ದೇಶಾಂಗ ಸಚಿವ ಡಾ. ಜೈಶಂಕರ್ ಹೇಳಿಕೆಗೆ ಬಾಂಗ್ಲಾದೇಶದ ಉದ್ಧಟತನದ ಉತ್ತರ
ಢಾಕಾ (ಬಾಂಗ್ಲಾದೇಶ) – ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ‘ಭಾರತದೊಂದಿಗೆ ಯಾವ ರೀತಿಯ ಸಂಬಂಧವನ್ನು ಬಯಸುತ್ತದೆ ಎಂಬುದನ್ನು ಬಾಂಗ್ಲಾದೇಶ ನಿರ್ಧರಿಸಬೇಕು’ ಎಂದು ಹೇಳಿದ್ದರು. ಇದಕ್ಕೆ ಬಾಂಗ್ಲಾದೇಶದ ಮಧ್ಯಂತರ ಸರಕಾರದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ತೌಹಿದ್ ಹುಸೇನ್, ಉದ್ಧಟತನದಿಂದ ಉತ್ತರ ನೀಡುತ್ತಾ, ಈ ವಿಷಯದಲ್ಲಿ ನಮ್ಮ ನಿರ್ಧಾರವು ತುಂಬಾ ಸ್ಪಷ್ಟವಾಗಿದೆ. ನಮಗೆ ಪರಸ್ಪರ ಗೌರವ ಮತ್ತು ಹಿತಾಸಕ್ತಿಗಳ ಆಧಾರದ ಮೇಲೆ ಭಾರತದೊಂದಿಗೆ ಉತ್ತಮ ಕೆಲಸಕಾರ್ಯಗಳ ಸಂಬಂಧ ಬೇಕಾಗಿದೆ. ಭಾರತವು ಬಾಂಗ್ಲಾದೇಶದೊಂದಿಗೆ ಯಾವ ರೀತಿಯ ಸಂಬಂಧ ಬೇಕಾಗಿದೆಯೆಂದು ಅದು ನಿರ್ಧರಿಸಬೇಕಾಗುತ್ತದೆ’, ಎಂದು ಹೇಳಿದರು.
1. ನಮ್ಮ ನಿಗಾ ಸಂಬಂಧಗಳ ಸುಧಾರಣೆ ಕಡೆಗೆ
ಹುಸೇನ ಮಾತನಾಡುತ್ತಾ ಡಾ. ಜೈಶಂಕರ್ ಅವರು ‘ಬಾಂಗ್ಲಾದೇಶ ಸರಕಾರದಲ್ಲಿರುವ ಜನರು ಭಾರತದ ವಿರುದ್ಧ ಕೆಲವು ಟಿಪ್ಪಣೆಗಳನ್ನು ಮಾಡುತ್ತಿದ್ದಾರೆ’ ಎಂದು ಹೇಳಿದ್ದಾರೆ. ಎರಡೂ ಕಡೆಯಿಂದಲೂ ಇಂತಹ ಟಿಪ್ಪಣೆಗಳು ಬರುತ್ತಿವೆ. ಭಾರತದ ಒಬ್ಬ ಸಚಿವರು ನಿರಂತರವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ರೀತಿಯ ಟಿಪ್ಪಣೆಗಳು ಬರುತ್ತಲೇ ಇರುತ್ತವೆ ಎಂದು ಭಾವಿಸಿ ನಾವು ಸಂಬಂಧಗಳನ್ನು ಬೆಳೆಸಲು ಪ್ರಯತ್ನಿಸುತ್ತಿದ್ದೇವೆ. ಹಾಗಾಗಿ, ಏನೇ ಹೇಳುತ್ತಿದ್ದರೂ, ನಮ್ಮ ಗಮನ ಎರಡೂ ದೇಶಗಳ ನಡುವಿನ ಸಂಬಂಧವನ್ನು ಸುಧಾರಿಸುವತ್ತ ಮಾತ್ರವಿದೆ.
2. ಮಾಜಿ ಪ್ರಧಾನಿ ಶೇಖ ಹಸೀನಾ ಅವರ ಹೇಳಿಕೆಗಳು ಬೆಂಕಿಯಲ್ಲಿ ತುಪ್ಪ ಸುರಿದಂತಿವೆ
ಮಾಜಿ ಪ್ರಧಾನಿ ಶೇಖ ಹಸೀನಾ ಅವರ ಹೇಳಿಕೆಯನ್ನು ಉಲ್ಲೇಖಿಸಿ ತೌಹಿದ ಹುಸೇನ ಮಾತನಾಡುತ್ತಾ, ಭಾರತವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಮ್ಮ ಮಾಜಿ ಪ್ರಧಾನಿ ಬಾಂಗ್ಲಾದೇಶ ಸರಕಾರದವಿರುದ್ಧ ನೀಡಿದ ಹೇಳಿಕೆಗಳು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ನಿಜವಾಗಿಯೂ ಹಾನಿಕಾರಕ ಎಂದು ಹೇಳಿದರು. ಬಾಂಗ್ಲಾದೇಶ ತನ್ನ ಪ್ರದೇಶದಲ್ಲಿ ಅಸ್ಥಿರತೆಯನ್ನು ಎದುರಿಸುತ್ತಿದೆ. ಆದಾಗ್ಯೂ ನಮ್ಮ ಮಾಜಿ ಪ್ರಧಾನಿಯವರ ಭಾಷಣವು ಬೆಂಕಿಗೆ ತುಪ್ಪ ಸುರಿಯುತ್ತಿದೆ ಎಂದು ಸಾಬೀತಾಗಿದೆ. ಇದು ಎಲ್ಲರಿಗೂ ತಿಳಿದಿದೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಭಾರತದ ತುತ್ತಿನ ಮೇಲೆ ಬದುಕುತ್ತಿರುವ ಬಾಂಗ್ಲಾದೇಶಕ್ಕೆ ಅದರ ನಿಜವಾದ ಬೆಲೆ ತೋರಿಸುವ ಧೈರ್ಯವನ್ನು ಭಾರತ ಯಾವಾಗ ಮಾಡುತ್ತದೆ ? |
‘ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದೊಂದಿಗೆ ಭಾರತಕ್ಕೂ ಯಾವುದೇ ಸಂಬಂಧವಿಲ್ಲವಂತೆ!’
ಪ್ರಶ್ನೆಯೊಂದಕ್ಕೆ ಹುಸೇನ್ ಉತ್ತರಿಸುತ್ತಾ, ಡಾ. ಜೈಶಂಕರ ಅವರು ಮತ್ತೊಮ್ಮೆ ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಭದ್ರತೆಯ ಬಗ್ಗೆ ಹೇಳಿಕೆ ನೀಡಿದ್ದಾರೆ. ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತರ ವರದಿಯ ಬಗ್ಗೆ ಭಾರತೀಯ ಮಾಧ್ಯಮಗಳೇ ಜವಾಬ್ದಾರರು. ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯದೊಂದಿಗೆ ಭಾರತಕ್ಕೆ ಯಾವುದೇ ಸಂಬಂಧವಿಲ್ಲ. ಇದು ಬಾಂಗ್ಲಾದೇಶದ ಆಂತರಿಕ ವಿಷಯವಾಗಿದೆ. ಭಾರತದಲ್ಲಿನ ಅಲ್ಪಸಂಖ್ಯಾತ ಸಮಾಜ ಅವರಿಗೆ ಕಳವಳಕಾರಿ ವಿಷಯವಾಗಿದೆ. ಇದರ ಆಧಾರದ ಮೇಲೆ, ನಾವಿಬ್ಬರೂ ಪರಸ್ಪರ ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಅಳವಡಿಸಿಕೊಳ್ಳಬೇಕು. ಬಾಂಗ್ಲಾದೇಶದ ಅಲ್ಪಸಂಖ್ಯಾತ ಸಮುದಾಯಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಾವು ಗಂಭೀರವಾಗಿ ಪರಿಗಣಿಸುತ್ತಿದ್ದೇವೆ, ಎಂದು ಹೇಳಿದರು.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗಳು ಕೇವಲ ರಾಷ್ಟ್ರೀಯ ಸಮಸ್ಯೆಯಲ್ಲ, ಅದು ಧರ್ಮದ ಪ್ರಶ್ನೆಯಾಗಿದೆ; ಏಕೆಂದರೆ ಅವರು ಹಿಂದೂಗಳೆಂದು ದಾಳಿಯಾಗುತ್ತಿದೆ. “ಜಗತ್ತಿನಾದ್ಯಂತ ಎಲ್ಲಿಯಾದರೂ ಹಿಂದೂಗಳ ಮೇಲೆ ಹಿಂದೂ ಎಂದು ದಾಳಿ ನಡೆಯುತ್ತಿದ್ದರೆ, ಭಾರತ ಅದರ ವಿರುದ್ಧ ಧ್ವನಿ ಎತ್ತುತ್ತದೆ!” ಎಂದು ಭಾರತ ದೃಢವಾಗಿ ಹೇಳಬೇಕು! |