ಭಯೋತ್ಪಾದಕರನ್ನು ಬೆಳೆಸುವವರೇ ಭಯೋತ್ಪಾದನೆ ವಿರುದ್ಧ ಹೋರಾಡುತ್ತೇವೆ ಎಂದು ಹೇಳುತ್ತದೆ, ಇದು ದೊಡ್ಡ ವಿನೋದ ! – ಭಾರತದ ಸ್ಥಾಯಿ ಸದಸ್ಯ ಪರವಾಥನೇನಿ ಹರೀಶ

ವಿಶ್ವ ಸಂಸ್ಥೆ ಭದ್ರತಾ ಸಭೆಯಲ್ಲಿ ಭಾರತದಿಂದ ಪಾಕಿಸ್ತಾನಕ್ಕೆ ಮತ್ತೊಮ್ಮೆ ಕಪಾಳಮೋಕ್ಷ !

ನ್ಯೂಯಾರ್ಕ್ (ಅಮೇರಿಕಾ) – ವಿಶ್ವ ಸಂಸ್ಥೆ ನಿಷೇಧಿಸಿರುವ ೨೦ ಕ್ಕಿಂತಲೂ ಹೆಚ್ಚಿನ ಭಯೋತ್ಪಾದಕ ಸಂಘಟನೆಗಳು ಪಾಕಿಸ್ತಾನದಲ್ಲಿ ಇವೆ, ಹೀಗಿದ್ದರೂ ಕೂಡ ಯಾವಾಗ ಪಾಕಿಸ್ತಾನ ತನ್ನನ್ನು ‘ಭಯೋತ್ಪಾದನೆಯ ವಿರುದ್ಧ ಹೋರಾಡುವ ದೇಶ’ ಎನ್ನುತ್ತದೆ, ಆಗ ಅದು ಎಲ್ಲಕ್ಕಿಂತ ದೊಡ್ಡ ವಿನೋದವಾಗಿರುತ್ತದೆ. ಭಾರತವೇ ಪಾಕಿಸ್ತಾನ ಪೋಷಿತ ಭಯೋತ್ಪಾದನೆಗೆ ಬಲಿಯಾಗಿದೆ. ಪಾಕಿಸ್ತಾನಿ ನೆಲದಿಂದ ಕಾರ್ಯನಿರತ ಇರುವ ಜೈಶ್-ಏ-ಮಹಮ್ಮದ್ ಅಂತಹ ಭಯೋತ್ಪಾದಕ ಸಂಘಟನೆಗಳು ಭಾರತದ ಮೇಲೆ ಅನೇಕ ಭಯೋತ್ಪಾದಕ ದಾಳಿಗಳು ನಡೆಸಿವೆ, ಎಂದು ಭಾರತ ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಭದ್ರತಾ ಸಭೆಯಲ್ಲಿ ತಪರಾಕಿ ನೀಡಿತು. ಭಾರತದ ಸ್ಥಾಯಿ ಸದಸ್ಯ ಪರವಾಥನೇನಿ ಹರೀಶ ಇವರು ‘ಭಯೋತ್ಪಾದನೆಯ ಜಾಗತೀಕ ಕೇಂದ್ರ’ ಎಂದು ಪಾಕಿಸ್ತಾನವನ್ನು ವರ್ಣಿಸಿದರು. ಪಾಕಿಸ್ತಾನದ ಉಪ ಪ್ರಧಾನಮಂತ್ರಿ ಆಗಿರುವ ವಿದೇಶಾಂಗ ಸಚಿವ ಮಹಮ್ಮದ್ ಇಶಾಕ ದಾರ್ ಇವರು ವಿಶ್ವ ಸಂಸ್ಥೆ ಸುರಕ್ಷಾ ಸಭೆಯಲ್ಲಿ ಜಮ್ಮು ಕಾಶ್ಮೀರದ ಅಂಶ ಉಪಸ್ಥಿತಗೊಳಿಸಿದ ನಂತರ ಭಾರತದಿಂದ ಅದಕ್ಕೆ ಪ್ರತ್ಯುತ್ತರ ನೀಡಲಾಯಿತು.

ಭಾರತದ ರಾಯಭಾರಿ ಪಿ. ಹರೀಶ್ ಇವರು,

೧. ಭಯೋತ್ಪಾದಕರ ಯಾವುದೇ ಕಾರಣ ಅಥವಾ ಉದ್ದೇಶ ಸ್ವೀಕರಿಸಲಾಗದು. ಅಮಾಯಕ ಜನರ ಮೇಲೆ ನಡೆಯುವ ದಾಳಿ ಯಾವುದೇ ರೀತಿಯಲ್ಲಿ ಬೆಂಬಲಿಸಲು ಸಾಧ್ಯವಿಲ್ಲ. ಪಾಕಿಸ್ತಾನ ಸುಳ್ಳುತನ ಮತ್ತು ತಪ್ಪಾದ ಮಾಹಿತಿ ಪ್ರಸಾರ ಮಾಡುವ ಪ್ರಯತ್ನ ಮಾಡುತ್ತದೆ; ಆದರೆ ಅದರಿಂದ ಸತ್ಯ ಬದಲಾಗದು.

೨. ಜೈಶ್-ಏ-ಮಹಮ್ಮದ್ ಮತ್ತು ಹೀಜಬುಲ್ ಮುಜಾಹಿದಿನ್ ಇಂತಹ ಭಯೋತ್ಪಾದಕ ಸಂಘಟನೆಗಳು ಭಾರತದ ಮೇಲೆ ಅನೇಕ ದಾಳಿಗಳು ಮಾಡಿದೆ. ಪಾಕಿಸ್ತಾನ ಅವರನ್ನು ಗಡಿಯಾಚೆಯಿಂದ ಬೆಂಬಲ ನೀಡುತ್ತದೆ, ಅದರಿಂದ ಭಾರತದಲ್ಲಿ ಹಿಂಸಾಚಾರ ಪಸರಿಸುತ್ತದೆ.

೩. ಪಾಕಿಸ್ತಾನದಲ್ಲಿನ ಅನೇಕ ಭಯೋತ್ಪಾದಕ ಸಂಘಟನೆ ಮತ್ತು ವ್ಯಕ್ತಿ ವಿಶ್ವ ಸಂಸ್ಥೆಯ ಭದ್ರತಾ ಸಭೆಯಲ್ಲಿನ ನಿಷೇಧಿತ ಸಮಿತಿಯ ಪಟ್ಟಿಯಲ್ಲಿ ಇದೆ, ಅದರಲ್ಲಿ ಸ್ವತ್ತುಗಳ ಘನೀಕರಣ, ಶಸ್ತ್ರಾಸ್ತ್ರ ಪೂರೈಕೆ ನಿಷೇಧ ಮತ್ತು ಪ್ರವಾಸ ನಿಷೇಧ ಜಾರಿ ಇದೆ.

೪. ಜಮ್ಮು-ಕಾಶ್ಮೀರದಲ್ಲಿ ಪ್ರಜಾಪ್ರಭುತ್ವ ಸದೃಢ ಮತ್ತು ಚೈತನ್ಯಶೀಲವಾಗಿ ಇದೆ ಆದರೆ ಪಾಕಿಸ್ತಾನದಲ್ಲಿ ಹಾಗೆ ಇಲ್ಲ. ಪ್ರತ್ಯಕ್ಷದಲ್ಲಿ ಪಾಕಿಸ್ತಾನ ಸ್ವತಃ ಜಮ್ಮು-ಕಾಶ್ಮೀರದ ಕೆಲವು ಪ್ರದೇಶದ ಮೇಲೆ ಅಕ್ರಮವಾಗಿ ಹಿಡಿತ ಇಟ್ಟುಕೊಂಡಿದೆ ಮತ್ತು ಅಲ್ಲಿಯ ಪರಿಸ್ಥಿತಿ ಹದಗೆಟ್ಟಿದೆ.

ಸಂಪಾದಕೀಯ ನಿಲುವು

ಭಾರತವು ಪಾಕಿಸ್ತಾನಕ್ಕೆ ಶಬ್ದಗಳ ಮೂಲಕ ಎಷ್ಟೇ ಟೀಕಿಸಿದರೂ, ಅದರ ಡೊಂಕಾಗಿರುವ ಬಾಲ ಡೊಂಕೆ ಇರುತ್ತದೆ. ಅದಕ್ಕೆ ಶಬ್ದದಿಂದ ಅಲ್ಲ, ಶಸ್ತ್ರದ ಭಾಷೆ ತಿಳಿಯುತ್ತದೆ ಮತ್ತು ಅದನ್ನು ತಿಳಿಸುವ ಧೈರ್ಯ ಭಾರತ ತೋರಿಸುತ್ತಿಲ್ಲ, ಇದೇ ಭಾರತೀಯರ ದೌರ್ಭಾಗ್ಯ !