ಕರಾಚಿಯ ಕಾಲೇಜಿನಲ್ಲಿ ಹೋಳಿ ಆಟ; ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಅಪರಾಧ ದಾಖಲು

ವಿಶ್ವವಿದ್ಯಾಲಯ ಶೋಕಾಸ್ ನೋಟಿಸ್ ನೀಡಿ ಪ್ರವೇಶ ನಿಷೇಧ

ಕರಾಚಿ (ಪಾಕಿಸ್ತಾನ) – ಇಲ್ಲಿನ ದಾವೂದ ಎಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಾಲೇಜಿನಲ್ಲಿ ಹೋಳಿ ಆಡಿದ್ದಕ್ಕಾಗಿ ಹಿಂದೂ ಮತ್ತು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಫೆಬ್ರವರಿ 21 ರಂದು, ಎರಡೂ ಧರ್ಮಗಳ ಕೆಲವು ವಿದ್ಯಾರ್ಥಿಗಳು ಕಾಲೇಜಿನ ಪರಿಸರದಲ್ಲಿ ಹೋಳಿ ಹಬ್ಬವನ್ನು ಆಚರಿಸಿದರು. ಇದಾದ ನಂತರ, ಕಾಲೇಜಿನ ಆಡಳಿತವು ಈ ವಿದ್ಯಾರ್ಥಿಗಳಿಗೆ ಶೋಕಾಸ್ ನೋಟಿಸ್ ನೀಡಿ ಆವರಣಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿತು. ಈ ವಿದ್ಯಾರ್ಥಿಗಳಿಗೆ ಫೆಬ್ರವರಿ 24 ರಂದು ತಮ್ಮ ಪೋಷಕರೊಂದಿಗೆ ಕಾಲೇಜಿಗೆ ಬರಲು ತಿಳಿಸಲಾಗಿದೆ. ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಹೊರಹಾಕುವ ಎಚ್ಚರಿಕೆ ನೀಡಲಾಗಿದೆ.

ಇದಕ್ಕೂ ಮೊದಲು, ಮಾರ್ಚ್ 2023 ರಲ್ಲಿ, ಲಾಹೋರನ ಪಂಜಾಬ ವಿಶ್ವವಿದ್ಯಾಲಯದಲ್ಲಿ ಹೋಳಿ ಆಡುತ್ತಿದ್ದ ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಲಾಗಿತ್ತು. ಹೋಳಿ ಆಡಲು ಪಿಯು ಕಾನೂನು ಕಾಲೇಜಿನಲ್ಲಿ ಸುಮಾರು 30 ವಿದ್ಯಾರ್ಥಿಗಳು ಜಮಾಯಿಸಿದ್ದರು. ಇದಕ್ಕಾಗಿ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯಿಂದ ಅನುಮತಿಯನ್ನೂ ಪಡೆದಿದ್ದರು. ನಂತರ, ಕಟ್ಟರವಾಅದಿ ಇಸ್ಲಾಮಿಕ ವಿದ್ಯಾರ್ಥಿ ಸಂಘಟನೆಯಾದ ಇಸ್ಲಾಮಿ ಜಮಿಯತ್ ತುಲಾಬಾದ ಸದಸ್ಯರು ಹಿಂದೂ ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದ್ದರು. ಘಟನೆಯ ನಂತರ, ವಿಶ್ವವಿದ್ಯಾಲಯದ ವಕ್ತಾರ ಖುರ್ರಂ ಶಹಜಾದ್ ಮಾತನಾಡಿ, ಆಡಳಿತವು ವಿದ್ಯಾರ್ಥಿಗಳಿಗೆ ಕಾಲೇಜು ಪರಿಸರದಲ್ಲಿ ಹೋಳಿ ಆಚರಿಸದೇ ಒಳಗೆ ಆಚರಿಸಲು ಹೇಳಲಾಗಿತ್ತು’, ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

ಭಾರತದ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು ಮತ್ತು ಅಲ್ಲಿ ವಾಸಿಸುವ ಹಿಂದೂಗಳ ಸ್ಥಿತಿ ಶೋಚನೀಯವಾಯಿತು. ಆದರೆ ಭಾರತದಲ್ಲಿ ವಾಸಿಸುವ ಮತಾಂಧ ಮುಸ್ಲಿಮರು ಹಿಂದೂಗಳ ಮೇಲೆ ಭಾರವಾಗಿದ್ದಾರೆ ಎನ್ನುವುದನ್ನು ಗಮನಿಸಬೇಕಾಗಿದೆ!