್ರಂಟ್ ಆಫ್ ಅಸ್ಸಾಂ (ಉಲ್ಫಾ) ಇದು ಭಾರತದಲ್ಲಿನ ಈಶಾನ್ಯ ಭಾಗ ಅಸ್ಸಾಂ ರಾಜ್ಯದಲ್ಲಿ ಸಕ್ರಿಯ ಇರುವ ಒಂದು ಭಯೋತ್ಪಾದಕ ಸಂಘಟನೆಯಾಗಿದೆ. ಇದರಲ್ಲಿ ಸಶಸ್ತ್ರ ಸಂಘರ್ಷದ ಮೂಲಕ ಅಸ್ಸಾಂಅನ್ನು ಸ್ವತಂತ್ರ ದೇಶವನ್ನಾಗಿ ಮಾಡಲು ಪ್ರಯತ್ನಿಸಲಾಗುತ್ತಿದೆ. ಈ ಸಂಘಟನೆಯ ಎಲ್ಲಕ್ಕಿಂತ ಮಹತ್ವದ ವ್ಯಕ್ತಿ ಪರೇಶ್ ಬರುವಾ ಪ್ರಸ್ತುತ ಬಾಂಗ್ಲಾದೇಶದಲ್ಲಿ ಇದ್ದಾನೆ. ಕಳೆದ ತಿಂಗಳಲ್ಲಿ ಬಾಂಗ್ಲಾದೇಶದ ನ್ಯಾಯಾಲಯದಿಂದ ಬರುವಾ ಇವನ ಜೀವಾವಧಿ ಶಿಕ್ಷೆಯಲ್ಲಿನ ೧೪ ವರ್ಷಗಳವರೆಗೆ ಕಡಿಮೆಗೊಳಿಸಲಾಗಿದೆ. ಬಾಂಗ್ಲಾದೇಶದಲ್ಲಿ ಇತ್ತೀಚಿನ ಚಟುವಟಿಕೆ ನೋಡಿದರೆ ಬರುವಾ ಇವನನ್ನು ಅಮಾಯಕ ಎಂದು ಘೋಷಿಸಬಹುದು ಎಂದು ಗುಪ್ತಚರ ಇಲಾಖೆಗೆ ಅನಿಸುತ್ತದೆ. ಈಶಾನ್ಯದ ಭಾಗದಲ್ಲಿ ಅವನ ಮಾಹಿತಿಯನ್ನು ಐ.ಎಸ್.ಐ. ಈ ಪ್ರದೇಶದಲ್ಲಿ ಅಸ್ಥಿರಗೊಳಿಸುವುದಕ್ಕಾಗಿ ಉಪಯೋಗಿಸಬಹುದು.
ಸಂಪಾದಕೀಯ ನಿಲುವುಬಾಂಗ್ಲಾದೇಶದ ಅಸ್ಥಿರತೆಯ ಬಿಸಿ ಭಾರತಕ್ಕೆ: ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಸವಾಲುಗಳು, ಭಾರತದ ಜಾಗರೂಕತೆ ಎಷ್ಟು? |