ಮುರಿದಿರುವ ಸ್ಥಿತಿಯಲ್ಲಿರುವ ‘ಇಂಡಿಗೋ’ ವಿಮಾನದ ಸೀಟುಗಳು !

  • ಪಂಜಾಬಿನ ಭಾಜಪದ ಪ್ರದೇಶಾಧ್ಯಕ್ಷರಾದ ಸುನೀಲ ಜಾಖಡರವರ ಆರೋಪ

  • ಕೇಂದ್ರ ಕೃಷಿಮಂತ್ರಿಗಳಾದ ಶಿವರಾಜ ಸಿಂಹ ಚೌಹಾನರವರೂ ‘ಏರ್ ಇಂಡಿಯಾ’ದ ವಿರುದ್ಧ ದೂರು ನೀಡಿದ್ದರು !

ಮೋಹಾಲಿ (ಪಂಜಾಬ) – ಪಂಜಾಬಿನ ಭಾಜಪದ ಪ್ರದೇಶಾಧ್ಯಕ್ಷರಾದ ಸುನೀಲ ಜಾಖಡರವರು ‘ಇಂಡಿಗೋ ಏರ್ಲೈನ್ಸ್’ ಸೇವೆಯ ಕುರಿತು ಪ್ರಶ್ನೆ ಎತ್ತಿದ್ದಾರೆ, ಅವರ ಚಂದೀಗಡದಿಂದ ದೆಹಲಿಯ ಪ್ರಯಾಣದ ಸಮಯದಲ್ಲಿ ಸೀಟಿನ ಕುಶನ್ ಸಡಿಲಾಗಿರುವುದು ಕಂಡು ಬಂದಿತು. ಇದರಿಂದಾಗಿ ಅವರಿಗೆ ಪ್ರಯಾಣದಲ್ಲಿ ತೊಂದರೆಯಾಯಿತು. ಈ ಬಗ್ಗೆ ‘ಕ್ರೂ ಮೆಂಬರ್ಸ್’ಗೆ (ವಿಮಾನದಲ್ಲಿನ ಸಿಬ್ಬಂದಿಗಳ ಬಳಿ) ದೂರು ನೀಡಿದಾಗ ಅವರು, ಕಂಪನಿಯ ಜಾಲತಾಣಕ್ಕೆ ಹೋಗಿ ಈ ಬಗ್ಗೆ ದೂರು ನೀಡಲು ಹೇಳಿದರು. (ಈ ರೀತಿ ಅಸಂವೇದನಾಶೀಲ ಮತ್ತು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದಿರುವ ಸಿಬ್ಬಂದಿಗಳ ಮೇಲೆ ಕ್ರಮ ಕೈಗೊಳ್ಳಬೇಕು ! – ಸಂಪಾದಕರು ) ಪ್ರಮುಖ ವಿಮಾನ ಕಂಪನಿಯ ಈ `ನಡೆಯುತ್ತದೆ’ ಎಂಬ ದೃಷ್ಟಿಕೋನ ಸುರಕ್ಷಾ ನಿಯಮಗಳ ವಿರುದ್ಧವಾಗಿದೆ, ಇದರ ಕಡೆಗೆ `ನಾಗರಿ ಉಡ್ಡಯನ ಮಹಾಸಂಚಾಲನಾಲಯ’ವು ಗಮನಹರಿಸಬೇಕು. ಜಾಖಡರವರು ಎಕ್ಸ್ ನಲ್ಲಿ ಈ ಘಟನೆಯ ಮಾಹಿತಿ ನೀಡಿದರು.
ಶಿವರಾಜ ಸಿಂಹರವರ ದೂರಿನ ನಂತರ ಕೇಂದ್ರ ನಾಗರಿ ವಿಮಾನ ಸಾರಿಗೆ ಸಚಿವ ರಾಮಮೋಹನ ನಾಯ್ಡುರವರು ನಾಗರಿ ವಿಮಾನ ಸಾರಿಗೆ ಮಹಾಸಂಚಲನಾಲಯಕ್ಕೆ ಪ್ರಕರಣದ ತನಿಖೆ ನಡೆಸಿ, ತಕ್ಷಣ ಸುಧಾರಣಾತ್ಮಕ ಉಪಾಯಯೋಜನೆ ತಿಳಿಸಲು ಆದೇಶ ನೀಡಿದ್ದರು.

ಜಾಖಡರವರು ಮುಂದುವರಿದು,

೧. ಕೇಂದ್ರ ಕೃಷಿ ಮಂತ್ರಿಗಳಾದ ಶಿವರಾಜ ಸಿಂಹ ಚೌಹಾನರವರೂ ‘ಏರ್ ಇಂಡಿಯಾದ’ ಸೌಲಭ್ಯಗಳ ಬಗ್ಗೆ ಪ್ರಶ್ನಿಸಿದ್ದರು. ಚೌಹಾನರವರಿಗೆ ವಿಮಾನದಲ್ಲಿ ಮುರಿದಿರುವ ಸೀಟಿನಲ್ಲಿ ಪ್ರಯಾಣ ಮಾಡಬೇಕಾಯಿತು.

೨. ಜಾಖರವರು, ಜನವರಿ ೨೭ ರಂದು ‘ಚಂದೀಗಡ-ದಿಲ್ಲಿ ವಿಮಾನ’ದ ಕೆಲವು ಛಾಯಾಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.

ಸಂಪದಕೀಯ ನಿಲುವು

ಅಧಿಕಾರದಲ್ಲಿರುವ ಪಕ್ಷದ ಕೇಂದ್ರ ಮಂತ್ರಿಗಳು, ಹಾಗೂ ಒಂದು ಪಕ್ಷದ ಪ್ರದೇಶಾಧ್ಯಕ್ಷರಿಗೆ ಇಂತಹ ತೊಂದರೆಗಳನ್ನು ಸಹಿಸಬೇಕಾಗುತ್ತಿದ್ದರೆ ಸಾಮಾನ್ಯ ಪ್ರಯಾಣಿಕರ ಪಾಡು ಏನಿರಬಹುದು ಎಂಬುದರ ಬಗ್ಗೆ ಯೋಚಿಸದಿರುವುದೇ ಒಳಿತು !