ಜಾರ್ಖಂಡ್‌ನಲ್ಲಿ ಬಾಂಗ್ಲಾದೇಶದ ಭಯೋತ್ಪಾದಕರಿಂದ ಮುಸ್ಲಿಮರಿಗೆ ತರಬೇತಿ

ರಾಂಚಿ (ಜಾರ್ಖಂಡ) – ಬಾಂಗ್ಲಾದೇಶದ ಕೆಲವು ಭಯೋತ್ಪಾದಕರು ಜಾರ್ಖಂಡನಲ್ಲಿ ನುಸುಳಿದ್ದರು. ಅವರು ರಾಜ್ಯದ ಪಾಕೂರನಲ್ಲಿ ಕೆಲವು ಮುಸ್ಲಿಮರಿಗೆ ತರಬೇತಿ ನೀಡಿದ ನಂತರ, ಹಿಂತಿರುಗಿದರು. ಈ ಘಟನೆಯು ದೊಡ್ಡ ಸಂಚಿನ ಭಾಗವಾಗಿದೆ ಎಂದು ಹೇಳಲಾಗುತ್ತಿದೆ. ಜಾರ್ಖಂಡ್‌ನ ಭಯೋತ್ಪಾದನಾ ನಿಗ್ರಹ ದಳಕ್ಕೆ ಈ ಮಾಹಿತಿ ಸಿಕ್ಕಿದೆ. ಈ ಕಾರಣದಿಂದಾಗಿ, ರಾಜ್ಯದಲ್ಲಿ ಜಾಗರೂಕರಾಗಿರುವಂತೆ ಆದೇಶಿಸಲಾಗಿದೆ.

1. ಶೇಖ್ ಹಸೀನಾ ಸರಕಾರದ ಪತನದ ನಂತರ ನಿಷೇಧಿತ ಸಂಘಟನೆಗಳು ಬಾಂಗ್ಲಾದೇಶದಲ್ಲಿ ಭಾರತ ವಿರೋಧಿ ಚಟುವಟಿಕೆಗಳನ್ನು ರೂಪಿಸುತ್ತಿವೆ ಎಂದು ಹೇಳಲಾಗುತ್ತಿದೆ. ಈ ಪಿತೂರಿಯಡಿಯಲ್ಲಿ, ಬಾಂಗ್ಲಾದೇಶದ ಭಯೋತ್ಪಾದಕರು ಭಾರತ ವಿರೋಧಿ ಚಟುವಟಿಕೆಗಳನ್ನು ನಡೆಸಲು ಭಾರತದಲ್ಲಿ ನುಗ್ಗುತ್ತಿದ್ದಾರೆ.

2. ‘ಜಮಾತ್-ಉಲ್-ಮುಜಾಹಿದ್ದೀನ್ ಬಾಂಗ್ಲಾದೇಶ’ (ಜೆ.ಎಂ.ಬಿ.ಯ) ಭಯೋತ್ಪಾದಕ ಅಬ್ದುಲ್ ಮಮ್ಮನ್ ಬಾಂಗ್ಲಾದೇಶದಿಂದ ಗಡಿ ದಾಟಿ ಭಾರತವನ್ನು ಪ್ರವೇಶಿಸಿದ್ದನು. ಅವನು ಮುರ್ಷಿದಾಬಾದ್‌ನ ಧುಲಿಯಾನ ಮೂಲಕ ಪಾಕುರ ತಲುಪಿದ್ದನು.

3. ಜನವರಿ 6 ರಂದು ಅವನು ಅಕ್ರಮವಾಗಿ ಗಡಿ ದಾಟಿ ಪಾಕುರ ತಲುಪಿದನು. ಅಲ್ಲಿನ ದುಬರಾಜಪುರದಲ್ಲಿನ ‘ಇಸ್ಲಾಮಿಕ್ ದವಾ ಕೇಂದ್ರ’ದಲ್ಲಿ ಜಹಾ-ಇಂಡಿಯಾ ಮತ್ತು ಜೆ.ಎಂ.ಬಿ. ಭಯೋತ್ಪಾದಕರ ನಡುವೆ ಒಂದು ಸಭೆ ನಡೆದಿದೆ. ಇದರಲ್ಲಿ ಜೆ.ಎಂ.ಬಿ.ಯ ಭಯೋತ್ಪಾದಕ ಅಬ್ದುಲ ಮಮ್ಮನ ಭಾಗವಹಿಸಿದ್ದನು.

4. ಪಾಕೂರನಲ್ಲಿ ತರಬೇತಿ ಪಡೆದ ಎಲ್ಲಾ 15 ಜನರ ಹೆಸರುಗಳು ಸಿಕ್ಕಿದೆ. ಭಯೋತ್ಪಾದನಾ ನಿಗ್ರಹ ದಳದ ಪ್ರಕಾರ, ಮುರ್ಷಿದಾಬಾದನ ಜಲಂಗಿಯ ಅನೇಕ ಜನರೂ ಸಭೆಯಲ್ಲಿ ಹಾಜರಿದ್ದರು.

5. ಸಂತಲ್ ಪರಗಣಾ ಪ್ರದೇಶದ ಸಾಹಿಬಗಂಜ ಮತ್ತು ಪಾಕೂರನಲ್ಲಿ ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ಜೆ.ಎಂ.ಬಿ. ಸಕ್ರಿಯವಾಗಿದೆ. ಅವರು ಈ ಸಂಘಟನೆಯೊಂದಿಗೆ ಸಂಬಂಧ ಹೊಂದಿರುವ ಶಂಕಿತರು ಮತ್ತು ಭೂಗತ ಕಾರ್ಯಕರ್ತರ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದರು.

ಸಂಪಾದಕೀಯ ನಿಲುವು

  • ಇಂತಹ ಭಯೋತ್ಪಾದಕರು ಭಾರತದಲ್ಲಿ ನುಗ್ಗಿ ಮುಸ್ಲಿಮರಿಗೆ ತರಬೇತಿ ನೀಡಿ ಹಿಂತಿರುಗುತ್ತಾರೆ, ಇದು ಭಾರತೀಯ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳಿಗೆ ನಾಚಿಕೆಗೇಡಿನ ಸಂಗತಿ!
  • ಬಾಂಗ್ಲಾದೇಶದ ಸಮಸ್ಯೆ ಬಾಂಗ್ಲಾದೇಶದ ಹಿಂದೂಗಳಿಗೆ ಮಾತ್ರವಲ್ಲ, ಭಾರತಕ್ಕೂ ಎಷ್ಟು ಅಪಾಯಕಾರಿಯಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗಿರುವಾಗ, ಭಾರತ ನಿಷ್ಕ್ರಿಯವಾಗಿ ಉಳಿಯುವುದು ಅಪೇಕ್ಷಿತವಲ್ಲ !