ಫ್ರಾನ್ಸ್‌ನಲ್ಲಿ ರಷ್ಯಾ ರಾಯಭಾರಿ ಕಚೇರಿಯಲ್ಲಿ ಬಾಂಬ್ ಸ್ಫೋಟ

ಪ್ಯಾರಿಸ್ (ಫ್ರಾನ್ಸ್) – ಫ್ರಾನ್ಸ್‌ನ ಅವೆನ್ಯೂ ಆಂಬ್ರೋಯಿಸ್-ಪ್ಯಾರೆಯಲ್ಲಿರುವ ರಷ್ಯಾದ ವಾಣಿಜ್ಯ ರಾಯಭಾರಿ ಕಚೇರಿಯೊಳಗೆ ಬಾಂಬ್ ಸ್ಫೋಟ ಸಂಭವಿಸಿದೆ. ಅಪರಿಚಿತ ದುಷ್ಕರ್ಮಿಗಳು ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ 2 ಪೆಟ್ರೋಲ್ ಬಾಂಬ್‌ಗಳನ್ನು ಎಸೆದಿದ್ದಾರೆ. ಇದನ್ನು ಇಲ್ಲಿ ‘ಮೊಲೊಟೊವ್ ಕಾಕ್ಟೈಲ್’ ಎಂದೂ ಕರೆಯುತ್ತಾರೆ. ಈ ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.