ಕರ್ಣಾವತಿಯಲ್ಲಿ ನ (ಗುಜರಾತ್) ಘಟನೆ
ಕರ್ಣಾವತಿ (ಗುಜರಾತ್) – ಫೆಬ್ರವರಿ 23 ರಂದು ನಡೆದ ‘ಚಾಂಪಿಯನ್ಸ್ ಟ್ರೋಫಿ’ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತವು ಪಾಕಿಸ್ತಾನದ ವಿರುದ್ಧ ಗೆದ್ದಿದೆ. ಇಲ್ಲಿನ ಖೋಖರಾ ಪ್ರದೇಶದಲ್ಲಿ ವಿಜಯೋತ್ಸವವನ್ನು ಆಚರಿಸುತ್ತಿದ್ದ ಹಿಂದೂಗಳ ಮೇಲೆ ಮುಸ್ಲಿಮರು ಕಲ್ಲು ತೂರಾಟ ಮಾಡಿದ್ದಾರೆ. ಇಲ್ಲಿನ ಅನುಪಮ ಚಿತ್ರಮಂದಿರದ ಬಳಿ ಹಿಂದೂಗಳು ಪಟಾಕಿ ಸಿಡಿಸಿ, ಘೋಷಣೆಗಳನ್ನು ಕೂಗುತ್ತಾ ಸಂಭ್ರಮಿಸುತ್ತಿದ್ದರು. ಆ ಸಮಯದಲ್ಲಿ ಈ ಘಟನೆ ನಡೆದಿದೆ. ಇದರಲ್ಲಿ 7 ಹಿಂದೂಗಳು ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ತಲೆಗೆ ಗಂಭೀರ ಗಾಯ ಆಗಿವೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆಯ ಸಂದರ್ಭದಲ್ಲಿ ಮೊದಲು ಇಬ್ಬರು ಮುಸ್ಲಿಂ ಬೈಕ್ ಸವಾರರು ಪಟಾಕಿ ಸಿಡಿಸುವ ವಿಚಾರವಾಗಿ ಹಿಂದೂಗಳೊಂದಿಗೆ ವಾಗ್ವಾದ ನಡೆಸಿ ಪರಾರಿಯಾದರು. ಸ್ವಲ್ಪ ಸಮಯದ ನಂತರ, ಅವರು ಮುಸ್ಲಿಮರ ಗುಂಪಿನೊಂದಿಗೆ ಬಂದು ಹಿಂದೂಗಳ ಮೇಲೆ ಕಲ್ಲುತೂರಾಟ ಮಾಡಿ ಓಡಿಹೋದರು. ಘಟನೆಯ ಬಳಿಕ ಪೊಲೀಸರು ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದು, ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ.
ಸಂಪಾದಕೀಯ ನಿಲುವು
|