ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿಯವರಿಂದ ಕಮ್ಯುನಿಸ್ಟ್ ಪಕ್ಷಗಳ ಮೇಲೆ ಟೀಕಾಸ್ತ್ರ!
ರೋಮ (ಇಟಲಿ) – 90 ರ ದಶಕದಲ್ಲಿ ಬಿಲ್ ಕ್ಲಿಂಟನ್ (ಅಮೇರಿಕದ ಆಗಿನ ಅಧ್ಯಕ್ಷರು) ಮತ್ತು ಟೋನಿ ಬ್ಲೇರ್ (ಬ್ರಿಟನ್ನಿನ ಆಗಿನ ಪ್ರಧಾನಿ) ಇವರು ಜಾಗತಿಕ ಎಡ (ಕಮ್ಯುನಿಸ್ಟ್) ಸಿದ್ಧಾಂತದ ಜಾಲವನ್ನು ರಚಿಸಿದಾಗ, ಅವರನ್ನು ‘ರಾಜಕಾರಣಿಗಳು’ ಎಂದು ಕರೆಯಲಾಯಿತು. ಇಂದು, ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅರ್ಜೆಂಟೀನಾ ಅಧ್ಯಕ್ಷ ಜೇವಿಯರ್ ಮಾಯಲಿ, ನಾನು ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಮಾತನಾಡುವಾಗ, ನಮ್ಮನ್ನು ‘ಪ್ರಜಾಪ್ರಭುತ್ವಕ್ಕೆ ಅಪಾಯ’ ಎಂದು ಕರೆಯುತ್ತಾರೆ’, ಎಂದು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಎಡಪಂಥೀಯ ಸಿದ್ಧಾಂತವನ್ನು ಟೀಕಿಸಿದರು. ಅವರು ಅಮೇರಿಕದಲ್ಲಿ ನಡೆದ ‘ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್’ ಅನ್ನು ಆನ್ಲೈನ್ನಲ್ಲಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಸಂಪ್ರದಾಯವಾದಿಗಳು ಗೆಲ್ಲುತ್ತಿದ್ದಾರೆ!
ಪ್ರಧಾನಿ ಮೆಲೋನಿ ಮಾತನಾಡುತ್ತಾ, ಇದು ಎಡಪಂಥೀಯರ ದ್ವಂದ್ವ ನೀತಿಯ ಮಾನದಂಡವಾಗಿದೆ; ಆದರೆ ನಾವು ಅದಕ್ಕೆ ಒಗ್ಗಿಕೊಂಡಿದ್ದೇವೆ. ಒಳ್ಳೆಯ ಸುದ್ದಿ ಏನೆಂದರೆ, ಅವರು ನಮ್ಮ ಮೇಲೆ ಎಷ್ಟೇ ಕೆಸರು ಎರಚಿದರೂ, ಜನರು ಈಗ ಅವರ ಸುಳ್ಳು ವಿಷಯಗಳನ್ನು ನಂಬುವುದಿಲ್ಲ. ನಾಗರಿಕರು ನಮಗೆ ಮತ ಹಾಕುತ್ತಲೇ ಇರುತ್ತಾರೆ. ಸಂಪ್ರದಾಯವಾದಿಗಳು ಬೆಳೆಯುತ್ತಲೇ ಇದ್ದಾರೆ ಮತ್ತು ಯುರೋಪಿಯನ್ ರಾಜಕೀಯದಲ್ಲಿ ಹೆಚ್ಚು ಪ್ರಭಾವಶಾಲಿಯಾಗುತ್ತಿದ್ದಾರೆ; ಆದ್ದರಿಂದಲೇ ಎಡಪಂಥೀಯರು ಹೆದರಿದ್ದಾರೆ. ಟ್ರಂಪ್ ಅವರ ಗೆಲುವಿನಿಂದಾಗಿ, ಅವರ ಕಿರಿಕಿರಿ ಉನ್ಮಾದದಲ್ಲಿ ಬದಲಾಗಿದೆ. ಕೇವಲ ಸಂಪ್ರದಾಯವಾದಿಗಳು ಗೆಲ್ಲುತ್ತಿದ್ದಾರೆ ಎಂಬ ಕಾರಣಕ್ಕಾಗಿ ಅಲ್ಲ, ಬದಲಾಗಿ ಸಂಪ್ರದಾಯವಾದಿಗಳು ಈಗ ಜಾಗತಿಕ ಮಟ್ಟದಲ್ಲಿ ಸಹಕರಿಸುತ್ತಿದ್ದಾರೆ’, ಎಂದು ಹೇಳಿದರು.
ಈ ಪರಿಷತ್ತನ್ನು ಉದ್ದೇಶಿಸಿ ಮಾತನಾಡಿದ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ನಾವು ಮುಂದಿನ ಪೀಳಿಗೆಗಾಗಿ ಅಮೇರಿಕಾದ ರಾಜಕೀಯವನ್ನು ಮುನ್ನಡೆಸುವ ಒಂದು ಹೊಸ ಮತ್ತು ಶಾಶ್ವತವಾದ ರಾಜಕೀಯ ಬಹುಮತವನ್ನು ರಚಿಸಲಿದ್ದೇವೆ’, ಎಂದು ಹೇಳಿದರು.
ಸಂಪಾದಕೀಯ ನಿಲುವು‘ಕಮ್ಯುನಿಸಂ ಎಂದರೆ ರಾಕ್ಷಸಿ ಮನಸ್ಥಿತಿ’, ಎಂದೇ ಹೇಳಬೇಕಾಗುತ್ತದೆ. ಸಾಮ್ಯವಾದಿಗಳು ಜಗತ್ತಿನಲ್ಲಿ ಲೆಕ್ಕವಿಲ್ಲದಷ್ಟು ಹತ್ಯಾಕಾಂಡಗಳನ್ನು ಮಾಡಿದ್ದಾರೆ. ಇಂತಹ ಸರ್ವಾಧಿಕಾರಿ ಕಮ್ಯುನಿಸ್ಟ್ ಪ್ರಪಂಚದಿಂದ ನಿರ್ಮೂಲನವಾದಾಗ ಮಾತ್ರ ಶಾಂತಿ ನಿರ್ಮಾಣವಾಗುವುದು! |