ಕ್ರಮ ಕೈಗೊಳ್ಳದಿರುವುದರಿಂದ ಹಿಂದುಗಳು ಮನೆ ಮಾರಿ ಸ್ಥಳಾಂತರಗೊಳ್ಳುವ ಸಿದ್ಧತೆಯಲ್ಲಿ !
ಸಂಭಲ (ಉತ್ತರಪ್ರದೇಶ) – ಸಂಭಲ ಜಿಲ್ಲೆಯಲ್ಲಿನ ಸಿರಸಿ ನಗರದಲ್ಲಿನ ಚಾಮುಂಡ ದೇವಸ್ಥಾನದ ಜಾಗದ ಮೇಲೆ ಮುಸಲ್ಮಾನರು ಬಹಾಳ ಕಾಲದಿಂದ ಅತಿಕ್ರಮಣ ಮಾಡಿದ್ದಾರೆ. ಹಿಂದೂ ಆಡಳಿತಕ್ಕೆ ದೇವಸ್ಥಾನ ಪರಿಸರದಿಂದ ಅತಿಕ್ರಮಣದಿಂದ ಮುಕ್ತಗೊಳಿಸಲು ಅನೇಕ ವರ್ಷಗಳಿಂದ ಆಗ್ರಹಿಸುತ್ತಿದೆ; ಆದರೆ ಸರಕಾರ ಆಶ್ವಾಸನೆ ನೀಡುವುದನ್ನು ಬಿಟ್ಟು ಬೇರೆ ಏನನ್ನು ಕೂಡ ಮಾಡುವುದಿಲ್ಲ ಎಂದು ಅಸಮಾಧಾನಗೊಂಡು ಕೆಲವು ಹಿಂದುಗಳು ಅವರ ಮನೆಯ ಮೇಲೆ ‘ಈ ಮನೆ ಮಾರಾಟಕ್ಕಿದೆ’ ಎಂದು ಬರೆದಿರುವ ಪೋಸ್ಟರ್ ಅಂಟಿಸಿದ್ದಾರೆ.
೧. ಪೊಲೀಸರಿಗೆ ಇದರ ಮಾಹಿತಿ ದೊರೆಯುತ್ತಲೇ ತಕ್ಷಣ ಸಂಬಂಧಿತ ಕುಟುಂಬದಲ್ಲಿನ ಕೆಲವು ಸದಸ್ಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ವಿಮಲ ಸೈನಿ, ಹರಿ ಓಂ ಸೈನಿ ಮತ್ತು ಪಪ್ಪು ಸೈನಿ ಹೀಗೆ ಈ ಹಿಂದುಗಳ ಹೆಸರುಗಳಾಗಿವೆ. ಇವರ ಕುಟುಂಬದವರು ಅವರನ್ನು ಬಿಡುವುದಕ್ಕಾಗಿ ಪ್ರಯತ್ನ ಮಾಡಿದರು; ಆದರೆ ಬಹಳಷ್ಟು ಸಾರಿ ಅವರನ್ನು ಬಿಡಲಾಗಿಲ್ಲ, ಎಂದು ಆರೋಪಿಸಿದ್ದಾರೆ.
೨. ಹಿಂದುಗಳ ಪ್ರಕಾರ, ಈಗ ನಿಧಾನವಾಗಿ ಅನೇಕ ಕುಟುಂಬಗಳು ಇಲ್ಲಿಂದ ಸ್ಥಳ್ಳಾಂತರಿತವಾಗಿವೆ. ನಮಗೆ ಇನ್ನೂ ಕೂಡ ನ್ಯಾಯ ದೊರೆಯದಿದ್ದರೇ ನಾವು ಕೂಡ ಇಲ್ಲಿಂದ ಸ್ಥಳಾಂತರಗೊಳ್ಳುವೆವು, ಎಂದು ಹೇಳಿದರು.
೩. ಸಂಭಲದ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಪೆನ್ಸಿಯ ಇವರು, ಅಲ್ಲಿ ಹೇಗೆ ಏನೂ ಕೂಡ ಇಲ್ಲ. ಪರಿಸ್ಥಿತಿ ಸಂಪೂರ್ಣವಾಗಿ ಸಾಮಾನ್ಯವಾಗಿದೆ. ಇಲ್ಲಿ ಅಕ್ರಮ ಅತಿಕ್ರಮಣವಾಗಿದೆ ಎಂದು ಯಾವಾಗ ಸರಕಾರಕ್ಕೆ ತಿಳಿಯಿತು, ಆಗ ಈ ಜಾಗ ತಕ್ಷಣ ಖಾಲಿ ಮಾಡಲಾಗಿದೆ ಮತ್ತು ಕಂದಾಯ ಇಲಾಖೆಯ ವಿಚಾರಣೆಯ ನಂತರ ಕಾನೂನು ರೀತಿಯಲ್ಲಿ ಪ್ರಕ್ರಿಯೆ ಆರಂಭವಾಗಿದೆ.
೪. ಆದರೂ ಹಿಂದುಗಳು, ಚಾಮುಂಡಾ ದೇವಸ್ಥಾನದ ಜಾಗದ ಮೇಲೆ ಅತಿಕ್ರಮಣವಾಗಿದೆ ಎಂದೇ ಹೇಳುತ್ತಿದ್ದಾರೆ.
ಸಂಪಾದಕೀಯ ನಿಲುವುಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಹೀಗೆ ನಡೆಯಬಾರದು, ಎಂದು ಹಿಂದುಗಳಿಗೆ ಅನಿಸುತ್ತದೆ ! |