ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿ ಜನವರಿ ೧೩ ರಿಂದ ಆರಂಭವಾಗಿರುವ ಮಹಾಕುಂಭದಲ್ಲಿ ಇಲ್ಲಿಯವರೆಗೆ ೩ ಲಕ್ಷ ಕೋಟಿ ರೂಪಾಯಿ ವಹಿವಾಟು ಆಗಿದೆ ಎಂದು ಭಾರತೀಯ ವ್ಯಾಪಾರಿ ಉದ್ಯೋಗ ಮಹಾಸಂಘ ಮಾಹಿತಿ ನೀಡಿದೆ. ಮಹಾಸಂಘ ಇದನ್ನು ಇಂದಿನವರೆಗಿನ ದಾಖಲೆ ಎಂದು ದಾವೆ ಕೂಡ ಮಾಡಿದೆ.

ಮಹಾಸಂಘದ ಕಾರ್ಯದರ್ಶಿ ಇರುವ ಭಾಜಪದ ಸಂಸದ ಪ್ರವೀಣ್ ಖಂಡೇಲವಾಲ್ ಇವರು, ಮಹಾಕುಂಭದಲ್ಲಿ ಧಾರ್ಮಿಕ ಪ್ರವಾಸೋದ್ಯಮದ ಜೊತೆಗೆ ಉದ್ಯೋಗ ವೃದ್ಧಿ ಕೂಡ ಆಗಿದೆ. ಇದರ ಪ್ರಯುಕ್ತ ಶ್ರದ್ದೆ ಮತ್ತು ಆರ್ಥಿಕ ವಿಕಾಸ ಇದರ ಉತ್ತಮ ಸಂಗಮವಾಗಿದೆ. ಪ್ರಾರಂಭದಲ್ಲಿ ೪೦ ಕೋಟಿ ಭಕ್ತರು ಮತ್ತು ೨ ಲಕ್ಷ ಕೋಟಿ ರೂಪಾಯಿ ವಹಿವಾಟು ಆಗುವುದೆಂದು, ಅಂದಾಜಿಸಲಾಗಿತ್ತು; ಆದರೆ ಈಗ ಭಕ್ತರ ಸಂಖ್ಯೆ ೬೦ ಕೋಟಿ ದಾಟಿರುವುದರಿಂದ ಆರ್ಥಿಕ ವ್ಯವಹಾರ ಕೂಡ ೩ ಲಕ್ಷ ಕೋಟಿ ರೂಪಾಯಿಗೆ ತಲುಪಿದೆ. ಕೇವಲ ಪ್ರಯಾಗರಾಜ ಅಷ್ಟೇ ಅಲ್ಲದೆ, ವಾರಾಣಸಿ ಮತ್ತು ಅಯೋಧ್ಯೆ ಇಲ್ಲಿ ಕೂಡ ಭಕ್ತರು ಭೇಟಿ ನೀಡುತ್ತಿದ್ದಾರೆ. ಆದ್ದರಿಂದ ಈ ನಗರಗಳಲ್ಲಿ ಹೋಟೆಲ್ ಸಹಿತ ಸಂಬಂಧಿತ ಸೇವಾ ಕ್ಷೇತ್ರದಲ್ಲಿ ಭಾರಿ ಲಾಭವಾಗಿದೆ. ಉತ್ತರ ಪ್ರದೇಶದಲ್ಲಿ ಎಲ್ಲೆಡೆ ಕೂಡ ಮಹಾಕುಂಭದ ಲಾಭವಾಗಿದೆ.
ಏಳೂವರೆ ಸಾವಿರ ಕೋಟಿ ರೂಪಾಯಿಯ ಬಂಡವಾಳ ಹೂಡಿಕೆ
ಮಹಾಕುಂಭ ನಿರ್ವಿಘ್ನವಾಗಿ ನೆರವೇರಲು ಉತ್ತರಪ್ರದೇಶ ಸರಕಾರವು ಸುಮಾರು ಏಳುವರೆ ಸಾವಿರ ಕೋಟಿ ರೂಪಾಯಿ ಹೂಡಿಕೆ ಮಾಡಿತ್ತು. ರಸ್ತೆ, ತಾತ್ಕಾಲಿಕ ಸೇತುವೆ ಹಾಗೂ ಸುರಂಗ ಮಾರ್ಗ (ನೆಲೆಮಾರ್ಗಗಳು) ಕಟ್ಟಲಾಗಿದ್ದವು. ಒಂದುವರೆ ಸಾವಿರ ಕೋಟಿ ರೂಪಾಯಿ ಹಣ ಮೂಲಭೂತ ಸೌಕರ್ಯಕ್ಕಾಗಿ ಖರ್ಚು ಮಾಡಲಾಗಿತ್ತು.
ಸಂಪಾದಕೀಯ ನಿಲುವು
|